ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದ ಮುತ್ನಾಳದಲ್ಲಿ ಪ್ರತಿಷ್ಠಾಪಿಸಿರುವ ಬಾಹುಬಲಿ ಪಂಚಕಲ್ಯಾಣ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ರಥೋತ್ಸವ ಕಾರ್ಯಕ್ರಮದಲ್ಲಿ ಜೈನ ಧರ್ಮದ ಘೋಷಣೆಗಳ ಝೇಂಕಾರದ ಮಧ್ಯೆ ಬೆಂಗಳೂರು ಮೂಲದ ಶ್ರೀ ನೇಮೇಶ ಮೀನಾ ದಂಪತಿಗಳ ಅದ್ದೂರಿಯಾದ ಮೆರವಣಿಗೆಯ ಮಧ್ಯೆ ಮುತ್ನಾಳದ ಯುವಕರು ಯುವತಿಯರು ನೃತ್ಯ ಪ್ರದರ್ಶನ ಮಾಡುವುದರ ಮೂಲಕ ಊರಿನ ತುಂಬಾ ಮೆರವಣಿಗೆ ನಡೆಯಿತು ಇದೇ ಸಂದರ್ಭದಲ್ಲಿ ಕುಮಾರಿ ನಿಶ್ಮಿತಾ ಸ್ಮರಣಾರ್ಥವಾಗಿ 24 ಅಡಿ ಎತ್ತರದ ಬಾಹುಬಲಿ ಮೂರ್ತಿ ಸಮರ್ಪಣೆ ಮಾಡಿದ ಸವಿನೆನಪಿಗಾಗಿ ಅವರ ತಂದೆ ತಾಯಿಗಳಾದ ಶ್ರೀ ನೇಮೇಶ ಮೀನಾ ಜೈನ ದಂಪತಿಗಳ ಸತ್ಕಾರ ಸಮಾರಂಭ ಗ್ರಾಮದ ಆದಿನಾಥ ಜೈನ ಬಸದಿಯಲ್ಲಿ ಆದಿನಾಥ ಯುವಕ ಮಂಡಳ ಹಾಗೂ ಜ್ವಾಲಾಮಾಲಿನಿ ಮಹಿಳಾ ಮಂಡಳ ಸದಸ್ಯರ ಸಮ್ಮುಖದಲ್ಲಿ ವೈಭವೋಪೇತವಾಗಿ ದಂಪತಿಗಳ ಸನ್ಮಾನ ಕಾರ್ಯಕ್ರಮ ನೇರವೇರಿಸಲಾಯಿತು ಜೊತೆಗೆ ಕ್ಷೇತ್ರದಲ್ಲಿ ಜೈನ ಧರ್ಮದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಿರುವ ಶ್ರೀ ಸುನೀಲ್ ಹಾಗೂ ಶ್ರೀ ಜೇಷ್ಠಾ ದಂಪತಿಗಳನ್ನು ಸನ್ಮಾನಿಸಲಾಯಿತು ಗ್ರಾಮದ ನಾಗರಿಕರು ಸಹಕಾರ ನೀಡುವುದರ ಮೂಲಕ ಹಬ್ಬದ ವಾತಾವರಣ ಕಂಡುಬಂತು ಅದ್ದೂರಿಯಾಗಿ ನೇರವೇರಿದ ಜನಸಮೂಹದ ಮಧ್ಯೆ ಮೆರವಣಿಗೆಯು ಕೊನೆಗೊಂಡಿತು ಈ ಸಂದರ್ಭದಲ್ಲಿ ಶ್ರೀ ಪಿ ಜೆ ಪಾರಿಷ್ವಾಡ ಶ್ರೀ ಬಾಳಪ್ಪಾ ಕಕ್ಕಾಳಿ ಹಿರಾಚಂದ ಹುಲಮನಿ ರಾಯಪ್ಪಾ ಯಡಾಲ ಸಂತೋಷ ಹುಲಮನಾ ದೇವೆಂದ್ರ ತಿಗಡಿ ಮಂಜುನಾಥ ಪಾರಿಶವಾಡ ಬಾಹುಬಲಿ ಶಿಂತ್ರಿ ಊರಿನ ಸಮಸ್ತ ಜೈನ ಸಮುದಾಯ ಹಿರಿಯರು ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಿಸಿದರು..
ವರದಿ ದಿನೇಶ್ ಕುಮಾರ್ ಅಜಮೇರಾ