
ಕೊಪ್ಪಳ/ ಯಲಬುರ್ಗಾ : ಪ್ರಜಾಪ್ರಭುತ್ವದ ವ್ಯವಸ್ಥೆ ಯಲ್ಲಿ ಪತ್ರಿಕೆಗಳು ನಾಲ್ಕನೆಯ ಅಂಗವಾಗಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ
ಸಮಾಜ ಪರಿವರ್ತನೆಯಲ್ಲಿ ಬಹು ದೊಡ್ಡ ಪಾತ್ರ ವಹಿಸುತ್ತವೆ, ಇಂತಹ ಮಹತ್ವದ ಕಾರ್ಯಕ್ಕೆ ಕೈ ಹಾಕಿದ, ಕೋಳಿಹಾಳ ಗ್ರಾಮದ ಪ್ರತಿಭಾವಂತ ಬರಹಗಾರ, ಹನುಮಂತಪ್ಪ ವಡ್ಡರ, ಪತ್ರಿಕಾ ರಂಗದಲ್ಲಿ ಎತ್ತರದ ಸ್ಥಾನಕ್ಕೆ ಏರಲಿ ಎಂದು ಶಿಕ್ಷಕ, ಸಾಹಿತಿ ಕಲ್ಲಪ್ಪ ಕವಳಕೇರಿ ಸುದ್ದಿ ಸೇವಕ ಪತ್ರಿಕೆಯ ಲೋಕಾರ್ಪಣೆಯ ಸಂದರ್ಭದಲ್ಲಿ ಅತಿಥಿಗಳಾಗಿ ಮಾತನಾಡಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದಾವಣಗೆರೆ ಯ ಮುಷ್ಟೂರ್ ಮಠದ ಸ್ವಾಮೀಜಿಗಳಾದ ಶ್ರೀ ಮಂಜುನಾಥ ಅವರು ವಹಿಸಿದ್ದರು,
ಅವರು ವೇದಿಕೆಯ ಮುಂಭಾಗದಲ್ಲಿದ್ದ ಸಸಿಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ವಿಶೇಷತೆ ಏನೆಂದರೆ ನೂರು ವಸಂತಗಳನ್ನು ಪೂರೈಸಿದ, ಗ್ರಾಮದ ಇಬ್ಬರು ಶತಾಯುಷಿಗಳಾದ ಶ್ರೀಮತಿ ಹುಲಿಗೆಮ್ಮೆ ಗಂಡ ದಿ.ತಿಪ್ಪಣ್ಣ ಭಜಂತ್ರಿ, ಶ್ರೀಮತಿ ಕೊಟ್ರಮ್ಮ ಗಂ.ಬಸನಗೌಡ ಕರೆಹನುಮನಗೌಡ್ರ ವೇದಿಕೆಯಲ್ಲಿದ್ದು ಶುಭ ಆಶೀರ್ವಾದ ನೀಡಿದರು.
ವೇದಿಕೆಯಲ್ಲಿ ಶಿಕ್ಷಕರಾದ ಕಳಕೇಶ ಬಳಿಗಾರ, ಮಹೇಶ್ವರ ಕಟಗಿ,ಉಪನ್ಯಾಸಕರು ದಯಾನಂದ ಮುಂಡರಗಿ ,ಕರುನಾಡ ಕಂದ ಪತ್ರಿಕೆಯ ಸಂಪಾದಕ ಬಸವರಾಜ್ ಬಳಿಗಾರ,ಚಾಣಕ್ಯ ಪ್ರಭ ಸಂಪಾದಕ ಲೋಕೇಶ ಭಜಂತ್ರಿ,ಜಿಲ್ಲಾ ವರದಿಗಾರರಾದ ಶ್ರೀಕಾಂತಗೌಡ ಪಾಟೀಲ ಎಚ್., ವೆಂಕಟೇಶ್, ರವಿಚಂದ್ರ ಸೇರಿದಂತೆ ಮುಂತಾದವರು ಇದ್ದರು.
ಲೋಕೇಶ ಭಜಂತ್ರಿ ಅವರು ತಮ್ಮ ಪತ್ರಿಕೆಯ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಲೋಕಾರ್ಪಣೆಯಾದ ಸುದ್ದಿ ಸೇವಕ ಪತ್ರಿಕೆ, ನಾಡಿನೆಲ್ಲೆಡೆ, ಹೆಸರು ವಾಸಿಯಾಗಲಿ ಎಂದು ಹಾರೈಸಿದರು.
ಮತ್ತೋರ್ವ ಅತಿಥಿಗಳಾದ ದಯಾನಂದ ಮುಂಡರಗಿ ಅವರು ಪರಿಶ್ರಮಕ್ಕೆ ಬೆಲೆ ಸಿಗುತ್ತದೆ, ಪತ್ರಿಕೆ,ರಾಜ್ಯ, ದೇಶ,ಎಲ್ಲೆಡೆ ಹಬ್ಬಲಿ ಎಂದು ಹಾರೈಸಿದರು.
ಪತ್ರಿಕೆಯ ಸಂಪಾದಕರಾದ
ಹನುಮಂತಪ್ಪ ವಡ್ಡರ ತಾವು ಪತ್ರಿಕೆ ಮಾಡುತ್ತಿರುವ ಉದ್ದೇಶ, ಜನ ಜಾಗೃತರಾಗಿ, ಜನತೆಯ ಸಮಸ್ಯೆಗಳು ಪರಿಹಾರವಾಗಬೇಕು, ಆಗಲೇ ನನ್ನ ಮನಸಿಗೆ ಸಮಾಧಾನ ಎಂದು ಪ್ರಾಸ್ತಾವಿಕವಾಗಿ ಮಾತಾಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಹೇಶ್ವರ ಕಟಗಿಯವರೂ ಪತ್ರಿಕೆಯ ಮೊದಲ ಚಂದಾದಾರ ನಾನೇ ಆಗುವ ಮೂಲಕ ಈ ಪತ್ರಿಕೆಯ ಸಂಪಾದಕರಿಗೆ ಶುಭ ಕೋರುವೆ ಎಂದರು.
ಸಾನಿಧ್ಯ ವಹಿಸಿದ್ದ ಮುಷ್ಟೂರ್ ಮಠದ ಸ್ವಾಮೀಜಿಗಳು, ಪತ್ರಿಕೆಯ ಕೆಲಸ, ಸುಲಭದ್ದಲ್ಲ, ಅನೇಕ ಸಂಕಷ್ಟ ಗಳನ್ನು ಎದುರಿಸಬೇಕಾಗವುದು, ಅದಕ್ಕೆ ಧೈರ್ಯ ಬೇಕು ಅಂತಹ ಧೈರ್ಯ, ಹನುಮಂತಪ್ಪನಿಗೆ ಇದೆ, ಅವರಿಗೆ ಎಲ್ಲಾ ಕಡೆಯಿಂದ ಬೆಂಬಲ, ಹಾರೈಕೆ, ಇರಲೆಂದು ಆಶಿಸುತ್ತೇನೆ, ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಶಿವಪ್ರಸಾದ್ ಹಾದಿಮನಿ ಯವರು ನಿರೂಪಿಸಿ, ವಂದಿಸಿದರು.




















