ವಿರಾಜಪೇಟೆ : ಏಷ್ಯನ್ ಗೇಮ್ಸ್‌ನ 4×400 ರಿಲೇಯಲ್ಲಿ ಚಿನ್ನದ ಪದಕ ಪಡೆದ ಕೊಡಗಿನ ಹೆಮ್ಮೆಯ ಕ್ರೀಡಾ ತಾರೆ ಮಾಚೆಟ್ಟಿರ ಪೂವಮ್ಮ ಅವರಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಫೋನ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಪೂವಮ್ಮ ಅವರ ಸಾಧನೆ ಕೊಡಗಿನ ಹೆಮ್ಮೆ, ಕರ್ನಾಟಕದ ಹೆಮ್ಮೆ ಎಂದು ಸಂಸದರು ಬಣ್ಣಿಸಿದ್ದಾರೆ. ಹಾಗೂ ಕ್ರೀಡೆಗೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಶೀಘ್ರದಲ್ಲೇ ಭೇಟಿಯಾಗುವ ಇಂಗಿತವನ್ನು ಕ್ರೀಡಾಪಟು ಪೂವಮ್ಮ ವ್ಯಕ್ತಪಡಿಸಿದ್ದಾರೆ.
ವರದಿ: ಪ್ರಿತುನ್ ಪೂವಣ್ಣ




















