ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

ಪೊನ್ನಂಪೇಟೆ : ನಂ. 2783ನೇ ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ 83ನೇ ಮತ್ತು 2025- 2026ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಕಾಡ್ಯಮಾಡ ಎಸ್. ಭರತ್ ಅವರ ಅಧ್ಯಕ್ಷತೆಯಲ್ಲಿ ಕಾನೂರಿನ ಸಂಘದ ಸಭಾಂಗಣದಲ್ಲಿ ಜರುಗಿತು.
ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1937ರಲ್ಲಿ ಸ್ಥಾಪನೆಯಾಗಿ ಇದೀಗ 89 ವರ್ಷ ತುಂಬಿರುತ್ತದೆ. 2009 ರಿಂದ 2026 ರವರೆಗೆ ಆಡಿಟ್‌ನಲ್ಲಿ ಸತತವಾಗಿ ‘ಎ’ ತರಗತಿಯನ್ನು ಹೊಂದಿದ್ದು ವರ್ಷದಿಂದ ವರ್ಷಕ್ಕೆ ಸಂಘವು ಅಭಿವೃದ್ಧಿ ಹೊಂದುತ್ತಿದೆ. ಆಡಿಟ್ ವರದಿಯಲ್ಲಿ ಯಾವುದೇ ಆಕ್ಷೇಪಣೆಗಳಿಲ್ಲದೆ ಉತ್ತಮ ವರದಿ ಬರುತ್ತಿರುವುದು ಸಂಘದ ಸ್ವಚ್ಛ ಹಾಗು ಪಾರದರ್ಶಕತೆಗೆ ಕಾರಣವಾಗಿದೆ ಎಂದು ಅಧ್ಯಕ್ಷರು ಮಹಾಸಭೆಗೆ ತಿಳಿಸಿದರು. ಸಂಘದಲ್ಲಿ ಇಂದಿಗೆ 1584 ಸದಸ್ಯರಿದ್ದು, ರೂ. 3,71,20,638.00 ಮೊತ್ತದ ಕ್ಷೇಮ ನಿಧಿ ಇದೆ. ಕಾಫಿ ತೋಟದ ಭಂಡವಾಳ ಮತ್ತು ಅಭಿವೃದ್ಧಿ ನಿಧಿ ರೂ. 1,45,89,975.00 ಇರುತ್ತದೆ. ಸಂಘದಲ್ಲಿ ಕಟ್ಟಡ ನಿಧಿ ಹಾಗು ಇತರ ನಿಧಿಗಳು ರೂ. 1,12,48,750.00 ಇರುತ್ತದೆ ಎಂದು ಮಹಾಸಭೆಗೆ ವಿವರಿಸಿದ ಕೆ.ಎಸ್. ಭರತ್ ಅವರು, ಸದಸ್ಯರ ಅನುಕೂಲಕ್ಕಾಗಿ ಜಾಮೀನು ಸಾಲ ಒಂದು ಲಕ್ಷ, ಗೊಬ್ಬರ ಸಾಲ ಒಂದು ಲಕ್ಷ, ಮರಣನಿಧಿ ಒಂದು ಲಕ್ಷ ಸಂಘದಿಂದ ನೀಡಲಾಗುತ್ತಿದೆ. ಸಂಘದಲ್ಲಿ ಕೆ. ಸಿ. ಸಿ. ಫಸಲು ಸಾಲ ಪಡೆದ ಸದಸ್ಯರು ಮೃತಪಟ್ಟಲ್ಲಿ, ಕುಟುಂಬದ ವಾರಸುದಾರರು ನಿಗದಿತ ಗಡುವುನೊಳಗೆ ಸಾಲ ಮರುಪಾವತಿಸಿದ್ದಲ್ಲಿ ಸದರಿಯವರಿಗೆ ಸಂಘದಿಂದ ರೂ 25,000/- ಪ್ರೋತ್ಸಾಹ ಧನವಾಗಿ ನೀಡಲಾಗುವುದು ಎಂದು ತಿಳಿಸಿದರು.

ಸಂಘದಲ್ಲಿ ಗೊಬ್ಬರ, ಕ್ರಿಮಿನಾಶಕ, ಹತ್ಯಾರು, ದಿನಬಳಕೆ ವಸ್ತು, ಕೋವಿ ತೋಟ, ಕಾಫಿ ಜೇಟನ್ ಹಾಗೂ ತೇವಾಂಶ ಪರೀಕ್ಷೆ ಸೌಲಭ್ಯವನ್ನು ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಒದಗಿಸಿಕೊಡಲಾಗಿದೆ. ಇದರ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದ ಭರತ್ ಅವರು, ಪ್ರಸ್ತುತ ಸಾಲಿನಲ್ಲಿ ಸಂಘ ಗಳಿಸಿದ ಒಟ್ಟು ಲಾಭದ ಮೊತ್ತದ ಪೈಕಿ ಸದಸ್ಯರಿಗೆ ಶೇಕಡ 25% ಡಿವಿಡೆಂಡ್ ನೀಡಲು ಮಹಾಸಭೆಯ ಅನುಮತಿ ಅಗತ್ಯವಿದೆ ಎಂದು ಪ್ರಸ್ತಾಪ ಮುಂದಿಟ್ಟರು. ಇದನ್ನು ಮಹಾಸಭೆ ಅನುಮೋದಿಸಿತು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸಿ. ಬಿ. ಬೆಳ್ಳಪ್ಪ, ನಿರ್ದೇಶಕಗಳಾದ ಎ.ಎ. ವಿವೇಕ್, ಎ. ಎಂ. ಅಚ್ಚಯ್ಯ, ಸಿ. ಎನ್. ಬಿದ್ದಪ್ಪ, ಕೆ . ಎಸ್ . ಬೋಪಣ್ಣ, ಸಿ. ಪಿ. ಶಮ್ಮಿ, ಕೆ. ಎಂ . ಕುಸುಮ, ಎಂ . ಕೆ . ರವಿ, ಕೆ. ಎನ್. ನಾಚಪ್ಪ, ಹೆಚ್. ಕೆ. ರಾಜ, ಎಂ.ಎಂ. ಜಗನ್ನಾಥ್, ವಿ. ಎಸ್. ಸುಮಿತ್ರ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!