ಸಿಂಧನೂರು// ಮಾರ್ಚ್. 17. ಸಿಂಧನೂರು ತಾಲೂಕಿನ ಜಾಲಿಹಾಳ್ ಗ್ರಾಮದಲ್ಲಿ ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಅಭಿಮಾನಿಗಳು, ಜಾಲಿಹಾಳ ಗ್ರಾಮ ಮತ್ತು ಗಾಂಧಿನಗರ ಗ್ರಾಮದ ಯುವಕರು ಸೇರಿ ಕಬ್ಬಡ್ಡಿ ಕ್ರೀಡೆ ಆಡುವುದರ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಾಚರಣೆ ಮಾಡಿದರು. ಜಾಲಿಹಾಳ ಗ್ರಾಮದ ಯುವ ಮುಖಂಡರಾದ ರಾಜೇಶ್ H ನಾಯಕ ಅವರು ಮಾತನಾಡಿ,ಪುನೀತ್ ರಾಜಕುಮಾರ್ ಅವರು ಯೋಗಾಸನ ಮತ್ತು ವ್ಯಾಯಾಮ ಮಾಡುವುದರ ಮೂಲಕ ಅತಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು ಹಾಗೂ ಕ್ರೀಡಾಪಟುಗಳ ಹಾಗೆ ತಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುವುದರ ಮೂಲಕ ರಾಜ್ಯದ ಯುವಕರಿಗೆಲ್ಲ ಸ್ಪೂರ್ತಿಯಾಗಿದ್ದರು.ವ್ಯಕ್ತಿಯ ಮಾನಸಿಕ, ದೈಹಿಕ ಸದೃಢತೆಗೆ ಮತ್ತು ಆರೋಗ್ಯ ವೃದ್ದಿಗಾಗಿ ಕ್ರೀಡೆಗಳು ಅತ್ಯಂತ ಅವಶ್ಯಕವಾಗಿವೆ ಆದ್ದರಿಂದ ನಾವು ಅವರ ಅಭಿಮಾನಿಗಳಾಗಿ ಪವರ್ ಆಫ್ ಯೂತ್ ಎಂಬ ಅವರ ಹೇಳಿಕೆಯಿಂದ ಕ್ರೀಡಾ ಚಟುವಟಿಕೆಯನ್ನು ನಮ್ಮ ಗ್ರಾಮದಲ್ಲಿ ಹಮ್ಮಿಕೊಳ್ಳುವುದರ ಮೂಲಕ ಅಪ್ಪು ಅವರ ಹುಟ್ಟುಹಬ್ಬವನ್ನು ಸಂಭ್ರಮಾಚರಣೆಯನ್ನು ಮಾಡಿದೆವು ಎಂದು ಹೇಳಿದರು. ನಂತರ ಈ ಕಾರ್ಯಕ್ರಮದ ನೇತೃತ್ವ ಇಂಡಿಯನ್ ಆರ್ಮಿ ತಂಡ ಜಾಲಿಹಾಳ ವಹಿಸಿಕೊಂಡಿತ್ತು, ಈ ಕ್ರೀಡೆಯಲ್ಲಿ ಮೊದಲನೆಯ & ಎರಡನೇ ಬಹುಮಾನ ಇಂಡಿಯನ್ ಆರ್ಮಿ ತಂಡಕ್ಕೆ ಮೂರನೆಯ ಬಹುಮಾನವು ಗಾಂಧಿನಗರ ಪಡೆದುಕೊಂಡಿತು. ಈ ಸಂದರ್ಭದಲ್ಲಿ ರಾಜೇಶ್ H ನಾಯಕ, ರಮೇಶ್ ಭಜಂತ್ರಿ , ಶರಣಪ್ಪ ನವಲಿ, ಶ್ಯಾಮೇಶ ನಂಜಲದಿನ್ನಿ , ಕಿರಣ್ ನಾಯಕ ,ಕೃಷ್ಣ ಭಜಂತ್ರಿ, ಪರಶುರಾಮ, ಎಲ್ಲಾ ಆಟಗಾರರು, ಅಪ್ಪ ಅಭಿಮಾನಿಗಳು, ಗ್ರಾಮದ ಮುಖಂಡರು, ಹಿರಿಯರು ಮತ್ತು ಯುವಕರು ಭಾಗವಹಿಸಿದ್ದರು.
ವರದಿ – ವೆಂಕಟೇಶ.H.ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.