ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿವಿಧ ಕಾಮಗಾರಿಗಳಿಗೆ ಶಾಸಕ ಎ. ಆರ್. ಕೃಷ್ಣಮೂರ್ತಿಯವರಿಂದ ಭೂಮಿ ಪೂಜೆ

ಕೊಳ್ಳೇಗಾಲ: ವಿಧಾನಸಭಾ ವ್ಯಾಪ್ತಿಯಲ್ಲಿ ಸುಮಾರು 3 ಕೋಟಿ 25 ಲಕ್ಷ ಅನುದಾನದ ವಿವಿಧ ಕಾಮಗಾರಿಗಳಿಗೆ ಶಾಸಕ ಎ. ಆರ್. ಕೃಷ್ಣಮೂರ್ತಿಯವರು ಭೂಮಿ ಪೂಜೆಯನ್ನು ನೆರವೇರಿಸಿದರು.

ತಾಲ್ಲೂಕಿನ ಸಿದ್ದಯ್ಯನಪುರದ ಕುರುಬಗೌಡರ ಬೀದಿಯಲ್ಲಿ 2 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ , ಚರಂಡಿ ನಿರ್ಮಾಣ,
ಬಸ್ತಿಪುರ ಗ್ರಾಮದ ಕುರುಬಗೌಡ ಬೀದಿಯಲ್ಲಿ 1.75 ಕೋಟಿ ವೆಚ್ಚದಲ್ಲಿ ಸಿಸಿ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ತಿಮ್ಮರಾಜಿಪುರ ಗ್ರಾಮದ 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿ ಶಾಸಕರು ಭೂಮಿ ಪೂಜೆಯನ್ನು ನಡೆಸಿದರು.

ಕಾಮಗಾರಿಗಳ ಭೂಮಿ ಪೂಜೆಯನ್ನು ನೆರವೇರಿಸಿ ಶಾಸಕ ಎ. ಆರ್. ಕೃಷ್ಣಮೂರ್ತಿಯವರು ಮಾತನಾಡಿ
ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಅವರು ಒಮ್ಮೆ ಬಸ್ತಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ವಿಶೇಷ ಅನುದಾನವನ್ನು ಘೋಷಣೆ ಮಾಡಿದರು.
ಅವರ ಅವಧಿಯಲ್ಲಿ ಅನುಮೋದನೆಯನ್ನು ಮಾಡಿದ್ದರು ಆದರೆ ಅನುದಾನವನ್ನು ಬಿಡುಗಡೆಯಾಗಿರಲಿಲ್ಲ
ಸಿದ್ದರಾಮಯ್ಯನವರು ರಾಷ್ಟ್ರಿಯ ನಾಯಕರ ಆದೇಶದಂತೆ ತಮ್ಮ ಸ್ಥಾನವನ್ನ ತ್ಯಾಗ ಮಾಡಿದರು ಅವರ ನಂತರ ಡಿ. ಕೆ. ಶಿವಕುಮಾರ್ ರವರು ಮುಖ್ಯಮಂತ್ರಿಗಳಾದ ಮೇಲೆ ಸಿದ್ದರಾಮಯ್ಯನವರ ಮಾತನ್ನು ಉಳಿಸುವ ಸಲುವಾಗಿ ಅನುದಾನವನ್ನು ಬಿಡುಗಡೆ ಮಾಡಿದರು.
ಈಗ ಆ ಅನುದಾನ ಬಂದಿದೆ
ಆದ್ದರಿಂದ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ, ಬಸ್ತಿಪುರ, ತಿಮ್ಮರಾಜಿಪುರ ಗ್ರಾಮಗಳ ಹಾಲುಮತ ಸಮುದಾಯದ ಬೀದಿಗಳಲ್ಲಿ ಸುಮಾರು 3 ಕೋಟಿ 25 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಮಾಡಲಾಗಿದೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರು ಮಾಸ್ ಲೀಡರ್, ಕೊಟ್ಟ ಮಾತನ್ನು ನೆರವೇರಿಸುವುದರಲ್ಲಿ ಅಗ್ರಗಣ್ಯರು ನಾವು ಉಪಕಾರ ಸ್ಮರಣೆಯನ್ನು ಮಾಡಬೇಕು ಹೊಸಬರು ಬಂದರು ಎಂದು ಹಳಬರನ್ನು ಮರೆಯಬಾರದು
ಅವರಂತೆ ಡಿ.ಕೆ. ಶಿವಕುಮಾರ್ ರವರು ಸಹ ಮಾತಿಗೆ ಬದ್ದರು ಹಾಗೂ ರಾಜ್ಯದ ಅಭಿವೃದ್ಧಿಯ ಕನಸನ್ನು ಇಟ್ಟುಕೊಂಡಿರುವವರು ಇರುವ ಅಲ್ಪ ಅವಧಿಯಲ್ಲಿ
ರಾಜ್ಯದಲ್ಲಿ ಆಗಬೇಕಾಗಿರುವ
ಅಭಿವೃದ್ಧಿ ಕೆಲಸಗಳನ್ನು ಮಾಡಿ ಮುಗಿಸಬೇಕು ಎಂದು ಬಹಳ ಶ್ರಮ ವಹಿಸುತ್ತಿದ್ದಾರೆ,
ಟೀಕೆಗಳು ಸಾಯುತ್ತವೆ ಕೆಲಸಗಳು ಮಾತನಾಡುತ್ತವೆ
ನಮ್ಮ ಕಾಂಗ್ರೆಸ್ ಸರ್ಕಾರದ ಕೆಲಸಗಳು ಜನರ ಕಣ್ಣ ಮುಂದೆ ಕಾಣುತ್ತಿದೆ, ವಿರೋಧ ಪಕ್ಷದವರು ಸರ್ಕಾರ ದಿವಾಳಿಯಾಗಿದೆ ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು ಹೇಳುತ್ತಾರೆ ಆದರೆ ರಾಜ್ಯದಲ್ಲಿ ಕೋಟ್ಯಾಂತರ ರೂಪಾಯಿ ಅನುದಾನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿವೆ, ಪಕ್ಕದ ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇದ್ದರು ಕೂಡಾ ಆ ಕ್ಷೇತ್ರಕ್ಕೂ ಕೂಡ ಕಾಂಗ್ರೆಸ್ ಸರ್ಕಾರ ಅನುದಾನವನ್ನು ಕೊಟ್ಟಿದ್ದು ಆ ಕ್ಷೇತ್ರದಲ್ಲಿಯೂ ಕೂಡ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ,
ರಾಜ್ಯದ ಜನತೆಯ ಅಭಿವೃದ್ಧಿಯೇ ಕಾಂಗ್ರೆಸ್ ಸರ್ಕಾರದ ದ್ಯೇಯೇ ಆದ್ದರಿಂದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಪಕ್ಷವನ್ನು ಬಲ ಪಡಿಸಿ 2028 ಕ್ಕೂ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರವುದು ನಿಶ್ಚಿತ ಎಂದರು.

ಈ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಲ್ಯಾಂಡ್ ಆರ್ಮಿ ಸಹಾಯಕ ನಿರ್ದೇಶಕ ಚಿಕ್ಕಲಿಂಗಯ್ಯ,
ಮುಳ್ಳೂರು ಮಂಜು, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಉದಯ್ ಕುಮಾರ್ ಹಾಗೂ ಇನ್ನಿತರರು ಇದ್ದರು,

ವರದಿ: ಕೊಡಕ್ಕಲ್ ಶಿವಪ್ರಸಾದ್ ಶಿವಮೊಗ್ಗ/ಮೈಸೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!