ಮಡಿಕೇರಿ: ಸಾರ್ವಜನಿಕ ಸೇವೆ ಮತ್ತು ಸುರಕ್ಷತೆಯಲ್ಲಿ ನಿರಂತರವಾಗಿ ತೊಡಗಿರುವ ಪೊಲೀಸ್ ಸಿಬ್ಬಂದಿಯ ಹಿತದೃಷ್ಟಿಯಿಂದ ಮೈಸೂರಿನ ಕಾಂಗರೂ ಕೇರ್ ಆಸ್ಪತ್ರೆ ವತಿಯಿಂದ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಯಿತು. ರಾತ್ರಿ ವೇಳೆಯಲ್ಲಿ ಕರ್ತವ್ಯ ನಿರ್ವಹಿಸುವ ಮಡಿಕೇರಿ ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿಯ ಸುರಕ್ಷತೆಗಾಗಿ ಆಸ್ಪತ್ರೆಯ ವತಿಯಿಂದ ಉಚಿತವಾಗಿ ರಿಫ್ಲೆಕ್ಟರ್ ಜಾಕೆಟ್ಗಳನ್ನು ವಿತರಿಸಲಾಯಿತು. ರಾತ್ರಿ ವೇಳೆ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಪೊಲೀಸರ ದೃಶ್ಯತೆ ಹೆಚ್ಚಿಸುವ ಮೂಲಕ ಕರ್ತವ್ಯದ ಸಂದರ್ಭದಲ್ಲಿ ಈ ಜಾಕೆಟ್ಗಳು ಸುರಕ್ಷತೆಗೆ ನೆರವಾಗಲಿವೆ.
ಇದೇ ಸಂದರ್ಭದಲ್ಲಿ ಮಡಿಕೇರಿಯ ಪೊಲೀಸ್
ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಸುದೀರ್ಘ ಕರ್ತವ್ಯ ಹಾಗೂ ಕೆಲಸದ ಒತ್ತಡದಲ್ಲಿರುವ
ಪೊಲೀಸ್ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ
ತಪಾಸಣೆ ನಡೆಸಲಾಗಿದ್ದು, ಹಲವು ಸಿಬ್ಬಂದಿ ಶಿಬಿರದ
ಸದುಪಯೋಗ ಪಡೆದುಕೊಂಡರು. ಕಾಂಗರೂ ಕೇರ್
ಆಸ್ಪತ್ರೆಯ ಸಮಾಜಮುಖಿ ಕಾರ್ಯಕ್ಕೆ ಪೊಲೀಸ್
ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೆಚ್ಚುಗೆ
ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದರು.
ವರದಿ: ಪ್ರಿತುನ್ ಪೂವಣ್ಣ




















