ಕೊಪ್ಪಳ:ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾ ಘಟಕವತಿಯಿಂದ ಇಂದು ಸೋಮನಾಳ ಗ್ರಾಮದಲ್ಲಿ ನೆಚ್ಚಿನ ನಟ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಅನ್ನ ಸಂತರ್ಪಣೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು ಜಿಲ್ಲಾ ಅಧ್ಯಕ್ಷ ಸಿದ್ದರೂಡ ದೊಡ್ಡಮನೆ ಮಾತನಾಡಿ ಪುನೀತ್ ಸರ್ ಜೀವನ ಶೈಲಿ ಅವರು ಬದುಕಿದ ರೀತಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಸರಳ ವ್ಯಕ್ತಿಯಾಗಿದ್ದರು ಅದರ ಪ್ರತಿಫಲವಾಗಿ ಅವರ ಸಾಧನೆ ಗುರುತಿಸಿ ಸರಕಾರ ಅವರ ಜನ್ಮ ದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸಲಾಗುತ್ತಿದೆ ಅವರು ಹುಟ್ಟುವಾಗಲೇ ಬಂಗಾರದ ಪಂಜರದಲ್ಲಿ ಹುಟ್ಟಿ ಸರಳತೆ ಪರರಿಗೆ ಕೊಡುವ ಗೌರವ ಹೊಸಬರಿಗೆ ಅವಕಾಶ ಕಲ್ಪಿಸಲು ಪಿ. ಆರ್. ಕೆ ಸಂಸ್ಥೆ ನಿರ್ಮಿಸಿ ಬಹುದೊಡ್ಡ ಸಾಧನೆ ಮಾಡಿ ನಮ್ಮನ್ನು ಬಿಟ್ಟು ಅಗಲಿದ್ದು ಬಹಳ ನೋವಿನ ಸಂಗತಿ ಅವರು ತೀರಿದಾಗ ಸುಮಾರು 25 ಲಕ್ಷ ಜನ ಸ್ವಯಂ ಪ್ರೇರಿತವಾಗಿ ಸೇರಿ ವಿದಾಯ ಸಲ್ಲಿಸಿದ ಇವರ ಸಾವು ನಾಡಿನ ಪ್ರತಿ ಮನೆಯಲ್ಲಿನ ಸದಸ್ಯರನ್ನು ಕಳೆದುಕೊಂಡ ರೀತಿ ದುಃಖ ಬರಿತರಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.