ಹಬ್ಬದ ಮನೆಯ ಬಾಗಿಲ ಬಳಿಯಲ್ಲಿ ಬಂದು ಕಾದಿತ್ತು ಸೂತಕದ ಕರಿ ನೆರಳು ಅವಳಲ್ಲಿ ನರಳಿದ್ದಳು ಯಾರಿಗೂ ತಿಳಿಯದಂತೆ ಸಾವಿನ ಪಾಶಕ್ಕೆ ಕೊರಳ ಕೊಟ್ಟು. ಸ್ನೇಹಿತರೆ ಸಾವು ಎಂದಾಕ್ಷಣ ವಯೋಸಹಜ ಸಾವು ಆದರೆ ಒಪ್ಪಿಕೊಳ್ಳೋಣ ಆದರೆ ಪ್ರಸ್ತುತ ದಿನಮಾನಗಳಲ್ಲಿ ನಾ ಸಾವುಗಳು ಹೆಚ್ಚಾಗಿ ಧೂಮಪಾನ,ಮದ್ಯಪಾನ,ಇತರೆ ವಯಕ್ತಿಕ ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಬದುಕನ್ನು ಆಳು ಮಾಡಿಕೊಳ್ಳುತ್ತಿದ್ದಾರೆ.ಹಾಗೆಯೇ ಆ ಸಾವು ಯಾವ ಜಾತಿಯೇ ಆಗಿರಲಿ ಯಾರ ಮನೆಯೇ ಆಗಿರಲಿ ಅ ನೋವು ನನಗೆ ಕಾಡುತ್ತೆ ಕಾರಣ ಇಷ್ಟೇ ಬಂಧುಗಳೇ ಎಲ್ಲರೂ ನನ್ನವರೆಂಬ ಅವಿನಾಭಾವ ಸಂಬಂಧ ಆಗಿದೆ.
ಇತ್ತೀಚಿಗೆ ನಾನು ನಮ್ಮ ಆತ್ಮೀಯರ ಸಾವನ್ನು ಗಮನಿಸಿದೆ ಅ ದೇವರು ಎಷ್ಟು ಕ್ರೂರಿ ಅಂತ ಅನಿಸಿಬಿಟ್ಟಿತ್ತು ನನಗೆ ಯಾಕಂದ್ರೆ,ಸೂರ್ಯ ಚಂದ್ರರು ಕೂಡ ನಾಚುವಂತ ಜೋಡಿ ಅವರಿಬ್ಬರೂ ಅಬ್ಬಾ ಅವರ ಆತ್ಮೀಯತೆ ವರ್ಣಿಸಲು ಪದಗಳೇ ಸಿಗುತ್ತಿರಲಿಲ್ಲ ನನಗೆ ಅಂತ ಅಪರೂಪದ ಜೋಡಿಗೆ ಅದ್ಯಾರ ಕಣ್ಣು ಬಿತ್ತು ಏನೋ ಒಂದೇ ವರ್ಷದಲ್ಲಿ ಇಬ್ಬರು ನಲ್ಮೆಯ ಸತಿ ಪತಿಗಳು ಆಕಾಶದಲ್ಲಿ ನಕ್ಷತ್ರ ನೋಡಲು ಹೊರಟರು ಇವರ ಅಗಲಿಕೆಯಿಂದ ಕುಟುಂಬದಲ್ಲಿನ ಆತ್ಮೀಯತೆಗಳು ಕಳೆಗುಂದಿದವು ಈ ಇಬ್ಬರು ದಂಪತಿಗಳಿಗೆ ಒಂದು ಸುಂದರ ಹೆಣ್ಣು ಮಗು ಜನ್ಮ ಪಡೆದಿತ್ತು.ಅ ಮಗು ವರ್ಷ ತುಂಬುವುದರ ಒಳಗೆ ತನ್ನ ತಂದೆ ತಾಯಿ ಕಳೆದುಕೊಂಡು ತಬ್ಬಲಿ ಯಾಗಿತ್ತು. ಈ ನೋವು ನನ್ನ ಸದಾ ಕಾಡುತ್ತಿರುತ್ತದೆ.
ಅದೇ ತಾನೇ ಬೆಳೆದು ಚಿಗುರೊಡೆಯುವ ಹೂಗಳು ಬಾಡಿ ಹೋದಂತಿದೆ.ಹುಟ್ಟುವಾಗ ಜಾತಕ ಸತ್ತಾಗ ಸೂತಕ ಇವೆರಡರ ನಡುವೆ ನಮ್ಮ ಜೀವನವೇ ಒಂದು ನಾಟಕ ಕನಸುಗಳು ಕಮರಿ ಅಸುನೀಗಿದಾಗ ಮನಸಲ್ಲಿ ಸೂತಕದ ಛಾಯೆ ಆವರಿಸುವುದು ಆಗಾಗಿ ಈ ಸಾವು ಯಾರ ಮನೆಯಲ್ಲೇ ಆಗಲಿ ನೋವು ಅನ್ನೋದು ನನಗೆ ಕಾಡುತ್ತದೆ ಎಂಬುದು ಕವಿಯ ಆಶಯ.
-ಗಂಗಜ್ಜಿ ನಾಗರಾಜ್
ಯುವ ಬರಹಗಾರರು ಹರಪನಹಳ್ಳಿ.