ರಾಮದುರ್ಗ ಪಟ್ಟಣದ ನೇಕಾರ ಪೇಟೆಯ (ನಾರಾಯಣಪೇಟೆ)ಯ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಕಳೆದ ಏಳು ದಿನಗಳಿಂದ ಸಪ್ತಾಹ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನಡೆದು ಇಂದು ಶ್ರೀ ಪಾಂಡುರಂಗನ ರಥೋತ್ಸವ ಅದ್ಧೂರಿಯಿಂದ ಜರುಗಿತು. ಗೊಂದಳಿ ಸಮಾಜದ ಸಂತ ಸದ್ಭಕ್ತರಿಂದ ಕೀರ್ತನ, ಅಭಂಗ, ಭಜನೆಗಳು ಸಾಂಗವಾಗಿ ನೆರವೇರಿದವು ಹಾಗೂ ಜಾತ್ರೆಗೆ ಬಂದ ಭಕ್ತರು ಉತ್ತತ್ತಿ ಬಾಳೆಹಣ್ಣು ರಥಕ್ಕೆ ಹಾರಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಪಾಂಡುರಂಗನಲ್ಲಿ ಪ್ರಾರ್ಥಿಸಿದರು ಹಾಗೂ ಜನಸಾಮಾನ್ಯರ ಹಿತರಕ್ಷಣಾ ಸಮಿತಿಯ ಸದಸ್ಯರಿಂದ ಜಾತ್ರೆಗೆ ಬಂದ ಭಕ್ತಾದಿಗಳಿಗೆ ತಂಪು ಪಾನೀಯ ವಿತರಿಸಲಾಯಿತು ಇದಾದ ನಂತರ ರಾತ್ರಿ ಬಂದ ಭಕ್ತರಿಗೆ ಕಿಲಬನೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ವಿಶೇಷ ಖಡಕ್ ರೊಟ್ಟಿ ಮಾವಿನಕಾಯಿ ಚಟ್ನಿ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.