ತಿಪಟೂರು: ಕರ್ನಾಟಕ ಚಲನಚಿತ್ರೊತ್ಸವ ಧಾರವಾಡ ರಂಗಾಯಣದಲ್ಲಿ ಕರ್ನಾಟಕ ಚಲನಚಿತ್ರ ಮತ್ತು ಕಿರುಚಿತ್ರ ಕಲಾವಿದರ ಮಂಡಳಿ( ರಿ) ಹುಬ್ಬಳ್ಳಿಯವರು ಕಲಾಪೋಷಕರಾದ ಶ್ರೀ ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ಫಿಲಂ ಫೆಸ್ಟಿವಲ್ ಹಾಗು ಅಪ್ಪು ಜನ್ಮದಿನಾರಣೆ ಅದ್ದೂರಿ ಸಮಾರಂಭದಲ್ಲಿ ಕಲ್ಪತರು ನಾಡಿನ ಹೆಮ್ಮಯ ಸುಪುತ್ರ “ರೈತಕವಿ” ಡಾ.ಪಿ.ಶಂಕರಪ್ಪ ಬಳ್ಳೇಕಟ್ಟೆರವರಿಗೆ ಅವರ ಜೀವಮಾನದ ಸಾಧನೆ ಗುರುತಿಸಿ ರಾಜ್ಯಮಟ್ಟದ ಅತ್ಯುನ್ನತ “ರಾಜರತ್ನ” ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.ಈ ಸಂದರ್ಭದಲ್ಲಿ ಪ್ರಖ್ಯಾತ ನಟ ಸುರೇಶ್ ಹೆಬ್ಳೀಕರ್,ಆಯೋಜಕ ಚಂದ್ರಶೇಖರ್ ಮಾಡಲಗೇರಿ,ಸಂತೋಷ ಭದ್ರಾಪುರ,ಪ್ರಭಾವಿ ಮುಖಂಡ ಮಂಜುನಾಥ ಹಗೇದಾರ ,ಡಾ.ಪಲ್ಲಕ್ಕಿ ರಾಧಕೃಷ್ಣ,ಡಾ.ಪ್ರಭು ಅ ಗಂಜಿಹಾಳ,ವೀರೇಶ್ ಹಂಡಗಿ,ಯೋಗ ಗುರು ಮನಿಷಾ ಹೂಲಿ, ಚಿತ್ರನಿರ್ದೇಶಕ ಅರವಿಂದ ಮುಳಗುಂದ, ಗೀತರಚನೆಕಾರ ಮನ್ವರ್ಷಿನಲವಗುಂದ, ಹಿರಿಯ ಸಾಹಿತಿ ಸುರೇಶ್ ಕೊರಕೊಪ್ಪ,ರೂಪದರ್ಶಿ ಕು. ವರ್ಷಿಣಿ ಮುಂತಾದವರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.