ಯಾದಗಿರಿ: ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ
ಶನಿವಾರ ಬೆಳಗ್ಗೆ 5 ಗಂಟೆಗೆ ಸುರಿದ ಭಾರಿ ಮಳೆಯಿಂದ ಶಹಾಪುರ ತಾಲೂಕಿನ ಹಳಿಸಗರ ಸಿಮಾಂತರದಲ್ಲಿರುವ ತೋಟದ ತರಕಾರಿ ಬೆಳೆ ನಷ್ಟ ಉಂಟಾಗಿದೆ 15 ರಿಂದ 20 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಗ್ರಾಮದ ನಿವಾಸಿ ಮಲ್ಲಿಕಾರ್ಜುನ ತಂದೆ ದೇಸಾಯಪ್ಪ ಅವರಿಗೆ ಸೇರಿದ ಈ ತೋಟದ ಬೆಳೆಯನ್ನು ಸಂಗಮೇಶ್ವರ ಗ್ರೀನ್ ಹೌಸ್ ಕೇಂದ್ರದಲ್ಲಿ ನಾಟಿ ಮಾಡಲಾಗಿತ್ತು. ಸುಮಾರು 9 ಎಕರೆ ಜಮೀನಿನಲ್ಲಿ ಇವರು ಈ ಬೆಳೆಗೆ 6 ಎಕರೆ ಮಾತ್ರ ಸೀಮಿತ ಗೊಳಿಸಲಾಗಿತ್ತು. ಈ 6 ಎಕರೆಯಲ್ಲಿ ನಾಟಿ ಮಾಡಿದ್ದ. ಈ ತೋಟದ ಬೆಳೆಯಿಂದ 600 ಎಕರೆಯಲ್ಲಿ ನಾಟಿ ಮಾಡಬಹುದಾಗಿತ್ತು ಎಂದು ಹೇಳಲಾಗುತ್ತಿದೆ. ಈ ಬೆಳೆ ನಷ್ಟ ಹಿನ್ನೆಲೆಯಲ್ಲಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ,ಜಿಲ್ಲಾ ಅಧಿಕಾರಿಗಳಾದ ಆರ್. ಸ್ನೇಹಲ್ ತಾಲೂಕ ದಂಡಾಧಿಕಾರಿಗಳು ಉಮಾಕಾಂತ ಹುಳ್ಳಿ ಕೃಷಿ ಸಹಾಯಕ ನಿರ್ದೇಶಕರಾದ ಸುನಿಲ್ ಕುಮಾರ್ ಕಂದಾಯ ಮತ್ತು ಗ್ರಾಮಲೇಖ ಪಾಲಕರು ಆಗಮಿಸಿ ಪರಿಶೀಲನೆ ಮಾಡಿದರು.
ಇದೆ ಸಮಯದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಬೆಳೆ ನಷ್ಟ ಕುರಿತು ಸಮಗ್ರ ವರದಿ ಸಂಗ್ರಹ ಮಾಡಿ ಸರ್ಕಾರಕ್ಕೆ ಒಪ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಬೆಳಿಗ್ಗೆ ಐದು ಗಂಟೆಗೆ ಸುಮಾರಿಗೆ ನಗರದಲ್ಲಿ 60 ಮಿಲಿ ಮೀಟರ್, ಭೀಮರಾಯನಗುಡಿ ಯಲ್ಲಿ 52 ಮಿಲಿ ಮೀಟರ್, ಹತ್ತಿಗೂಡೂರು 1 ಮಿಲಿ ಮೀಟರ್, ದೊರನಹಳ್ಳಿ 40 ಮಿಲಿ ಮೀಟರ್, ಗೋಗಿ 48 ಮಿಲಿ ಮೀಟರ್ ಮತ್ತು ವಡಗೇರದಲ್ಲಿ 26 ಮಿಲಿ ಮೀಟರ್ ಮಳೆಯಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.
ಬಿರಿ ಬೇಸಿಗೆಯಲ್ಲಿಯೂ ಸಹ ಆಲಿಕಲ್ಲು ಮಳೆ ಕಂಡು ಗ್ರಾಮಸ್ಥರು ದಂಗಾಗಿದ್ದಾರೆ.
ದೊಡ್ಡ ಗಾತ್ರದ ಆಲಿಕಲ್ಲುಗಳು ಶಹಾಪುರ ನಗರದಲ್ಲಿ ರಾಶಿರಾಶಿಯಾಗಿ ರಸ್ತೆಗಳ ಮೇಲೆ ಬಿದ್ದಿವೆ. ಇದರಿಂದ ಹಿಮಪಾತ ಆಗಿದೆ ಆಲಿಕಲ್ಲು ಮಳೆ ಬಿದ್ದ ಕಾರಣ ಎನ್ನುವ ವಾತಾವರಣ ನಿರ್ಮಾಣವಾಗಿತ್ತು.
ಕೇವಲ ಜಮ್ಮು ಕಾಶ್ಮೀರದಲ್ಲಿ ಹಿಮಾಲಯದ ರಸ್ತೆಗಳನ್ನು ಕಾಣುತ್ತಿದ್ದ ಜಿಲ್ಲೆಯ ನಿವಾಸಿಗಳು ಜಮ್ಮುಕಾಶ್ಮೀರದಲ್ಲಿನ ಹಿಮಪಾತವನ್ನು ಮಳೆಯಲ್ಲಿ ಕಂಡು ಒಂದು ಕ್ಷಣ ನಗರದ ಜನತೆ ವಿಸ್ಮಿತರಾದರು. ಅಲ್ಲದೇ ಭಾರಿ ಪ್ರಮಾಣದ ಆಲಿಕಲ್ಲುಗಳು ಬಿದ್ದಿದ್ದರಿಂದ ನಗರದ ಜನತೆ ಸಂಭ್ರಮಿಸಿದರು.
ಶನಿವಾರ ರಾತ್ರಿ ಆಲಿಕಲ್ಲು ಮಳೆ ಬಿದ್ದ ಪರಿಣಾಮ ಮತ್ತೆ ಹಿಮಾಲಯದ ರಸ್ತೆಗಳು ನಿರ್ಮಾಣಗೊಂಡವು.
ಜೊತೆಗೆ ಕಲಬುರ್ಗಿ ಜಿಲ್ಲೆಯ ಯಡ್ರಾಮಿ, ಜೇವರ್ಗಿ, ಸೇಡಂ, ಚಿತ್ತಾಪುರ, ಸೇರಿದಂತೆ ವಿವಿಧ ಗಡಿ ಗ್ರಾಮಗಳಲ್ಲಿಯೂ ಸಹ ನಿನ್ನೆ ಆಲಿಕಲ್ಲು ಮಳೆಯಾಗಿದೆ. ಬಿರು ಬೇಸಿಗೆಯಲ್ಲಿ ಆಕಸ್ಮಿಕವಾಗಿ ಬಿದ್ದ ಆಲಿಕಲ್ಲು ಮಳೆಯು ತಂಪು ವಾತಾವರಣವನ್ನು ಹುಟ್ಟು ಹಾಕಿದೆ.
ಸಮುದ್ರದ ಮೇಲೆ ಸುಳಿಗಾಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಇನ್ನೂ ಎರಡು ದಿನಗಳವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ