
ಕೊರಟಗೆರೆ ತಾಲೂಕು ಆಡಳಿತ ದಂಡಾಧಿಕಾರಿಗಳಿಂದ ದಸರಾ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ತಾಲೂಕಿನ ಆಡಳಿತ ವರ್ಗ ಮತ್ತು ಧಾರ್ಮಿಕ ತಂಡಗಳ ನಿರ್ದೇಶಕರುಗಳಿಂದ ಪಟ್ಟಣದ ಗೋಕುಲ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬನ್ನಿ ಮರದ ಸಂಭ್ರಮ ಶಮಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ತಾಲೂಕಿನ ತಹಶೀಲ್ದಾರ್ ಶರತ್ ಕುಮಾರ್ ರವರು ಸಾಂಪ್ರದಾಯಿಕ ಮುಹೂರ್ತದಲ್ಲಿ ಪಟ್ಟದ ಕತ್ತಿಯನ್ನು ಬನ್ನಿ ಮರದ ಬಳಿ ಇರಿಸಿ ರಾಜಗಾಂಭೀರ್ಯದಿಂದ ವಿಶೇಷ ಪೂಜೆ ನೆರವೇರಿಸಿ ಬನ್ನಿ ಬಲಿ ಮಾಡುವುದರ ಮುಖಾಂತರ ತಾಲೂಕಿನ ಎಲ್ಲಾ ಜನರಿಗೂ ದಸರಾ ವಿಜಯದಶಮಿಯ ಶುಭಾಶಯಗಳು ತಿಳಿಸಿದರು.
ಬನ್ನಿ ಮರ ಬಲಿ ನೀಡಿ ಕ್ಷೇತ್ರದ ಎಲ್ಲರಿಗೂ ಸ್ವಾಮಿಯ ಕೃಪೆ ಮತ್ತು ಆಶೀರ್ವಾದಗಳು ಸಿಗಲಿ ಒಳ್ಳೆ ಮಳೆ ಬೆಳೆಯಾಗಿ ಎಲ್ಲರ ಮನಸ್ಸಲ್ಲಿ ಸಂತೋಷದಿಂದ ಕೂಡಿರಲಿ ಎಂದು ಆಶಿಸಿದರು.
ಈ ಬನ್ನಿವೃಕ್ಷ ದೈವ ಸ್ವರೂಪಿ ವಿಜಯ ದಶಮಿ ಬಂದಿತೆಂದರೆ ಬನ್ನಿಯನ್ನು ಎಲ್ಲರೂ ನೆನೆಯುತ್ತಾರೆ ಸಂಭ್ರಮದ ದಸರಕ್ಕೆ ತೆರೆ ಬೀಳುವುದು ಈ ಬನ್ನಿ ಮರದಿಂದಲೇ ಎಂದು ಗೊಂದಿಹಳ್ಳಿ ರಂಗರಾಜು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಸಿಇಓ ಉಮೇಶ್ ಕೆ ಎಸ್, ಬಸವರಾಜ್ ಆರ್ ಐ, ರಘು,
ಗೊಂದಿಹಳ್ಳಿ ರಂಗರಾಜು, ಮಂಜುನಾಥ್ ಟಿ ಕೆ ಎಂ, ನರಸಿಂಹರಾಜು ಎಲ್ ಕರವೇ
ಇನ್ನು ಅನೇಕರು ಭಾಗಿಯಾಗಿ ಸ್ವಾಮಿ ಕೃಪೆಗೆ ಪಾತ್ರರಾದರು.




















