
ಸೋಮವಾರಪೇಟೆ : ಕೊಡ್ಲಿಪೇಟೆಯ ಶ್ರೀ ಚೌಡೇಶ್ವರಿ ದೇವಾಲಯ ಆವರಣದಲ್ಲಿ ನಡೆದ ಸಂಘಟನೆಯ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿಗಳು ರಾಜ್ಯ ಸಂಚಾಲಕರು ಶ್ರೀಮತಿ ದೀಪಾ ಪೂಜಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀಮತಿ ಕವಿತಾ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಸಂಘಟಕ, ಹೋರಾಟಗಾರ ವಸಂತ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರವೇ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಗೋವಿಂದರಾಜ ದಾಸ್ ಮಾತನಾಡಿ ಕರವೇ ಶಿಸ್ತು ಹಾಗೂ ಪಾಲಿಸಬೇಕಾದ ನಿಯಮಾವಳಿಗಳು , ಕಾರ್ಯಕರ್ತರು ನಾಡು. ನುಡಿ ,ಜಲರಕ್ಷಣೆ ಹಾಗೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಹೋರಾಟಕ್ಕೆ ಸಿದ್ದರಿರಲು ಕಿವಿಮಾತುಗಳನ್ನು ಹೇಳಿದರು.
ಸಂಘಟನೆ ಪರವಾಗಿ ಜಿಲ್ಲಾ ಮಹಿಳಾ ಅಧ್ಯಕ್ಷರು ಶ್ರೀಮತಿ ಜ್ಯೋತಿ ಕುಡುಪಜೆ, ಕುಶಾಲನಗರ ತಾಲೋಕು ಅಧ್ಯಕ್ಷ ಬಿ. ಜೆ. ಅಣ್ಣಯ್ಯ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಮತಿ ದೀಪಾ ಪೂಜಾರಿಯವರು ಕೊಡ್ಲಿಪೇಟೆಯಲ್ಲಿ ಕರವೇ ಹೋಬಳಿ ಘಟಕ ಆಸ್ತಿತ್ವಕ್ಕೆ ಬಂದಿದ್ದು ನನಗೆ ಹರ್ಷ ತಂದಿದೆ. ಅದರಲ್ಲಿ ನೀವು ಸ್ಥಳೀಯ ಸಮಸ್ಯೆಗಳಿಗೆ ಹೋರಾಡಿ ನಾಗರಿಕರಿಗೆ ನೆಮ್ಮದಿ ಹಾಗೂ ಶಾಂತಿ ಬಧುಕನ್ನು ಕಟ್ಟಿಕೊಡಬೇಕು, ಅಣ್ಣಾ ನಾರಾಯಣ ಗೌಡರ “ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮಾ “ಎಂಬ ಘೋಷಣೆಗೆ ಬದ್ಧರಾಗಿ ಕೆಲಸ ನಿರ್ವಹಿಸಬೇಕು. ಕನ್ನಡ ಭಾಷೆ ಬೆಳೆಸುವ ನಾಡು ಕಟ್ಟುವ ಕಾಯಕ ನಿಮ್ಮಿದ ಆಗಬೇಕಿದೆ ಎಂದರು.
ಕೊಡ್ಲಿಪೇಟೆ ಹೋಬಳಿ ನೂತನ ಅಧ್ಯಕ್ಷರಾಗಿ ಶ್ರೀ ಶೋಭಿತ್ ರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವಸಂತ್ ರವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಸಂಘಟನೆಗೆ ಶ್ರಮಿಸಿದ ಶ್ರೀಮತಿ ಸುಪ್ರಿತಾರವರನ್ನು ಶಾಲು ಹಾರ ಹಾಕಿ ಗೌರವಿಸಲಾಯಿತು.
ಸಭೆಯಲ್ಲಿ ಕುಶಾಲನಗರ ತಾಲ್ಲೂಕು ಉಪಾಧ್ಯಕ್ಷರು ಪಯಾಜ್ಉದ್ದೀನ್, ಪ್ರಧಾನ ಕಾರ್ಯದರ್ಶಿ ಕುಮಾರ್ ದೇವಾಂಗ, ಸೋಮವಾರಪೇಟೆ ತಾಲೋಕು ಅಧ್ಯಕ್ಷ ಸಂತೋಷ್, ಮಹಿಳಾ ಅಧ್ಯಕ್ಷೆ ಶ್ರೀಮತಿ ಆಶಾ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಕುಶಾಲನಗರ ತಾಲೋಕು ಪ್ರದಾನ ಕಾರ್ಯದರ್ಶಿ ಶ್ರೀಮತಿ ಗೀತಾ ಹಾಗೂ ಕೊಡ್ಲಿಪೇಟೆ ಶ್ರೀಮತಿ ಕವಿತಾ ಶ್ರೀಮತಿ ರೂಪಾ ಶ್ರೀಮತಿ ಮೇನಕ ಶ್ರೀಮತಿ ಮಮತಾ ಹಾಜರಿದ್ದರು. 60 ತಕ್ಕೂ ಹೆಚ್ಚು ಕಾರ್ಯಕರ್ತರು ಸಂಘಟನೆಗೆ ಸೇರಿಕೊಂಡರು ಎಲ್ಲರಿಗೂ ಕನ್ನಡ ಶಲ್ಯ ಹಾಕಿ ಗೌರವಪೂರ್ವಕವಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು.
ಹಾಜರಿದ್ದ ಎಲ್ಲಾ ಅತಿಥಿಗಳಿಗೆ ಸಂಘಟಕರು ಶಾಲು,ಹಾರ,ಹಾಕಿ ಗೌರವ ಸಮರ್ಪಣೆ ಮಾಡಿದರು.
ಸಾಮಾಜಿಕ ಜಾಲತಾಣದ ಸೋಮವಾರಪೇಟೆ ತಾಲೋಕು ಕಾರ್ಯದರ್ಶಿ ಶ್ರೀ ಬೋಪಯ್ಯ ಕಾರ್ಯಕ್ರಮ ಚಿತ್ರಿಕರಿಸಿ ಫೋಟೋ ತೆಗೆದು ಶಿಸ್ತು ಮೆರೆದರು.
ಸಂಘಟಕ ಅವಿನಾಶ್ ರವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಯವಾಯಿತು.




















