Mysore breking (20/03/2023)
ಮೈಸೂರು:- ಕೃಷ್ಣ ರಾಜ ಕ್ಷೇತ್ರದಲ್ಲಿ ರೌಡಿಗಳ ಅಟ್ಟಹಾಸ ನಿಂತಿಲ್ಲ. ಕ್ಷೇತ್ರದ ಶಾಸಕ ಎಸ್. ಎ. ರಾಮದಾಸ್ ರೌಡಿ ಚಟುವಟಿಕೆಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಎಂದು ಕರ್ನಾಟಕ ಪ್ರಜಾ ಪಾರ್ಟಿ ಅಭ್ಯರ್ಥಿ ತೇಜಸ್ವಿ ನಾಗಲಿಂಗ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಬೆಳ್ಳಂ ಬೆಳಿಗ್ಗೆ ಕೃಷ್ಣ ರಾಜ ಕ್ಷೇತ್ರ ವ್ಯಾಪ್ತಿಯಲ್ಲಿ “ಶ್ರೀಗಂಧ” ಎಂಬಾತನನ್ನು “ರವಿ” ಮತ್ತಿತರರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆಯಿಂದ ಇಡೀ ಕ್ಷೇತ್ರದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.
ನಗರ ಪೋಲಿಸ್ ಆಯುಕ್ತರಿಗೆ ಜನವರಿ 7ರಂದು ಕೃಷ್ಣ ರಾಜ ಕ್ಷೇತ್ರದಲ್ಲಿ ರೌಡಿ ಶೀಟರ್ ಗಳು ಎರಡು ರಾಷ್ಟ್ರೀಯ ಪಕ್ಷಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು “ಕ್ಷೇತ್ರದ ರೌಡಿ ಶೀಟರ್” ಗಳನ್ನು
ಚುನಾವಣೆ ಮುಗಿಯುವತನಕ “ಗಡಿಪಾರು” ಮಾಡುವಂತೆ ಕೋರಿದ್ದೆ.
ಹಾಗೂ ಅವರ “ಸಹಚರ ಚಲನವಲನಗಳ” ಮೇಲೆ ನಿಗಾ ಇರಿಸಬೇಕೆಂದು ಮನವಿ ಮಾಡಿದ್ದೆ. ಆದರೂ ಕೊಲೆ ನಡೆದಿದೆ.
“ವಿಧಾನ ಸಭಾ ಚುನಾವಣೆ” ಕೆಲವೇ ದಿನಗಳು ಬಾಕಿ ಇರುವಾಗ “ಕ್ಷೇತ್ರದಲ್ಲಿ ಕೊಲೆ” ಆಗಿರುವುದು ಸ್ಥಳಿಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ ಎಂದು ತೇಜಸ್ವಿ ಹೇಳಿದ್ದಾರೆ.
ಕೂಡಲೇ ರೌಡಿ ಚಟುವಟಿಕೆಯನ್ನು ಮಟ್ಟ ಹಾಕಬೇಕೆಂದು “ಪೊಲೀಸ್ ಆಯುಕ್ತರನ್ನು” ‘ತೇಜಸ್ವಿ’ ಒತ್ತಾಯಿಸಿದ್ದಾರೆ.