ಸೋಮವಾರಪೇಟೆ : ಬೇಳೂರು ಕ್ಲಬ್ ವತಿಯಿಂದ 121ನೇ ಕೂರ್ಗ್ ಓಪನ್- ಹ್ಯಾಂಡಿಕ್ಯಾಪ್ ಗಾಲ್ಫ್ ಚಾಂಪಿಯನ್‍ಶಿಪ್ ಪಂದ್ಯಾಟ ಬೇಳೂರು ಗಾಲ್ಫ್ ಮೈದಾನದಲ್ಲಿ ನಡೆಯಿತು.
ಒಟ್ಟು 84 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. 121ನೇ ಕೂರ್ಗ್ ಓಪನ್ ಮತ್ತು ಹ್ಯಾಂಡಿಕ್ಯಾಪ್ ಗಾಲ್ಫ್ ಚಾಂಪಿಯನ್‍ಶಿಪ್ – 2026ರ ಓಪನ್ ವಿಭಾಗದಲ್ಲಿ ಮಡಿಕೇರಿಯ ಎಚ್.ಎಲ್. ಸಂಜಯ್ ಪ್ರಥಮ, ಚಿಕ್ಕಮಗಳೂರಿನ ಶ್ರೀನಿವಾಸ್ ಆರ್. ದ್ವಿತೀಯ, ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಸೋಮವಾರಪೇಟೆಯ ಎಂ. ಎ. ಶ್ರೀಕಾಂತ್ ಪ್ರಥಮ, ಮಡಿಕೇರಿ ದೈವಿಕ್ ಸಂಜಯ್ ದ್ವಿತೀಯ ಸ್ಥಾನ ಗಳಿಸಿದರು.
ಸ್ಟೇಬಲ್ ಫೋರ್ಡ್ ಓಪನ್ ವಿಭಾಗದಿಂದ ವೀರಾಜಪೇಟೆ ಅಪ್ಪಣ್ಣ ಪ್ರಥಮ, ಎನ್.ಎಸ್.ಅನಿಲ್ ದ್ವಿತೀಯ, ಸ್ಟೇಬಲ್ ಫೋರ್ಡ್ ಹ್ಯಾಂಡಿಕ್ಯಾಪ್ ವಿಭಾಗದಿಂದ ಮೈಸೂರಿನ ನಂದನ್ ಕೆ. ಪ್ರಥಮ, ಮೈಸೂರು ಶಶಿಕುಮಾರ್ ದ್ವಿತೀಯ, ಡಬಲ್ಸ್ ವಿಭಾಗದಲ್ಲಿ ಚಿಕ್ಕಮಗಳೂರಿನ ಶ್ರೀನಿವಾಸ್ ಆರ್. ಮತ್ತು ಮಡಿಕೇರಿ ಸಿ. ಟಿ. ಮಂದಣ್ಣ ಜೋಡಿ ಪ್ರಥಮ, ಶಶಿಕುಮಾರ್ ಮತ್ತು ದೈವಿಕ್ ಸಂಜಯ್ ದ್ವಿತೀಯ, ಹಿರಿಯರ ವಿಭಾಗದಿಂದ ಸಂಜಯ್ ಸಿದ್ದಾ ಪ್ರಥಮ ಶ್ರೀನಿವಾಸ್ ಆರ್. ದ್ವಿತೀಯ, ಮಹಿಳೆಯರ ವಿಭಾಗದಿಂದ ಮಡಿಕೇರಿಯ ಮೃಣಾಲಿನಿ ಪ್ರಥಮ ಹಾಗೂ ಬೆಂಗಳೂರಿನ ಅನುರಾಧಾ ದ್ವಿತೀಯ ಸ್ಥಾನ ಗಳಿಸಿದರು.
ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬೇಲೂರು ಕ್ಲಬ್ ಅಧ್ಯಕ್ಷ ಆನಂದ್ ಬಸಪ್ಪ, ಕಾರ್ಯದರ್ಶಿ ಪವನ್ ಮುತ್ತಪ್ಪ, ಮರ್ಕರ ಡೌನ್ಸ್ ಗಾಲ್ಫ್ ಕ್ಲಬ್ ಅಧ್ಯಕ್ಷ ಮತ್ತು ಕಾರ್ಯಪ್ಪ, ಬೇಲೂರು ಕ್ಲಬ್‌ನ ಪದಾಧಿಕಾರಿಗಳಾದ ಎ.ಎಂ. ವಿಶ್ವನಾಥ್, ಬಿ.ಜೆ. ಶಮಂತ್, ಎಸ್.ಕೆ. ಹೇಮಂತ್, ಕೆ.ಸಿ. ರವಿಕುಮಾರ್, ಬಿ.ಎಲ್. ಗಿರೀಶ್, ರವಿ ಪ್ರತಾಪ್, ಗಾಲ್ಫ್ ಕ್ಯಾಪ್ಟನ್ ಕೆ.ಎಂ. ಬೋಪಣ್ಣ, ನಂದಿನಿ ಬಸಪ್ಪ ಅವರುಗಳು ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು.
ವರದಿ: ಪ್ರಿತುನ್ ಪೂವಣ್ಣ




















