ಸಂಘಟನೆ ಸೃಜನ್ ಅಭಿಯಾನ -2 ರ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಕುರಿತು ಕೆಪಿಸಿಸಿ ವತಿಯಿಂದ ಜಿಲ್ಲಾ ಉಸ್ತುವಾರಿ ವೀಕ್ಷಕರಾಗಿ ನೇಮಕಗೊಂಡ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ಅರವಿಂದ್ ಕುಮಾರ್ ಅರಳಿ, ಕೆಪಿಸಿಸಿ ಸಂಯೋಜಕರುಗಳಾದ ಶ್ರೀ ಲಕ್ಷ್ಮೀಪತಿ, ಶ್ರೀಮತಿ ಅಕ್ಕಮಹಾದೇವಿ ಆರ್. ಪಾಟೀಲ್ ರವರು ದಿ. 24-10-2026 ರಂದು ಮಧ್ಯಾಹ್ನ 2 ಗಂಟೆಗೆ ಕಮಲಾಪುರ ಪಟ್ಟಣದ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ನಡೆಸಲಿದ್ದಾರೆ.
ಕಾರಣ ಈ ಸಭೆಗೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಕಮಲಾಪುರ ಬ್ಲಾಕಿಗೆ ಸಂಬಂಧಿಸಿದ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸದಸ್ಯರು, ಡಿಸಿಸಿ ಡೆಲಿ ಗೇಟ್ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಘಟಕ/ ವಿಭಾಗ /ಸೆಲ್ ಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮುಖಂಡರು, ಹಾಲಿ ಹಾಗೂ ಮಾಜಿ ಚುನಾಯಿತ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿರಬೇಕೆಂದು ಕೋರುತ್ತಾ ಈ ಸಂದರ್ಭದಲ್ಲಿ ಆಕಾಂಕ್ಷಿಗಳು ಉಸ್ತುವಾರಿ ವೀಕ್ಷಕರಿಗೆ ಅರ್ಜಿ ಸಲ್ಲಿಸಬಹುದೆಂದು ಸೂಚಿಸಿರುತ್ತಾರೆ
ವೈಜನಾಥ ಜಿ ತಡಕಲ್ಲ, ಅಧ್ಯಕ್ಷರು
ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಇವರು ಈ ಸಂದೇಶವನ್ನು ಸಂಬಂಧಪಟ್ಟ ಎಲ್ಲಾ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ತಲುಪಿಸಬೇಕೆಂದು ಕೋರಿದ್ದಾರೆ.




















