ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಟರಾಜನ ಸನ್ನಿಧಿಯಲ್ಲಿ ನೃತ್ಯ ವೈಭವ: ಚಿದಂಬರಂ ದೇವಾಲಯಕ್ಕೆ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಆರು ಜನ ಗ್ರಾಮೀಣ ಪ್ರತಿಭೆಗಳ ಆಯ್ಕೆ !

ವಿಶ್ವವಿಖ್ಯಾತಿ ಪಡೆದಿರುವ ತಮಿಳುನಾಡಿನ ಐತಿಹಾಸಿಕ ಚಿದಂಬರಂನ ತಿಲೈ ನಟರಾಜ ದೇವಾಲಯದಲ್ಲಿ ನೃತ್ಯ ಸೇವೆ ಸಲ್ಲಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವ ಗುರುಗಳಾದ ಶ್ರೀಮತಿ ಶ್ವೇತಾನಾಗರಾಜ್ ಸಾರಥ್ಯದಲ್ಲಿನ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಗ್ರಾಮೀಣ ಪ್ರದೇಶದ ಐವರು ಪ್ರತಿಭಾನ್ವಿತ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ನಾಟ್ಯ ಕ್ಷೇತ್ರಕ್ಕೆ ಮತ್ತು ತಮ್ಮ ಊರಿಗೆ ಅಪಾರ ಹೆಮ್ಮೆ ತಂದಿದ್ದಾರೆ.

ಭರತನಾಟ್ಯದ ನೃತ್ಯ‌ ಕ್ಷೇತ್ರದ ದಿಗ್ಗಜ ನಾಯಕ, ಭರತನಾಟ್ಯದ ಪರಮೋಚ್ಛ ವೇದಿಕೆ ಎಂದೇ ಪರಿಗಣಿತವಾಗಿರುವ ಚಿದಂಬರಂ ತಿಲೈ ನಟರಾಜ ದೇವಾಲಯದಲ್ಲಿ ಮುಂಬರುವ ಆಕ್ಟೋಬರ್ 25 ನೇ ಭಾನುವಾರದಂದು ನಡೆಯಲಿರುವ ಪ್ರತಿಷ್ಠಿತ ನೃತ್ಯ ಸೇವೆಯಲ್ಲಿ ಪಾಲ್ಗೊಳ್ಳಲು ಶ್ವೇತಾಂಜಲಿ ಭರತನಾಟ್ಯ ಶಾಲೆಯ ತಾನೀಶ್.ಎನ್, ಕು.ಜಾನವಿ.ಪಿ.ರೆಡ್ಡಿ, ಕು.ಗಮ್ಯಶ್ರೀ, ಎ.ಆರ್ ಕು.ದೀಕ್ಷಾ,
ಕು. ಸುರೇಖಾ.ಪಿ ಹಾಗೂ ಕು.ಮೋಕ್ಷಿತ.ಎಂ ಅವರಿಗೆ ಈ ಮಹತ್ತರ ಪುಣ್ಯಕ್ಷೇತ್ರಲ್ಲಿ ನೃತ್ಯದ ಹೆಜ್ಜೆ ಹಾಕುವ ಸೌಭಾಗ್ಯ ಲಭಿಸಿದೆ.

ಈ ಐದು ಪ್ರಬುದ್ದ ವಿದ್ಯಾರ್ಥಿಗಳು ತಮ್ಮ ನಾಟ್ಯ ಗುರುಗಳು, ಅನಿಕೇತನ, ಕನ್ನಡ ವೈಭವ, ಕಿತ್ತೂರು ರಾಣಿ ಚೆನ್ನಮ್ಮ, ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶ್ವೇತಾ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದ ಮೂಲಕ ಈ ಉನ್ನತ ಮಟ್ಟದ ನೃತ್ಯ ಸೇವೆಗೆ ಆಯ್ಕೆಯಾಗಿದ್ದಾರೆ. ತಮಿಳುನಾಡಿನ ತಿಲೈ ನಟರಾಜನ ಅಂಗಳದಲ್ಲಿ ತಮ್ಮ ನಾಟ್ಯ ವೈಭವವನ್ನು ಪ್ರದರ್ಶಿಸಲು ಐವರೂ ಉತ್ಸುಕರಾಗಿದ್ದು, ಶಾಲೆಯ ಹೆಮ್ಮೆಯ ಪೋಷಕರು ಹಾಗೂ ಭರತನಾಟ್ಯದ ಕಲಾಭಿಮಾನಿಗಳು ವಿದ್ಯಾರ್ಥಿಗಳಿಗೆ ಮತ್ತು ಗುರುಗಳಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!