ಶಾಮಿಯಾನ್ ಕಾರ್ಮಿಕರ ಅಭಿವೃದ್ಧಿಗೆ ಒತ್ತು ನೀಡಲು ಕರೆ.
ಬಳ್ಳಾರಿ / ಕಂಪ್ಲಿ: ಆಧುನಿಕ ಜೀವನ ಶೈಲಿಯ ಅದ್ಧೂರಿ ಸಭೆ, ಸಮಾರಂಭ ಯಶಸ್ವಿಯಾಗಲು ಶಾಮಿಯಾನದವರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಶಾಮಿಯಾನ್ದವರ ಅಭಿವೃದ್ಧಿಯೂ ಸಹ ಅಷ್ಟೇ ಮುಖ್ಯವಾಗಿದೆ ಎಂದು ಶಾಮಿಯಾನ್ ಡೆಕೋರೇಷನ್ ಧ್ವನಿ ಮತ್ತು ಬೆಳಕು ಮತ್ತು ಧ್ವನಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ಕರೀಮ್ ಅತ್ತಾರ ಹೇಳಿದರು.
ಪಟ್ಟಣದ ವೀರಶೈವ ಭವನದಲ್ಲಿ ನಿರ್ಮಿಸಿರುವ ಗಂಡುಗಲಿ ಕುಮಾರರಾಮನ ವೈಭವ ವೇದಿಕೆಯಲ್ಲಿ ಬಳ್ಳಾರಿ ಜಿಲ್ಲಾ ಕಂಪ್ಲಿ ತಾಲೂಕು ಶಾಮಿಯಾನ್ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿರುವ ಎರಡು ದಿನದ ಕಾರ್ಯಕ್ರಮದ ಪ್ರಯುಕ್ತ ಭಾನುವಾರದ ಮೊದಲ ದಿನದ ಕಂಪ್ಲಿ ತಾಲೂಕು ಮಟ್ಟದ 3ನೇ ಅಧಿವೇಶನ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ, ಶ್ಯಾಮಿಯಾನ್ದವರು ಮಳೆ, ಬಿಸಿಲು, ಚಳಿ ಎನ್ನದೇ, ಸಭೆ, ಸಮಾರಂಭದಲ್ಲಿ ಸುಂದರವಾದ ವೇದಿಕೆ ನಿರ್ಮಿಸಿಕೊಡುವ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಇವರಿಗೆ ಸಹ ವಿಶೇಷ ಸೌಲಭ್ಯಗಳನ್ನು ಸರ್ಕಾರ ನೀಡಬೇಕಾಗಿದೆ. ಅಸಂಘಟಿತ ಕಾರ್ಮಿಕರನ್ನಾಗಿ ಶ್ಯಾಮಿಯಾನದವರನ್ನು ಗುರುತಿಸಿ, ಕಾರ್ಡ್ ನೀಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ನೀಡಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅನುವು ಮಾಡಿಕೊಟ್ಟಿದ್ದಾರೆ. ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡಿ, ಒಳ್ಳೆಯ ಹುದ್ದೆಗಳನ್ನು ಅಲಂಕರಿಸಲು ಅನುವು ಮಾಡಿಕೊಡಬೇಕು ಎಂದರು.
ಕಂಪ್ಲಿ ಕಲ್ಮಠದ ಅಭಿನವ ಪ್ರಭುಸ್ವಾಮಿ, ಮುಸ್ಲಿಂ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ದಿವ್ಯಸಾನಿಧ್ಯವಹಿಸಿದ್ದರು. ತಾಲೂಕು ಅಧ್ಯಕ್ಷ ವಿರೇಶ ಸಣಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕರ ಅಳಿಯ ರಾಜೇಶ್ ಸಿಂಗ್, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ, ಶಾಮಿಯಾನ್ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಕರನಂದಿ, ಸಂಸ್ಥಾಪಕ ರಾಜ್ಯಾಧ್ಯಕ್ಷ ಮೆಹಬೂಬ್ ಮುಲ್ಲಾರ, ಸಹ ಕಾರ್ಯದರ್ಶಿ ಹೆಚ್.ನಾಗರಾಜ (ರವಿಕಿರಣ ಡೆಕೋರೇಷನ್ ಕಂಪ್ಲಿ), ಮುಖಂಡರಾದ ಗುಂಡಯ್ಯಸ್ವಾಮಿ ಹಿರೇಮಠ, ಎಮ್.ರಾಜಾಸಾಬ್, ಮಂಜುನಾಥ ಕೋರಿ, ಬಾಲಗುರುನಾಥ, ದಾವೂದ್ ಕನಸಾವಿ, ಎಸ್ಎಸ್ಎಂ ಚನ್ನಯ್ಯಸ್ವಾಮಿ, ಎಂ.ಸುಧೀರ್, ಬಿ.ನಾರಾಯಣಪ್ಪ, ಎಲ್.ರಾಜೇಶ್, ಹೆಚ್.ನಾಗರಾಜ, ಎಂ.ವಿದ್ಯಾನಂದ, ಮೌಲಾಲಿ, ಶರೀಪ್ ಸಿಂದಗೇರಿ, ಎಂ.ನಾಗರಾಜ, ಕೋರಿ ಕೊಟ್ರೇಶ ಸೇರಿದಂತೆ ಇತರರು ಇದ್ದರು.
ಮೆರವಣಿಗೆ: ವೇದಿಕೆ ಕಾರ್ಯಕ್ರಮ ಮುಂಚಿತವಾಗಿ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಕನ್ನಡಾಂಬೆಯ ಭಾವಚಿತ್ರೆ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ರಸ್ತೆಯುದ್ದಕ್ಕೂ ಧ್ವನಿ ವರ್ಧಕದ ಹಾಡುಗಳಿಗೆ ಶ್ಯಾಮಿಯಾನ್ದವರು ಹೆಜ್ಜೆ ಹಾಕಿದರು. ನಂತರ ಇಲ್ಲಿನ ಗ್ರಾಮ ದೇವತೆ ಮಾರೆಮ್ಮ ಗುಡಿ, ನಡುವಲ ಮಸೀದಿ, ಸಂತೆ ಮಾರುಕಟ್ಟೆ ಮೂಲಕ ವೀರಶೈವ ಭವನದಲ್ಲಿ ಸಮಾವೇಶಗೊಂಡಿತು. ನಂತರ ವೇದಿಕೆ ಕಾರ್ಯಕ್ರಮಗಳು ನಡೆದವು.
ವರದಿ : ಜಿಲಾನಸಾಬ್ ಬಡಿಗೇರ್




















