ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾಹುಕಾರನ ತಂತ್ರಕ್ಕೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಓಟುಗಳು ಅತಂತ್ರ

ಬೆಳಗಾವಿ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಓಟುಗಳು ಮುಂಬರುವ ಚುನಾವಣೆಯಲ್ಲಿ ಮತದಾರ ಯಾವ ಪಕ್ಷದ ಪರವಾಗಿಯೂ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ‌ಕಾರಣ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಈ ಮೊದಲು ಇದ್ದಂತಹ ಮನಸ್ಥಿತಿ ಈಗ ಉಳಿದುಕೊಂಡಿಲ್ಲ ಕಾರಣ ಆಮಿಷಗಳ ಸರಮಾಲೆಗಳ ಸುರಿಮಳೆ ಇಡಿ ಗ್ರಾಮೀಣ ಭಾಗದ ಮತಕ್ಷೇತ್ರದಲ್ಲಿ ಯಾರು ಏನು ಕೊಡುತ್ತಾರೆ ಯಾವಾಗ ಕೊಡುತ್ತಾರೆ ಎಂಬ ಲೆಕ್ಕಾಚಾರ ಮತದಾರರಲ್ಲಿ ಕುತೂಹಲ ಮೂಡಿಸಿದೆ ಜೊತೆಗೆ ಪ್ರಮುಖ ರಾಷ್ಟ್ರೀಯ ಪಕ್ಷಗಳ ಪೈಪೋಟಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಡೆ ಜಾತ್ಯತೀತ ಜನತಾದಳದ ನಡೆ ನಿಗೂಢತೆಯಲ್ಲಿ ಸ್ಪಷ್ಟವಾದ ಚಿತ್ರಣ ಸಿಗುವುದು ಕಲ್ಪನೆಗೂ ನಿಲುಕದ ಸ್ಥಿತಿ ನಿರ್ಮಾಣವಾಗಿದೆ ಏಕೆಂದರೆ ಒಂದು ಕಡೆ ಸಾಹುಕಾರನ ಅಭಿಮಾನಿಗಳ ಸಮಾವೇಶ ಬಾಡೂಟ ಕಾಣಿಕೆ.ಸಭೆ ಸದ್ದು ಮಾಡುತ್ತಿದ್ದರೆ ಇನ್ನೊಂದು ಕಡೆ ಹೆಬ್ಬಾಳಕರ ಅವರ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಮುಂದುವರಿದಿದೆ ಇನ್ನು ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀ ಶಂಕರಗೌಡ ಪಾಟೀಲ ಅವರ ಭೇಟಿ ನೀಡುತ್ತಿದ್ದು ಮೊದಲ ಒಂದು ಸುತ್ತು ಪರಿಚಯಿಸಿಕೊಂಡು ಚುನಾವಣೆಯ ಹೊಸ್ತಿಲಲ್ಲಿ ಮತದಾರನ ಬೆಂಬಲ ಪಡೆದುಕೊಳ್ಳುವ ಯೋಜನೆಗಳು ಗರಿಗೆದರುತ್ತಿವೆ ಇನ್ನೂ ಚತುರ್ಥಿ ಪಕ್ಷ ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಪ್ರಾಬಲ್ಯವನ್ನು ಮರುಕಳಿಸುವ ಸಾಧ್ಯತೆ ದಟ್ಟವಾಗುತ್ತಿವೆ ಕಾರಣ ಸಹಜವಾಗಿ ಮರಾಠಿ ಭಾಷಿಕರ ಮತಗಳನ್ನು ಮಾತ್ರ ಕೇಂದ್ರಿಕಸುವ ಚೈತನ್ಯ ಹಾಲಿ ಶಾಸಕರಿಗೆ ಚಿಂತೆಯನ್ನುಂಟು ಮಾಡದಿದ್ದರು ಬೆಂಬಲವಾಗಿ ನಿಂತ ಸಾಹುಕಾರನ ಆಟ ನಿಲ್ಲುವುದಿಲ್ಲ ಎಂಬ ಸಂದೇಶ ದಿನದಿಂದ ದಿನಕ್ಕೆ ಕಾವೆರುತ್ತಿದ್ದು ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗಿದ್ದು ಗುಟ್ಟಾಗೆನು ಉಳಿದಿಲ್ಲ ಇದ್ದಕ್ಕೆ ಇಂಬು ನೀಡುವಂತೆ ಹಾಲಿ ಐದು ಜನ ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಸದಸ್ಯರನ್ನು ರಮೇಶ್ ಜಾರಕಿಹೊಳಿ ತಮ್ಮೆಡೆಗೆ ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬ ಪಿಸುಮಾತುಗಳು ಕ್ಷೇತ್ರದಲ್ಲಿ ಗೊಂದಲವನ್ನುಂಟು ಮಾಡಿವೆ ಪ್ರಮುಖ ನಾಯಕರ ಗೊಂದಲಗಳು ಕಾರ್ಯಕರ್ತರ ಮೇಲೆ ಅತೀಯಾದ ಪರಿಣಾಮ ಬೀರಿದ್ದು ಇದರ ಬಿಸಿ ಬಿಸಿಲಿನ ಬೇಗೆಯಂತೆ ಮತದಾರನ ಮೇಲೆ ಗಂಭೀರ ಪರಿಣಾಮ ಬೀರಿದ್ದು ಸಹಜವಾಗಿ ಇದರ ನಷ್ಟ ಹೆಚ್ಚಾಗಿ ಹಾಲಿ ಶಾಸಕಿಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರ ಮತಗಳು ಅವರ ಕೈ ಜಾರಿ ಹೋಗಬಹುದೆಂಬ ಆತಂಕ ಮನೆಮಾಡಿದೆ ಸಹಜವಾಗಿ ಮತದಾರನಂತೆ ಕಾರ್ಯಕರ್ತರಲ್ಲಿಯು ಮೊದಲಿನ ವಿಶ್ವಾಸ್ ನಂಬಿಕೆ ಅದನ್ನು ಛಿದ್ರ ಮಾಡುವಲ್ಲಿ ಸಹಕಾರಿಯಾಗಿದೆ ಎಂಬುವುದು ಸಾಹುಕಾರನ ಲೆಕ್ಕಾಚಾರ ಸರಿ ಇದ್ದರು ಸಹ ಮರಾಠಾ ಸಮುದಾಯದ ಮತಗಳು ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಕೇವಲ ಕೇಂದ್ರಿಕೃತವಾದರೆ ಎರಡು ರಾಷ್ಟ್ರೀಯ ಪಕ್ಷಗಳು ನೆಲೆ ಕಳೆದುಕೊಳ್ಳುವ ಭೀತಿ ಇದೆ ಎಂದು ನಿಸ್ಸಂದೇಹವಾಗಿ ದಟ್ಟವಾಗುತ್ತಿವೆ ಇದರ ಮಧ್ಯೆ ಜಾತ್ಯತೀತ ಜನತಾದಳದ ಪ್ರಣಾಳಿಕೆಯ ಪ್ರಭಾವ ಕ್ಷೇತ್ರದಲ್ಲಿ ಆದರೂ ಏನು ಅಚ್ಚರಿಯಿಲ್ಲ ಏಕೆಂದರೆ ಮುಂದಿನ ದಿನಗಳಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಗಳಿವೆ ಹೀಗಾಗಿ ಗೆಲ್ಲುವ ಕುದುರೆ ಮೇಲುನೋಟಕ್ಕೆ ಇವರೇ ಎಂದು ಹೇಳಿದರು ಎದುರಾಗುವ ಅಡೆತಡೆಗಳನ್ನು ಎದುರಿಸುವ ಚಾಕಚಕ್ಯತೆಯ ತಂತ್ರಗಳನ್ನು ಮೀರಿದ ಚುನಾವಣೆ ಇದಾಗಲಿದೆ ಜೊತೆಗೆ ಏಕಪಕ್ಷೀಯ ಪ್ರಾಬಲ್ಯ ಯಾವುದೇ ಪಕ್ಷಗಳಿಗೆ ಮತದಾರ ತನ್ನ ಒಲವನ್ನು ತೋರಿಸಿಕೋಡುತ್ತಿಲ್ಲ ಕಾರಣ ಒಂದಲ್ಲ ಎರಡಲ್ಲ ಈಗಾಗಲೇ ಹಲವು ನಿರೀಕ್ಷೆಗಳನ್ನು ಮನದಲ್ಲಿ ಇಟ್ಟುಕೊಂಡು ಅಪೇಕ್ಷೆಯ ಆಗರ ಮನೆಮಾಡಿಕೊಂಡಿರುವ ಗ್ರಾಮೀಣ ಮತಕ್ಷೇತ್ರದ ಓಟುಗಳು ಛಿದ್ರವಾಗಿ ಯಾರೇ ಗೆಲುವು ಸಾಧಿಸಬಹುದು ಅದು ಬಹು ದೊಡ್ಡ ಅಂತರದ ಗೆಲುವು ಅಸಾಧ್ಯ ಎಂಬುವುದು ಪ್ರಸ್ತುತ ಕ್ಷೇತ್ರದ ಸ್ಥಿತಿಗತಿಯಾಗಿದೆ ಮತ್ತಷ್ಟು ಚತುರ್ಥ ನಾಯಕರ ಪಕ್ಷದ ಲೆಕ್ಕಾಚಾರ ಏನು ತಂತ್ರಗಳನ್ನು ದಾಳಗಳೂ ಉದುರುತ್ತವೆ ಎಂಬುವುದನ್ನು ಕಾದುನೋಡಬೇಕಿದೆ…

ವರದಿ-ದಿನೇಶಕುಮಾರ
ಅಜಮೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ