ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬನ್ನಿ ತಗೊಂಡು ಬಂಗಾರ ಆಗೋಣ! ನಾಡಹಬ್ಬ ದಸರಾದ ಸಡಗರ-ಸಂಭ್ರಮ

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್

ಲೇ.. ಬಾರೋ ಮಾರಾಯ, ಹಬ್ಬ ಬಂತು ನೋಡ್ತಿಲ್ಲೇನು? ನಮ್ಮ ಕರುನಾಡಿನ ಹೆಮ್ಮೆಯ ಹಬ್ಬ, ಸಾಂಸ್ಕೃತಿಕ ವೈಭವದ ಪ್ರತೀಕವಾಗಿರುವ ದಸರಾ ಅಥವಾ ವಿಜಯದಶಮಿ ಅಂದ್ರೆ ಬರೀ ಹಬ್ಬ ಅಷ್ಟೇ ಅಲ್ಲ, ಅದು ನಮ್ಮ ಮಣ್ಣಿನ ಸಂಸ್ಕೃತಿಯ ಜೀವಾಳ. ನವರಾತ್ರಿಯ ಒಂಬತ್ತು ದಿನಗಳ ಕಾಲ ಸಡಗರದಿಂದ ನಡೆದು, ಕೊನೆಯ ದಿನ ವಿಜಯದಶಮಿಯಂದು ಸಮಾಪ್ತಿಯಾಗುವ ಈ ಹಬ್ಬ ನಮ್ಮ ಗ್ರಾಮೀಣ ಜನಪದರ ಜೀವನಾಡಿಯಾಗಿದೆ.
ಜಾನಪದ ಸಂಸ್ಕೃತಿಯಲ್ಲಿ ದಸರಾದ ಮರುಳಾಗಿಸುವ ಶೈಲಿ.

“ಹಬ್ಬ ಬಂತು ಹಬ್ಬ, ಬನ್ನಿ ಮರದ ಹಬ್ಬ…” ಅಂತ ನಮ್ಮ ಹಳ್ಳಿ ಕಡೆ ಹಾಡ್ತಾರಲ್ಲ, ಅದು ದಸರಾದ ಅಸಲಿ ಗಮ್ಮತ್ತು. ಹಳ್ಳಿಗಳಲ್ಲಿ ದುರ್ಗಾದೇವಿಯ ಮೂರ್ತಿಯನ್ನಿಟ್ಟು, ಒಂಬತ್ತು ದಿನವೂ ಪುರಾಣ, ದೇವಿ ಕಥೆಗಳು, ರಾತ್ರಿ ಹೊತ್ತು ಕೋಲಾಟ, ಭಜನೆ, ಗೀಗೀ ಪದಗಳು, ಮತ್ತು ದೊಡ್ಡಾಟಗಳ ಮೂಲಕ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ದುಷ್ಟ ಶಕ್ತಿಯನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಜಗನ್ಮಾತೆಯ ಕಥೆಯನ್ನು ಹಿರಿಯರು ಜನಪದ ದಾಟಿಯಲ್ಲಿ ಹಾಡುತ್ತಿದ್ದರೆ, ಇಡೀ ಕತ್ತಲೆಯ ರಾತ್ರಿಯೇ ಬೆಳಕಿನ ಹಬ್ಬವಾಗಿ ಬದಲಾಗಿಬಿಡುತ್ತದೆ.
ಬನ್ನಿ ಹಂಚುವ ಬಂಗಾರದ ಸಂಪ್ರದಾಯ
ದಸರಾ ಹಬ್ಬದ ಅತ್ಯಂತ ಪವಿತ್ರ ಮತ್ತು ಸುಂದರವಾದ ಕ್ಷಣ ಅಂದರೆ ಅದು ಬನ್ನಿ ಹಂಚುವುದು. ವಿಜಯದಶಮಿಯ ಸಾಯಂಕಾಲ ಹಳ್ಳಿಯ ಜನರೆಲ್ಲರೂ ಒಟ್ಟಾಗಿ ಸೇರಿ ಬನ್ನಿ ಮಹಾಕಾಳಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಬನ್ನಿ ಎಲೆಗಳನ್ನು ಕೈಯಲ್ಲಿ ಹಿಡಿದು, ಮುಖದಲ್ಲಿ ಮಂದಹಾಸ ಬೀರುತ್ತಾ, ಪರಿಚಯಸ್ಥರು, ಸ್ನೇಹಿತರು ಹಾಗೂ ಹಿರಿಯರ ಬಳಿ ಹೋಗಿ, ಅವರ ಕಾಲಿಗೆ ನಮಸ್ಕರಿಸಿ ಹೀಗೆ ಹೇಳುತ್ತಾರೆ:
“ಬನ್ನಿ ತಗೋರಿ, ಬಂಗಾರ ಆಗಿರಿ, ಒಳ್ಳೆಯದನ್ನೇ ಮಾತಾಡೋಣ, ಒಳ್ಳೆಯದನ್ನೇ ಯೋಚಿಸೋಣ.”
ಈ ಮಾತಿನಲ್ಲಿ ಎಷ್ಟೊಂದು ಮಮತೆ ಅಡಗಿದೆ ಅಲ್ವಾ? ಬನ್ನಿ ಎಲೆಯನ್ನು ಬಂಗಾರಕ್ಕೆ ಹೋಲಿಸಿ, ಪರಸ್ಪರರ ನಡುವಿನ ದ್ವೇಷ, ಅಸೂಯೆಗಳನ್ನು ಮರೆತು, ಪ್ರೀತಿ ಮತ್ತು ಸೌಹಾರ್ದತೆಯಿಂದ ಬಾಳೋಣ ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಬನ್ನಿ ತಗೊಂಡು ಬಂಗಾರದಂತಾಗುವುದು ಎಂದರೆ ಕೇವಲ ಹಣ-ಆಸ್ತಿ ಗಳಿಸುವುದಲ್ಲ, ಮನಸ್ಸನ್ನು ಬಂಗಾರದಂತೆ ಶುದ್ಧವಾಗಿಟ್ಟುಕೊಳ್ಳುವುದು ಎಂದರ್ಥ.

ಸಕಲ ಜೀವಕೋಟಿಗೂ ನಮನ: ಆಯುಧ ಪೂಜೆ
ನಮ್ಮ ಜನಪದರು ಪ್ರಕೃತಿಯನ್ನು, ತಾವು ನಂಬಿದ ಕಾಯಕವನ್ನು ದೇವರಂತೆ ಕಾಣುವವರು. ರೈತ ತಾನು ಹೊಲ ಉಳುವ ನೇಗಿಲಿಗೆ, ಕತ್ತಿಗೆ, ಬಂಡಿಗೆ ಪೂಜೆ ಮಾಡಿದರೆ; ಬೇರೆ ಬೇರೆ ಕಾಯಕ ಮಾಡುವವರು ತಂತಮ್ಮ ಉಪಕರಣಗಳನ್ನು ತೊಳೆದು, ನೀರು ಹಾಕಿ, ಕುಂಕುಮ-ಚಂದನ ಹಚ್ಚಿ ಪೂಜಿಸುತ್ತಾರೆ. “ಕಾಯಕವೇ ಕೈಲಾಸ” ಎಂಬ ತತ್ವಕ್ಕೆ ಈ ಆಯುಧ ಪೂಜೆ ಕನ್ನಡಿ ಹಿಡಿಯುತ್ತದೆ.

ಮೈಸೂರು ದಸರಾದ ರಾಜವೈಭವ

ಹಳ್ಳಿಗಳ ಸಡಗರ ಒಂದು ಕಡೆಯಾದರೆ, ಜಗತ್ಪ್ರಸಿದ್ಧ ಮೈಸೂರು ದಸರಾ ನಮ್ಮ ನಾಡಿನ ರಾಜವೈಭವವನ್ನು ನೆನಪಿಸುತ್ತದೆ. ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿ ಹೊತ್ತ ಆನೆಗಳ ಗಾಂಭೀರ್ಯದ ನಡಿಗೆ, ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆ, ಮತ್ತು ವಿದ್ಯುತ್ ದೀಪಗಳಿಂದ ಝಗಝಗಿಸುವ ಅರಮನೆಯ ನೋಟ ಇಡೀ ಜಗತ್ತನ್ನೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡುತ್ತದೆ.

ಬನ್ನಿ ತಂಗೊಂಡು ಜೊತೆಯಾಗಿ ಸಾಗೋಣ,
ಬಂಗಾರದಂತೆ ಎಲ್ಲರೂ ಹೊಳೆಯೋಣ,
ಸಂತೋಷದ ಪಯಣದಲಿ,
ಪ್ರೀತಿಯ ಹಣತೆಯನ್ನು ಹಚ್ಚೋಣ.
ನೆನ್ನೆ-ನಾಳೆಯ ಚಿಂತೆಯ ಬಿಟ್ಟು,
ಇಂದಿನ ಕ್ಷಣವನು ಸವಿಯೋಣ.
ಸೇರಿದ ಒಡನಾಟ ಚಿನ್ನದ ಗಣಿ,
ಮಾತುಗಳೆಲ್ಲವೂ ಮುತ್ತಿನ ಮಣಿ,
ಕಷ್ಟದ ಸುಳಿಗೆ ಸಿಲುಕದ ಹಾಗೆ,
ನೆಮ್ಮದಿಯ ಹಾದಿಯ ಸವಿಯೋಣ.
ಬನ್ನಿ ತುಂಬಾ ಬಂಗಾರದ ಹಾಗೆಯೇ ಇರೋಣ,

ಹೀಗೆ ದಸರಾ ಹಬ್ಬವು ನಮ್ಮ ಬದುಕಿನಲ್ಲಿ ಹೊಸ ಭರವಸೆ, ಉತ್ಸಾಹ ಮತ್ತು ವಿಜಯದ ಸಂಕೇತವಾಗಿ ಬರುತ್ತದೆ. ಈ ಹಬ್ಬದ ಶುಭ ಸಂದರ್ಭದಲ್ಲಿ ನಾವೆಲ್ಲರೂ ಮನಸ್ಸಿನ ಕಹಿ ನೆನಪುಗಳನ್ನು ಮರೆತು, ಪ್ರೀತಿಯ ಬನ್ನಿ ಎಲೆಯನ್ನು ಹಂಚುತ್ತಾ ಬಂಗಾರದಂತಹ ಮನಸ್ಸಿನಿಂದ ಬಾಳೋಣ. ಎಲ್ಲರಿಗೂ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!