ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ )ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ದಿ.ಡಾಕ್ಟರ್ ಪುನೀತ್ ರಾಜಕುಮಾರ್ ಅವರ 48ನೇ ವರ್ಷದ ಹುಟ್ಟುಹಬ್ಬ ಸಮಾರಂಭ ಕಾರ್ಯಕ್ರಮವನ್ನು ಆಶ್ರಮದಲ್ಲಿ ವಿವಿಧ ಬಗೆಯ ಮಹಾಪ್ರಸಾದ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ವಿಶೇಷವಾಗಿ ಅಪ್ಪುವಿನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಆಶ್ರಮದಲ್ಲಿನ ಆಶ್ರಯದಾತರುಗಳಾದ ಅನಾಥ ಹಿರಿಯ ವೃದ್ಧರು ಹಾಗೂ ಅನಾಥ ವಯಸ್ಕರ ಬುದ್ಧಿಮಾಂಧ್ಯರ ವತಿಯಿಂದ ಕೇಕ್ ಕತ್ತರಿಸುವ ಮೂಲಕ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮೈಸೂರಿನಲ್ಲಿ ಶಕ್ತಿ ಧಾಮದಲ್ಲಿ ವಿದ್ಯಾಭ್ಯಾಸ ಮಾಡಿದ ಸುಚಿತ್ರಾ ಮಾತನಾಡಿ ಅಪ್ಪುವಿನ ಸೇವೆ ಮಾನವ ಜನ್ಮಕ್ಕೆ ಮಾದರಿಯಾಗಿದೆ ದೇವರ ಸ್ವರೂಪದ್ದಾಗಿದೆ ನಾವು ನಮ್ಮ ಶಕ್ತಿಧಾಮಕ್ಕೆ ಅಪ್ಪು ಬಂದಾಗ ಹಬ್ಬದ ವಾತಾವರಣ ನಮ್ಮೆಲ್ಲರ ಜೊತೆ ಊಟ ಮಾಡುವ ಮೂಲಕ ಎಲ್ಲಾ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಸನ್ನಿವೇಶವನ್ನು ನಾವು ಮರೆಯಲಾಗುವುದಿಲ್ಲ ಕರುನಾಡಿನ ದೊಡ್ಮನೆ ಕುಟುಂಬ ಎಂದು ಹೆಸರಾಗಿರುವ ದೊಡ್ಡ ಮನಸುಗಳ ಅರಮನೆಯಾಗಿದೆ ಅಪ್ಪುವಿನ ಮಾದರಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಹೆಮ್ಮೆಯ ಸಿಂಧನೂರಿನ ಕಾರುಣ್ಯ ಆಶ್ರಮ ನಾಡಿನಲ್ಲಿ ಮನೆ ಮನೆ ಮಾತಾಗಿ ಅದೆಷ್ಟೋ ನೊಂದ ಮನಸ್ಸುಗಳಿಗೆ ಶಾಂತಿ ನೆಮ್ಮದಿಯನ್ನು ಕರುಣಿಸುತ್ತಿದೆ ಇಂದು ಅಪ್ಪುವಿನ ಹುಟ್ಟುಹಬ್ಬವನ್ನು ಇವರ ಜೊತೆ ಆಚರಿಸಿದರೆ ಅವರ ಹೆಸರಿಗೆ ಒಂದು ಶೋಭೆ ಇರುತ್ತದೆ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮದಲ್ಲಿ ನಾನು ನನ್ನ ಮನಸ್ಸಾರೆ ಪಾಲ್ಗೊಂಡಿದ್ದೇನೆ ಎಂದು ಭಾವನಾತ್ಮಕಳಾಗಿ ಮಾತನಾಡಿದರು. ನಂತರ ಮಾತನಾಡಿದ ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು ಪಾ ಹಿರೇಮಠ ಅಪ್ಪು ನಮ್ಮ ದೇಶದ ಮಾನವೀಯತೆಯ ಧರ್ಮವನ್ನು ಎತ್ತಿ ಹಿಡಿಯುವುದರ ಮೂಲಕ ತನ್ನನ್ನು ತಾನೇ ತೆರೆಯ ಹಿಂದೆ ಸಮರ್ಪಿಸಿಕೊಂಡಿದ್ದ ಇಂತಹ ವ್ಯಕ್ತಿಯ ಹುಟ್ಟುಹಬ್ಬದಲ್ಲಿ ಶಕ್ತಿಧಾಮದಲ್ಲಿ ವಿದ್ಯಾಭ್ಯಾಸ ಪಡೆದ ಸುಚಿತ್ರ ನಮ್ಮೊಂದಿಗಿರುವುದು ನಮಗೆ ಬಹಳ ಸಂತೋಷವನ್ನುಂಟು ಮಾಡಿದೆ ಎಂದು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ ಪ್ರಸ್ತಾವಿಕ ನುಡಿಗಳನ್ನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರುಣ್ಯ ಆಶ್ರಮದ ಸಲಹಾ ಸಮಿತಿಯ ಸದಸ್ಯರುಗಳಾದ ಬೂದಿಬಸವ ಸ್ವಾಮಿ. ಮುರಳಿ ಕೃಷ್ಣ ಮೆಕಾನಿಕ್. ಸೂರ್ಯನಾರಾಯಣ ರೆಡ್ಡಿ ಹಾಗೂ ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ. ಸುಜಾತ ಹಿರೇಮಠ. ಇಂದುಮತಿ ಏಕನಾಥ. ಮರಿಯಪ್ಪ ಕರಿಯಪ್ಪ ಬಸವರಾಜ ಸ್ವಾಮಿ ಹಚೋಳ್ಳಿ. ಶರಣಮ್ಮ ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.