
ಮುಧೋಳ : ಗ್ರಾಮೀಣ ಜನಪದ ಸಂಸ್ಕೃತಿಯ ಚಿಂತಕ. ಯುವ ಸಂಘಟನೆಯ ನಾಯಕ. ಆದರ್ಶ ವ್ಯಕ್ತಿತ್ವವುಳ್ಳ- ಸಾಮಾಜಿಕ ನೈತಿಕ ಸ್ವಾಸ್ಥ್ಯ ಕಾಪಾಡುವ ಆಧ್ಯಾತ್ಮಿಕ ಅನುಯಾಯಿ. ಹಾಗೂ ಶ್ರೀಮನ್ ನಿಜಗುಣ ಶಿವಯೋಗಿಗಳ ವಚನ ತತ್ವ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸುವ ಶ್ರೇಷ್ಠ ವಿದ್ವಾಂಸ. ಭಜನಾ ಸಂಕೀರ್ಥನೆಯ ಖ್ಯಾತ ಕಲಾವಿದರಾಗಿ ಸದ್ಯಕ್ಕೆ ಪ್ರಸಿದ್ಧ ಪ್ರವಚನಕಾರರಾಗಿ ಸಾಮಾಜಿಕ ಮೌಲ್ಯಗಳನ್ನು ಜನ ಸಮುದಾಯದಲ್ಲಿ ಬಿತ್ತುವ ಶ್ರೇಷ್ಠ ಜನಪದ ಸೇವಕ ಶರಣರಾದ ತಾಲೂಕಿನ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತಿಗಳ ಅಮೋಘ ಸೇವೆಯನ್ನು ಪರಿಗಣಿಸಿ ಅವರಿಗೆ ಪ್ರಸಕ್ತ 2026 ನೇ ಸಾಲಿನ
“ಪ್ರವಚನ ಪಟು” -ಗೌರವ ಪುರಸ್ಕಾರವನ್ನು ಗುರುವಾರ ದಿ ಅಕ್ಟೋಬರ್ 1 ರಂದು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ “ವಿಶ್ವ ನಾಗರಿಕರ ದಿನಾಚರಣೆ” ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪ ಸಬರದ ಅವರ ಅಧ್ಯಕ್ಷತೆಯಲ್ಲಿ ಗೌರವಾಧ್ಯಕ್ಷ ಸಿದ್ದು ದಿವಾನ್.ಉಪಾಧ್ಯಕ್ಷ ಪಿ.ಶ್ಯಾಮಸುಂದರ.ಉಪನ್ಯಾಸಕ ಎಂ.ಜಿ.ದಾಸರ. ಕೋಶಾಧ್ಯಕ್ಷ ಎಸ್.ಜಿ.ಹವಾಲದಾರ. ಪ್ರಧಾನ ಕಾರ್ಯದರ್ಶಿ ಬಸವರಾಜ ಜಲಗೇರಿ.ಮಹಾದೇವಪ್ಪ ಮಡಿವಾಳ ಮುಂತಾದವರ ಘನ ಉಪಸ್ಥಿತಿಯಲ್ಲಿ ಗೌರವ ಸನ್ಮಾನ ನಡೆಯಿತು.
ಸಮಾರಂಭದ ಸಾನಿಧ್ಯವನ್ನು ಸಿದ್ಧಾರೂಢ ಮಠದ ಪೂಜ್ಯರಾದ ಸಿದ್ದರಾಮಯ್ಯ ಸ್ವಾಮಿಗಳು ವಹಿಸಿದ್ದರು.
- ಕರುನಾಡ ಕಂದ ಸುದ್ದಿ




















