ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವನಸಿರಿ ಫೌಂಡೇಶನ್ ಮತ್ತು ಅಭಿನಂದನ್ ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯ ಮನಿಷಾ ಅಮಿನಗಡ

ಸಿಂಧನೂರು:ವನಸಿರಿ ಫೌಂಡೇಶನ್ ಸಹಯೋಗದೊಂದಿಗೆ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ.)

ಮಸ್ಕಿ ವತಿಯಿಂದ ಜಾರಿಗೆ ತರಲಾದ ಸ್ವಚ್ಚತಾ ಅಭಿಯಾನವಾದ “ಸಂಡೆ ಫಾರ್ ಸೋಶಿಯಲ್ ವರ್ಕ್” ಅಭಿಯಾನದ 89ನೇ ವಾರದ ಸೇವಾ ಕಾರ್ಯ ಸರಕಾರಿ ಶಿಕ್ಷಕರ ತರಬೇತಿ ಸಿಂಧನೂರು ಕಛೇರಿಯನ್ನು ಸ್ವಚ್ಛಗೊಳಿಸಿ ಕಛೇರಿಯ ಕಾಂಪೌಂಡ್ ಗೋಡೆಗೆ ಸುಣ್ಣ ಬಣ್ಣವನ್ನು ಹಚ್ಚುವ ಮೂಲಕ ಸುಂದರಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾ ಸಂಸ್ಥೆಯ ಪ್ರಾಚಾರ್ಯರಾದ ಮನಿಷಾ ಅಮಿನಗಡ ಅವರು ಸಿಂಧನೂರಿನ ವನಸಿರಿ ಫೌಂಡೇಶನ್ ಮತ್ತು ಮಸ್ಕಿಯ ಅಭಿನಂದನ್ ಸಂಸ್ಥೆಯ ಸಹಯೋಗದೊಂದಿಗೆ ಇಂದು ನಮ್ಮ ವಿದ್ಯಾ ಸಂಸ್ಥೆಯ ಆವರಣವನ್ನು ಸ್ವಚ್ಛಗೊಳಿಸಿ ನಿಜ ಸಂಸ್ಥೆಯ ಕಾಂಪೌಂಡ್ ಗೋಡೆಗೆ ಬಣ್ಣವನ್ನು ಹಚ್ಚುವ ಮೂಲಕ ಉತ್ತಮ ವಾತಾವರಣವನ್ನು ಕಲ್ಪಿಸಿರುವುದು ನಮಗೆ ಬಹಳ ಸಂತೋಷವನ್ನು ಉಂಟು ಮಾಡಿದೆ ಹಾಗೂ ನಮ್ಮ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಬಗ್ಗೆ ಹಾಗೂ ಸ್ವಚ್ಛ ಭಾರತದ ಕನಸಿನ ಬಗ್ಗೆ ಅರಿವು ಮೂಡಿಸುವಲ್ಲಿ ಈ ಅಭಿಯಾನ ಪರಿಣಾಮಕಾರಿಯಾಗಿ ಕಾರ್ಯ ಮಾಡಿದೆ ನಿಜವಾಗಿಯು ವನಸಿರಿ ಫೌಂಡೇಶನ್ ಮತ್ತು ಅಭಿನಂದನ್ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ. ಈ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಕೀರ್ತಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲಿ ಮತ್ತು ಇನ್ನೂ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವ ಶಕ್ತಿ ಲಭಿಸಲಿ ಎಂದರು.

ನಂತರ ಮಾತನಾಡಿದ ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಮಾತನಾಡಿ ಅಭಿನಂದನ್ ಸಂಸ್ಥೆಯ ಎಲ್ಲಾ ಸಾಮಾಜಿಕ ಸೇವ ಕಾರ್ಯಗಳನ್ನು ಮೊದಲಿನಿಂದಲೂ ನೋಡುತ್ತಾ ಬಂದಿದ್ದು ಅವರ ಈ ಸ್ವಚ್ಛತಾ ಅಭಿಯಾನ ಇನ್ನು ಹೆಚ್ಚಿನ ಮಟ್ಟದಲ್ಲಿ ಗುರುತಿಸಿಕೊಳ್ಳಲಿ ಹಾಗೂ ಅವರ ಎಲ್ಲಾ ಕಾರ್ಯಗಳಿಗೆ ನಮ್ಮ ವನಸಿರಿ ಫೌಂಡೇಶನ್ ಸಹಕಾರ ಸದಾಕಾಲವೂ ಇರುತ್ತದೆ ಎಂದರು.

ಈ ವಿದ್ಯಾ ಸಂಸ್ಥೆ ಸುಂದರವಾಗಿ ಕಾಣಲು ವನಸಿರಿ ಫೌಂಡೇಶನ್ ವತಿಯಿಂದ ತಮ್ಮ ಸ್ವಂತ ಖರ್ಚಿನಲ್ಲಿ ಸುಣ್ಣಬಣ್ಣ ಕೊಡಿಸಿದರು.

ಈ ಸಂದರ್ಭದಲ್ಲಿ ಮನಿಷಾ. ಕಿರ್ಲೋಸ್ಕರ್.ಪ್ರಾಚಾರ್ಯರು. K.B, ಹವಲದಾರ,ಕೃಷ್ಣಾ,ಹನಮಂತಪ್ಪ,ಬಂದೆ ನವಾಜ್,ಗಿರಿಸ್ವಾಮಿ ಹೇಡಿಗಿನಾಳ,ವೆಂಕಟರಡ್ಡಿ ಹೇಡಿಗಿನಾಳ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಮುತ್ತು ಪಾಟೀಲ್ ಭೂತಲದಿನ್ನಿ ವನಸಿರಿ ತಾಲೂಕ ಗ್ರಾಮೀಣ ಘಟಕ ಅಧ್ಯಕ್ಷ ಹಾಗೂ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಸದಸ್ಯರ ಮಲ್ಲಿಕಾರ್ಜುನ ಬಡಿಗೇರ,ರವಿಕುಮಾರ ಸುಂಕನೂರ, ಕಿಶೋರ ಹಾಗೂ ಕಾಲೇಜು ವಿದ್ಯಾರ್ಥಿಗಳ ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ