ಹನೂರು ತಾಲೂಕಿನ ರಾಮಾಪುರ ಚಂಗಾದರಹಳ್ಳಿ ಗ್ರಾಮದಲ್ಲಿ ಇಂದು ಅಂದರೆ ದಿನಾಂಕ 20/03/2023 ರಂದು ಜಿಲ್ಲಾ ಅಧಿಕಾರಿಗಳ ನಡೆಹಳ್ಳಿಯಕಡೆ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧಿಕಾರಿ ಹಾಗೂ ತಹಸೀಲ್ದಾರ್ ಬರದ ಕಾರಣ ರೈತ ಸಂಘಟನೆ ಯ ಕಾರ್ಯಕರ್ತರು ಸಭೆಯನ್ನು ರದ್ದು ಗೊಳಿಸಿ ಎಂದು ಪಟ್ಟು ಹಿಡಿದರು ನಂತರ ಅವರೇ ಒಂದು ತೀರ್ಮಾನಕ್ಕೆ ಬಂದು ನಾವು ಸಭೆ ರದ್ದು ಗೊಳಿಸಿ ಎಂದು ಹೇಳುವುದು ಬೇಡ ಆದರೆ ನಾವೇ ಸಭೆ ಬಿಟ್ಟು ಹೊರಡೋಣ ಎಂದು ರೈತ ಸಂಘದ ಕಾರ್ಯಕರ್ತರೂ ಹೊರಟು ಹೋದರು.ಆಗ ಸಭೆಯು ಕಾಲಿ ಕುರ್ಚಿಗಳಿಂದ ರಾರಾಜಿಸಿತ್ತು ಹಾಗೂ ರೈತ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳು ಹಾಗೂ ತಹಸಿಲ್ದಾರ್ ಗೆ ಧಿಕ್ಕಾರಗಳನ್ನು ಕೂಗುತ್ತಾ ಅಲ್ಲಿಂದ ಹೊರಟರು .. ನಂತರ ಗ್ರೇಡ್ 2 ತಹಸೀಲ್ದಾರ್ ಧನಂಜಯ ಅವರು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಯ ಕಡೆ ಕಾರ್ಯಕ್ರಮ ಮಾಡುವುದು ಗ್ರಾಮಗಳಲ್ಲಿರುವಂತಹ ಸಮಸ್ಯೆಗಳನ್ನು ಪರಿಶೀಲಿಸಿ ಅರ್ಜಿಗಳನ್ನು ಸ್ವೀಕರಿಸಲು ಮತ್ತು ಮುಂದಿನ ದಿನಗಳಲ್ಲಿ ಅದನ್ನು ಬಗೆಹರಿಸಲು ಇಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ ಎಂದರು.
ನಂತರ ಬಂದಂಥ ಕೆಲವು ಅರ್ಜಿಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ವರ್ಗದವರು ಗ್ರಾಮ ಲೆಕ್ಕಾಧಿಕಾರಿಗಳು ರೈತಾಪಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು..
ವರದಿ: ಉಸ್ಮಾನ್ ಖಾನ್