ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ಬುದ್ಧಿಮಾಂದ್ಯ ಆಶ್ರಮದಲ್ಲಿ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ಸೌಮ್ಯ. ಎಂ.ಹಿರೇಮಠ ಅವರ 31ನೇ ವರ್ಷದ ಹುಟ್ಟುಹಬ್ಬ ಸಮಾರಂಭ ಕಾರ್ಯಕ್ರಮವನ್ನು ಇಡೀ ದಿನ ಮಹಾಪ್ರಸಾದ ಸೇವೆ ಹಾಗೂ ಆಶ್ರಮದಲ್ಲಿ ಸಸಿ ನೆಡುವ ಮೂಲಕ ಸೌಮ್ಯ ಹಿರೇಮಠ ಅಭಿಮಾನಿ ಬಳಗ ಮತ್ತು ಕಾರುಣ್ಯಾಶ್ರಮದ ಸೇವಾ ಬಳಗದ ನೇತೃತ್ವದಲ್ಲಿ ಅದ್ದೂರಿಯಾಗಿ ಅವರ ಅನುಪಸ್ಥಿತಿಯಲ್ಲಿ ನೆರವೇರಿತು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿದ್ದ ಆಶ್ರಮದ ಗೌರವಾಧ್ಯಕ್ಷರಾದ ಶರಣು.ಪಾ.ಹಿರೇಮಠ ಮಾತನಾಡಿ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ಸೌಮ್ಯ ಹಿರೇಮಠ ಕಾರುಣ್ಯಾಶ್ರಮದ ಕರುಣಾಮಯಿ ಮಾತೆಯಾಗಿದ್ದಾರೆ ಸಿಂಧನೂರಿಗೆ ಬಂದಾಗಿನಿಂದಲೂ ಸಹ ಪ್ರತಿ ವರ್ಷವೂ ಆಶ್ರಮದಲ್ಲಿ ಅನೇಕ ದಾನಗಳ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯಾಗಿದ್ದರೂ ಸಹ ಆಶ್ರಮದಲ್ಲಿ ಸರಳ ವ್ಯಕ್ತಿತ್ವದ ಮೂಲಕ ಎಲ್ಲಾ ಹಿರಿಯರನ್ನು ಗೌರವ ಪ್ರೀತಿಯಿಂದ ಕಾಣುತ್ತಿದ್ದರು ದಿನಕ್ಕೊಂದು ಸಾರಿಯಾದರೂ ಕಾರುಣ್ಯಾಶ್ರಮದ ಚಿಂತನೆ ಮಾಡುತ್ತಿದ್ದರು ಅವರ ಸೇವೆ ದೂರದಲ್ಲಿರಬಹುದು ಆದರೆ ಅವರ ಭಾವನಾತ್ಮಕ ಸಂಬಂಧ ಈ ಆಶ್ರಮದಲ್ಲಿ ಆಶ್ರಯ ಪಡೆದಿರುವ ಎಲ್ಲಾ ಅನಾಥ ಜೀವಿಗಳ ಹಾಗೂ ನಮ್ಮ ಮನಸ್ಸಿನಲ್ಲಿ ಸದಾವ ಕಾಲವಿರುತ್ತದೆ ತಮ್ಮ ಪೊಲೀಸ್ ಇಲಾಖೆಯ ಸೇವೆಯ ಜೊತೆ ಕಾರುಣ್ಯ ಆಶ್ರಮದ ಸೇವೆಯನ್ನು ಮಾಡುತ್ತಿರುವ ನಮ್ಮ ಸೌಮ್ಯ ಹಿರೇಮಠ ಅವರ ಕಾರ್ಯ ಶ್ಲಾಘನಿಯವಾಗಿದೆ. ಇವರಿಗೂ ಹಾಗೂ ಇವರ ಕುಟುಂಬಕ್ಕೆ ಆ ಭಗವಂತ ಇನ್ನೂ ಹೆಚ್ಚಿನ ಆಯಸ್ಸು ಆಯುರಾರೋಗ್ಯ ಕರುಣಿಸಲೆಂದು ನಾವೆಲ್ಲರೂ ವಿಶೇಷ ಪ್ರಾರ್ಥನೆಯೊಂದಿಗೆ ಶುಭ ಹಾರೈಸುತಿದ್ದೇವೆ ಎಂದು ಮಾತನಾಡಿದರು. ನಂತರ ಮಾತನಾಡಿದ ಆಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರುಮಠ ಮಾತನಾಡಿ ಕಾರುಣ್ಯಾಶ್ರಮದ ಬಗ್ಗೆ ಅತಿ ಹೆಚ್ಚು ಪ್ರೀತಿ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸೌಮ್ಯ ಹಿರೇಮಠ ತೆರೆಯ ಹಿಂದೆ ಹಲವಾರು ಸಮಾಜ ಪರ ಕಾರ್ಯಗಳನ್ನು ಮತ್ತು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತು ಸಮಾಜಕ್ಕೆ ಮಾದರಿಯಾಗಿದ್ದಾರೆ ನೊಂದ ಜೀವಿಗಳ ನಾಡಿಮಿಡಿತವಾಗಿರುವ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತವಾದಂತಹ ಹುದ್ದೆ ದೊರೆತು ಸಮಾಜಕ್ಕೆ ಇನ್ನೂ ಉಪಯೋಗವಾಗುವಂತಹ ಕಾರ್ಯಗಳು ಇವರಿಂದ ನಡೆಯಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಮಾತನಾಡಿ ಹುಟ್ಟುಹಬ್ಬದ ಶುಭಾಶಯಗನ್ನು ಕೋರಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರುಣ್ಯಾಶ್ರಮದ ಸಲಹಾ ಸಮಿತಿಯ ಸದಸ್ಯರುಗಳಾದ ವೇದಮೂರ್ತಿ ವೀರೇಶ ಶಾಸ್ತ್ರಿಗಳು ಗಿಣಿವಾರ ಪ್ರಧಾನ ಅರ್ಚಕರು ಶ್ರೀ ವಳಕೋಟೆ ವೀರಭದ್ರೇಶ್ವರ ದೇವಸ್ಥಾನ ಸಿಂಧನೂರು. ಬೂದಿಬಸವ ಸ್ವಾಮಿ ಗಬ್ಬೂರು. ಶಿವ ಶರಣ ಸ್ವಾಮಿ. ಸಂಗಮೇಶ ಸ್ವಾಮಿ. ವಿಜಯ್ ಮಾಲಿಪಾಟೀಲ್. ಹಾಗೂ ಕಾರುಣ್ಯಾಶ್ರಮದ ಸಿಬ್ಬಂದಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಇಂದುಮತಿ ಏಕನಾಥ. ಮರಿಯಪ್ಪ ಶರಣಮ್ಮ.ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.