ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕಾರುಣ್ಯಾಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ ಅವರ ತಂದೆಯವರಾದ ವೇದಮೂರ್ತಿ ಶರಭಯ್ಯ ಸ್ವಾಮಿ ಯಡಿಯೂರು ಮಠ ಅವರ ದ್ವಿತೀಯ ವರ್ಷದ ಪುಣ್ಯ ಸ್ಮರಣೆಯನ್ನು ಆಶ್ರಮದಲ್ಲಿ ಮಹಾಪ್ರಸಾದ ವಿತರಿಸಿ ಹಣ್ಣು ಹಂಪಲುಗಳನ್ನು ವಿತರಿಸಿ ದಿವಂಗತರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಶರಭಯ್ಯ ಸ್ವಾಮಿ ಅವರ ಹೆಸರಿನ ಮೂಲಕ ಸಸಿ ನೆಡುವುದರ ಮೂಲಕ ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮುಗಿಸಿಕೊಂಡಿದ್ದ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ನಮ್ಮ ನಾಡಿನಲ್ಲಿ ಅನಾಥ ಎನ್ನುವ ಪದವನ್ನು ಅಳಿಸಿ ಹಾಕುವುದೇ ಕಾರುಣ್ಯಾಶ್ರಮದ ಸಂಕಲ್ಪ ಕಲ್ಯಾಣ ಕರ್ನಾಟಕದಲ್ಲಿ ಅದೆಷ್ಟೋ ಅನಾಥ ಜೀವಿಗಳಿಗೆ ದಾನಿಗಳ ಸಹಾಯ ಸಹಕಾರದಿಂದ ಆಶ್ರಯ ನೀಡುತ್ತಿದ್ದೇವೆ ಜಂಗಮರಾಗಿ ಮನೆ ಮನೆಗೆ ಜೋಳಿಗೆ ಹಾಕುವುದರ ಮೂಲಕ ಅದೆಷ್ಟೋ ಕಷ್ಟಗಳ ಮಧ್ಯೆ ಈ ಆಶ್ರಮವನ್ನು ಮುನ್ನಡೆಸುತ್ತಿದ್ದೇವೆ ಈ ಆಶ್ರಮ ಸರ್ವ ಸಮಸ್ತ ಸಮಾಜದ ಸಿಂಧನೂರಿನ ಆಸ್ತಿ ಇಲ್ಲಿ ಆಶ್ರಯ ಪಡೆದ ಜೀವಿಗಳು ಕೂಡ ಒಂದಾನೊಂದು ಕಾಲದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡಿದ ಹಿರಿಯ ಜೀವಿಗಳು ತಾವು ಮನುಷ್ಯರು ಎಂದು ಅರಿವಿಲ್ಲದಂತೆ ವಾಸಿಸಿರುವ ಇಲ್ಲಿನ ಜೀವಿಗಳಿಗೆ ಇನ್ನು ಹೆಚ್ಚಿನ ಸಹಾಯದ ಅವಶ್ಯಕತೆ ಇದೆ ಇಂದು ಪುಣ್ಯರಾಧನೆಯನ್ನು ನೆರವೇರಿಸಿರುವ ಯಡಿಯೂರು ಮಠ ಕುಟುಂಬ ತಮ್ಮ ಇಡೀ ಜೀವನವನ್ನೇ ಇಂತಹ ಅನಾಥರಿಗಾಗಿ ಮೀಸಲಿಟ್ಟಿದೆ ಇಂದಿನ ಈ ಪುಣ್ಯ ಸ್ಮರಣೆಯ ದಿನ ನಮ್ಮ ಭಾವನಾತ್ಮಕ ಸಂದೇಶಗಳನ್ನು ಸಮಾಜದ ಜೊತೆ ಹಂಚಿಕೊಳ್ಳುತ್ತಿದ್ದೇವೆ ಎಂದು ಕೈಮುಗಿದು ಬೇಡುವುದರ ಮೂಲಕ ಸಾರ್ವಜನಿಕರಲ್ಲಿ ಸಹಾಯಕ್ಕೆ ಮನವಿ ಮಾಡಿಕೊಂಡರು.ಈ ಕಾರ್ಯಕ್ರಮದಲ್ಲಿ ಯಡಿಯೂರು ಮಠ ಕುಟುಂಬದ ಸೊಸೆಯಂದಿರುಗಳಾದ ಮಲ್ಲಮ್ಮ ಮುದುಕಯ್ಯ ಸ್ವಾಮಿ ಯಡಿಯೂರು ಮಠ.ವಾಣಿಶ್ರೀ ವೀರೇಶ ಯಡಿಯೂರ ಮಠ.ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ ಇಂದುಮತಿ ಏಕನಾಥ. ಮರಿಯಪ್ಪ. ಬಸವರಾಜ ಸ್ವಾಮಿ ಹಚೋಳ್ಳಿ. ಶರಣಮ್ಮ ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.