ಮೈಸೂರು:ಹೊನ್ನಾರು ಮಹೋತ್ಸವ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಹೊನ್ನಾರು ಮಹೋತ್ಸವವನ್ನು ಯುಗಾದಿ ಹಬ್ಬದಂದು ಸಂಪ್ರದಾಯದಂತೆ ಗ್ರಾಮದಲ್ಲಿ ಎತ್ತುಗಳನ್ನು ಮನೆ ಮುಂದೆ ಶೃಂಗರಿಸಿ ಆಕೆ ಪೂಜೆ ಮಾಡಿ ಮನೆಯ ಯಜಮಾನರು ಪಂಚಾಂಗವನ್ನು ಕೇಳಿ ಯಾರ ಹೆಸರಿಗೆ ಚೆನ್ನಾಗಿ ಬಂದಿರುತ್ತದೆ ಅವರು ಎತ್ತುಗಳಿಗೆ ಪೂಜೆ ಮಾಡಿ ನೇಗಿಲುಗಳನ್ನು ಹೂಡಿ ಗ್ರಾಮದ ಬಸವೇಶ್ವರ ದೇವಸ್ಥಾನದ ಜಮೀನಿನಲ್ಲಿ ಎಲ್ಲರೂ ಬಂದು ಸೇರುತ್ತಾರೆ ಅಲ್ಲಿ ಬಂದಿರುವಂತಹ ಎಲ್ಲಾ ಎತ್ತುಗಳನ್ನು ಬಸವೇಶ್ವರ ಪೂಜಾರಿರವರು ಎತ್ತುಗಳಿಗೆ ಪೂಜೆ ಮಾಡಿ ಮನೆಯ ಎಲ್ಲಾ ಯಜಮಾನರುಗಳಿಗೂ ಪ್ರಸಾದವನ್ನು ನೀಡಿ ನಂತರ ಗ್ರಾಮದ ಸಂಪ್ರದಾಯದಂತೆ ಎಲ್ಲರೂ ನೇಗಿಲನ್ನು ಹೂಡಿ ಯುಗಾದಿ ಹಬ್ಬದ ರೈತರ ಮೊದಲ ಹಬ್ಬವಾಗಿದ್ದು ಅಂದು ಆ ಜಮೀನಿನಲ್ಲಿ ಎಲ್ಲರೂ ಹೊನ್ನಾರು ಕಟ್ಟುತ್ತಾರೆ ಆನಂತರ ಎಲ್ಲರೂ ಸುಮಾರು 9 ಸುತ್ತು ಉಳಿಮೆಯನ್ನು ಮಾಡಿ ನಂತರ ಅವರವರ ಜಮೀನಿಗೆ ಹೋಗಿ ಅಲ್ಲಿ ಉಳುಮೆ ಮಾಡುತ್ತಾರೆ ಇಂದಿನ ಕಾಲದಲ್ಲಿ ನಶಸಿ ಹೋಗುತ್ತಿರುವ ಗ್ರಾಮೀಣ ಸಂಪ್ರದಾಯವು ನಶಿಸಿ ಹೋಗದಂತೆ ಗ್ರಾಮದ ಎಲ್ಲಾ ಯಜಮಾನರು ಮುಖಂಡರು ಹಾಗೂ ಯುವಕರು ಮಹಿಳಾ ಮಕ್ಕಳು ಎಲ್ಲರೂ ಸೇರಿ ಇದನ್ನು ಆಚರಿಸುತ್ತಾ ಬಂದಿರುತ್ತಾರೆ ನಂತರ ಗ್ರಾಮ ದೇವತೆಗಳಾದ ಶ್ರೀ ಬಸವೇಶ್ವರ ಮತ್ತು ಮೂರುರಮ್ಮ ಗ್ರಾಮದ ಸುತ್ತ ಮೆರವಣಿಗೆ ಮಾಡಿ ಎಲ್ಲರೂ ಸಂಪ್ರದಾಯದಂತೆ ಪೂಜಿಸುತ್ತಾರೆ ಇದು ಈ ಗ್ರಾಮದ ಸಂಪ್ರದಾಯವಾಗಿ ಹಿಂದಿನ ಕಾಲದಿಂದಲೂ ನಡೆದುಕೊಂಡ ಪದ್ಧತಿಯಾಗಿದೆ.
-ಹೆಚ್.ಆರ್.ಶಂಕರ್