ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಹಾಗೂ ಹೆಬ್ಬಾಲೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಮಾಜಿ ಸದಸ್ಯರಾದ ಸುರೇಶ್ ಗೌಡ ಅವರ ಮಗನಾದ ರಘು ಇವರು ಈ ಬಾರಿಯ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ವಿಶೇಷವಾಗಿದೆ. ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರ ಅಣ್ಣ ಹೆಚ್ಎಸ್ ಅಶೋಕ್ ಅವರು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದು, ಅವರ ತಂದೆಯು ಕೂಡ ಮಾಜಿ ಜಿಲ್ಲಾ ಪಂಚಾಯತ್ ಕ್ಷೇತ್ರ ಸದಸ್ಯರಾಗಿರುತ್ತಾರೆ . ಒಂದು ವೇಳೆ ಇವರಿಗೆ ಬಿಜೆಪಿ ಪಕ್ಷದ ವತಿಯಿಂದ ಟಿಕೆಟ್ ಸಿಕ್ಕಿ ಇವರು ಗೆಲುವು ಸಾಧಿಸಿದರೆ ಕೊಡಗು ಜಿಲ್ಲೆಯ ಮಟ್ಟಿಗೆ ಇದೊಂದು ದಾಖಲೆಯಾಗಲಿದೆ. ರಘು ಇವರು ರೈಸ್ ಮಿಲ್ ಮಾಲೀಕರಾಗಿದ್ದು, ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇವರು ಪೆಟ್ರೋಲ್ ಬಂಕ್ ಮಾಲೀಕರಾಗಿದ್ದು ಹೆಬ್ಬಾಲೆ , ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಇವರು ಅಪಾರ ಜನರ ಪ್ರೀತಿಯನ್ನು ಗಳಿಸಿದ್ದು, ಹಲವಾರು ಬಡ ಜನರಿಗೆ ಸಹಾಯವನ್ನು ಮಾಡಿರುತ್ತಾರೆ. ಜಾತಿಭೇದ ಮಾಡದೆ ಎಲ್ಲರ ಕಷ್ಟವನ್ನು ಹತ್ತಿರದಿಂದ ಅರಿತಿದ್ದು ಜನನಾಯಕ ಎಂದೇ ಗುರುತಿಸಿಕೊಂಡಿದ್ದಾರೆ ಬಿಜೆಪಿ ಅವರ ಪಾಲಿಗೆ ಒಲಿಯಲಿದೆ ಎಂದು ನೋಡಬೇಕಾಗಿದೆ.




















