ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ಇಂದು ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಸ್ಪೂರ್ತಿ ದಿನದ ಪ್ರಯುಕ್ತ ಇಂದು ಕೊಟ್ಟೂರಿನಲ್ಲಿ ಡಾಕ್ಟರ್ ಪುನೀತ್ ರಾಜಕುಮಾರ್ ರವರ ಅಭಿಮಾನಿಯಾದ ಪ್ರಕಾಶ್ ರಾಂಪುರದ ಇವರು ಪುನೀತ್ ರಾಜಕುಮಾರ್ ಅವರ 17 ಕೆಜಿ ತೂಕದ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸಿದರು ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರು ಮಾಡಿದ ಸಮಾಜ ಸೇವೆಗಳು ಮತ್ತು ಶಿಕ್ಷಣದ ಬಗ್ಗೆ ಮತ್ತು ಪೌರಕಾರ್ಮಿಕರ ಬಗ್ಗೆ ಮತ್ತು ಕೂಲಿಕಾರ್ಮಿಕರ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದರು ಆದರಿಂದ ಅವರ ಅಭಿಮಾನಿಯಾದ ನಾನು ನನ್ನ ಕೈಲಾದಷ್ಟು ಸಹಾಯವನ್ನು ಅವರ ಹಾದಿಯಲ್ಲಿ ಮಾಡುತ್ತಿದ್ದೇನೆ ಮತ್ತು ಮುಂದೆಯೂ ಮಾಡುತ್ತೇನೆ ಪುನೀತ್ ರಾಜಕುಮಾರ್ ಅವರ ಸಮಾಜ ಸೇವೆಯನ್ನು ಸರ್ಕಾರ ಗುರುತಿಸಿ ಅವರಿಗೆ ಮಾರ್ಚ್ 17 ರ ಜನ್ಮದಿನವನ್ನು ಸ್ಪೂರ್ತಿ ದಿನ ಎಂದು ಮಾಡಿದ್ದಕ್ಕೆ ಅಪ್ಪು ಅಭಿಮಾನಿಗಳಿಗೆ ಸಂತೋಷವಾಗಿದೆ ಮತ್ತು ಸರ್ಕಾರಕ್ಕೆ ಪುನೀತ್ ರಾಜಕುಮಾರ್ ರವರ ಅಭಿಮಾನಿಗಳಿಂದ ಧನ್ಯವಾದಗಳು ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಮಾಡಿ ಬಟ್ಟೆಯನ್ನು ವಿತರಣೆ ಮಾಡಲಾಯಿತು ಮತ್ತು ಸರ್ಕಾರಿ ಸ್ಕೂಲ್ ಮಕ್ಕಳಿಗೆ ಪ್ಲೈವುಡ್ ಪೆನ್ನು ಪುಸ್ತಕ ನೀಡಲಾಯಿತು ಮತ್ತು ಅಮಾಲರಿಗೆ ಬಟ್ಟೆಯನ್ನು ವಿತರಣೆ ಮಾಡಲಾಯಿತು ಆಟೋ ಚಾಲಕರಿಗೆ ಸನ್ಮಾನ ಮಾಡಿ ವಸ್ತ್ರವನ್ನು ನೀಡಲಾಯಿತು ನಂತರ ಅನ್ನದಾನವನ್ನು ಮಾಡಲಾಯಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್ ರವರು ಹಾಗೂ ಕಾಂಗ್ರೆಸ್ ಮುಖಂಡರಾದ ಸುಧಾಕರ್ ಪಾಟೀಲ್ ರವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಇದೇ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಪ್ರಕಾಶ್ ರಾಂಪುರದ ಮತ್ತು ಉಪಾಧ್ಯಕ್ಷರಾದ ಕೆಎಂಎಂ ಗುರುಸ್ವಾಮಿ ಎಸ್ ರಾಮಣ್ಣ ಆಟೋ ಶಿವಯ್ಯ ಜಿ ರಾಜು ಬಿ ವೀರಭದ್ರಪ್ಪ ಶಿವಪ್ರಸಾದ್ ಬಿ ಸುರೇಶ್ ಬಿ ಪ್ರಸಾದ್ ಗಿರಿ ಅಪ್ಪಣ್ಣ ಮತ್ತು ಅಪ್ಪು ಅಭಿಮಾನಿಗಳು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.