ಸಿಂಧನೂರು: ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಹಸ್ತಾಕ್ಷರದ ಮೂಲಕ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಆಲದ ಮರಕ್ಕೆ ಅಮರ ಶ್ರೀ ಆಲದ ಮರ ಎಂದು ಜಿಲ್ಲೆಯ ಪೂಜ್ಯರ ರಾಜ್ಯದ ಪರಿಸರ ಪ್ರೇಮಿಗಳ ಸಹಯೋಗದೊಂದಿಗೆ ಇತ್ತೀಚೆಗೆ ನಾಮಕರಣಗೊಳಿಸಲಾಯಿತು.ಈ ಆಲದ ಮರದ ಪೋಷಣೆ ಹಾಗೂ ಜವಾಬ್ದಾರಿಯನ್ನು ಹೊತ್ತ ವನಸಿರಿ ತಂಡ ತಾಯಿ ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ದಿನನಿತ್ಯ ನೀರು ಹಾಕುವುದು ಸುಂದರವಾಗಿ ಕಾಣುವಂತೆ ಮಾಡುವುದು ಸುತ್ತಲೂ ಬೆಳೆದ ಕಸವನ್ನು ಕಿತ್ತಿ ಸ್ವಚ್ಛಗೊಳಿಸುತ್ತಿದ್ದಾರೆ ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಾ ಅಮರ ಶ್ರೀ ಆಲದ ಮರ ಇಂದು ಕರ್ನಾಟಕ ರಾಜ್ಯದಲ್ಲೇ ಹೆಸರುವಾಸಿಯಾಗಿದೆ.ಇದಕ್ಕೆಲ್ಲ ಕಾರಣೀಭೂತರು ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು.ಅವರ ಈ ಪರಿಸರ ಪ್ರೇಮ ರಾಜ್ಯದ ಯುವಕರಿಗೆ ಮಾದರಿಯಾಗಿದೆ.ಗಿಡಮರಗಳನ್ನು ಬೆಳಸುವ ಜೊತೆಗೆ ಬೇಸಿಗೆಯಲ್ಲಿ ಪಕ್ಷಿಗಳ ದಾಹ ತೀರಿಸಲು ಗಿಡಮರಗಳಿಗೆ ಮನೆಯ ಮೇಲ್ಚಾಣಿ ಮೇಲೆ ನೀರಿನ ಅರವಟ್ಟಿಗೆ ನಿರ್ಮಿಸಿ ನೀರು ಕಾಳುಕಡಿಗಳನ್ನು ಹಾಕುವಂತೆ ವಿನೂತನವಾಗಿ ಎಪ್ರಿಲ್ ಪೂಲ್ ಬದಲು ಎಪ್ರಿಲ್ ಕೂಲ್ ಕಾರ್ಯಕ್ರಮವನ್ನು ಇದೇ ಎಪ್ರಿಲ್ 1 ರಂದು ಸಿಂಧನೂರಿನಲ್ಲಿ ಹಮ್ಮಿಕೊಂಡಿದ್ದಾರೆ ಇಂತಹ ಒಂದು ಕಾರ್ಯಗಳಿಗೆ ಪರಿಸರ ಪ್ರೇಮಿಗಳು ಸಹಕಾರ ಅಗತ್ಯವಾಗಿದೆ ಇಂತಹ ಒಂದು ವನಸಿರಿ ಫೌಂಡೇಶನ್ ನಂತಹ ಸಂಘಸಂಸ್ಥೆಗಳನ್ನು ನಾವುಗಳೆಲ್ಲರೂ ಉಳಿಸಿ ಬೆಳಸಬೇಕಾಗಿದೆ.
ವರದಿ – ವೆಂಕಟೇಶ.H. ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.