
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ಧೂರ್ ಶಾಸ್ತ್ರಿಯವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಮಿತ್ಯ, ಬೈಲಹೊಂಗಲ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಕುರಿತು ವಿಚಾರ ಸಂಕಿರಣ ಹಾಗೂ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಬೈಲಹೊಂಗಲ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ನಗರಸಭೆ, ಶಿಕ್ಷಣ ಇಲಾಖೆ ಹಾಗೂ ಶ್ರೀ ಗಣಾಚಾರಿ ಮಹಿಳಾ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಖ್ಯಾತ ಉದ್ಯಮಿಗಳು ಹಾಗೂ ಚಲನಚಿತ್ರ ನಟರಾದ ಶ್ರೀ ಶಿವರಂಜನ್ ಬೋಳಣ್ಣವರ, ಬೈಲಹೊಂಗಲ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಆದಿತ್ಯ ಹೊಸಳಕರ ಗೌರವಾನ್ವಿತ ಪ್ರಥಮ ಹೆಚ್ಚುವರಿ ನ್ಯಾಯಾಧೀಶರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಭಾಗ್ಯಶ್ರೀ ಆರ್. ಹುಗ್ಗಿ, ಪೌರಾಯುಕ್ತರು, ನಗರಸಭೆ, ಶ್ರೀ ಸಿ. ಎಚ್. ಹೊಸಮನಿ, ಅಧ್ಯಕ್ಷರು, ನ್ಯಾಯವಾದಿಗಳ ಸಂಘ, ಶ್ರೀ ಡಿ. ಎಸ್. ಹೊಗರ್ತಿ, ಹಿರಿಯ ನ್ಯಾಯವಾದಿಗಳು, ಶ್ರೀ ರಮೇಶ ಎಸ್. ಕೋಲಕಾರ, ಅಪರ ಸರ್ಕಾರಿ ವಕೀಲರು, ಬೈಲಹೊಂಗಲ, ಶ್ರೀ ಎಸ್. ವ್ಹಿ. ಹಿರೇಮಠ, ಉಪಾಧ್ಯಕ್ಷರು, ನ್ಯಾಯವಾದಿಗಳ ಸಂಘ ಹಾಗೂ ಶ್ರೀ ಆಯ್. ಬಿ. ಮೇಟಿ, ಕಾರ್ಯದರ್ಶಿಗಳು, ನ್ಯಾಯವಾದಿಗಳ ಸಂಘ, ಶ್ರೀ ಗಣಾಚಾರಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಸಿ. ಬಿ. ಗಣಾಚಾರಿ, ನ್ಯಾಯವಾದಿಗಳಾದ ಶ್ರೀಮತಿ ಸೀಮಾ ಮಾಲದಾರ ಅವರು ಉಪಸ್ಥಿತರಿದ್ದರು.
ವಿಚಾರ ಸಂಕಿರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವಚ್ಛತೆ, ಸರಳತೆ ಹಾಗೂ ಸಮಾಜ ಸೇವೆಯ ಆದರ್ಶಗಳ ಕುರಿತು ವಿಚಾರ ವಿನಿಮಯ ನಡೆಯಿತು. ಬಳಿಕ ಸ್ವಚ್ಛತಾ ಶ್ರಮದಾನ ಕೈಗೊಳ್ಳುವ ಮೂಲಕ ಸ್ವಚ್ಛತೆ ಹಾಗೂ ಸಾರ್ವಜನಿಕ ಸ್ಥಳಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು ಹಾಗೂ ಗಾಂಧೀಜಿಯವರ ಸ್ವಚ್ಛತೆ, ಶಿಸ್ತು, ಅಹಿಂಸೆ ಮತ್ತು ಸೇವಾ ಮನೋಭಾವದ ಆದರ್ಶಗಳನ್ನು ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶವನ್ನು ಸಾರಲಾಯಿತು.
ಈ ಸಂದರ್ಭದಲ್ಲಿ ನ್ಯಾಯಾಲಯ ಮತ್ತು ನಗರಸಭೆಯ ಅಧಿಕಾರಿ, ಸಿಬ್ಬಂದಿ ವರ್ಗದವರು, ಉಪನ್ಯಾಸಕರು, ವಿದ್ಯಾರ್ಥಿನಿಯರು ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.
ವರದಿ ಮಂಜು ಎಂ. ಚಿಕ್ಕಣ್ಣವರ




















