‘ಜಾನಪದ ಮತ್ತು ಬದುಕು’ ವಿಷಯ ಕುರಿತು ಸಾಹಿತಿ ಬಸವರಾಜ ಕಲ್ಲಗುಡಿ ಉಪನ್ಯಾಸ
ಬಾಗಲಕೋಟೆ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಬಾಗಲಕೋಟೆ ಹಾಗೂ ವಲಯ ಘಟಕ ಶಿರೂರ ಇವರ ಸಹಯೋಗದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಅ.8ರಂದು ಬೆಳಿಗ್ಗೆ 10.30ಕ್ಕೆ ಬೆನಕಟ್ಟಿ ಗ್ರಾಮದ ಶ್ರೀ ಕೃಷ್ಣಾ ರಾ. ಯಡಹಳ್ಳಿ ಅವರ ನಿವಾಸದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಶ್ರೀ ಪ್ರಕಾಶ ಶಿ. ಯಡಹಳ್ಳಿ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆಯ ಆಶಯ ನುಡಿಯನ್ನು ಶ್ರೀ ಪಾಂಡುರಂಗ ಸಣ್ಣಪ್ಪನವರ ನೆರವೇರಿಸಲಿದ್ದಾರೆ.
ಗೌರವ ಉಪಸ್ಥಿತರಾಗಿ ಶಿರೂರ ವಲಯ ಘಟಕದ ಅಧ್ಯಕ್ಷ ಶ್ರೀ ಸಂಜಯ್ ನಡುವಿನಮನಿ ಹಾಗೂ ಕಲಾದಗಿ ವಲಯ ಘಟಕದ ಅಧ್ಯಕ್ಷ ಶ್ರೀ ಲಕ್ಷ್ಮಣ ಅಂಕಲಗಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಲಾವಿದೆ ಶ್ರೀಮತಿ ಪವಿತ್ರಾ ಜಕ್ಕಪ್ಪನವರ (ಕೆರೂರ), ಸಾಹಿತಿ ಹಾಗೂ ಶಿಕ್ಷಕ ಶ್ರೀ ಮುತ್ತು ಬಳ್ಳಾ ಕಮತಪುರ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶಿರೂರದ ಶಿಕ್ಷಕ ಹಾಗೂ ಸಾಹಿತಿ ಶ್ರೀ ಬಸವರಾಜ ಕಲ್ಲಗುಡಿ ಅವರು ‘ಜಾನಪದ ಮತ್ತು ಬದುಕು’ ವಿಷಯ ಕುರಿತು ದತ್ತಿ ಉಪನ್ಯಾಸ ನೀಡಲಿದ್ದಾರೆ.
ಈ ದತ್ತಿ ಉಪನ್ಯಾಸ ಕಾರ್ಯಕ್ರಮದ ದತ್ತಿ ದಾನಿಗಳಾಗಿ ಬೆನಕಟ್ಟಿಯ ಉದ್ಯಮಿ ಶ್ರೀ ಕೃಷ್ಣಾ ರಾ. ಯಡಹಳ್ಳಿ ಸಹಕರಿಸುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಮತ್ತು ಶಿರೂರ ವಲಯ ಘಟಕದ ಸರ್ವ ಪದಾಧಿಕಾರಿಗಳು ಸರ್ವರನ್ನೂ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.




















