ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಮಲ್ಲಿಕಾರ್ಜುನ ನೆಕ್ಕಂಟಿ ಅಭಿಮಾನಿ ಬಳಗದ ವತಿಯಿಂದ ಸಿಂಧನೂರು ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ನೆಕ್ಕಂಟಿಯವರ ಹುಟ್ಟುಹಬ್ಬ ಸಮಾರಂಭ ಕಾರ್ಯಕ್ರಮವನ್ನು ಆಶ್ರಮದಲ್ಲಿ ವಿವಿಧ ಬಗೆಯ ಮಹಾಪ್ರಸಾದ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಕೆ.ಆರ್.ಪಿ. ಪಿ. ಅಭ್ಯರ್ಥಿಯಾದ ಮಲ್ಲಿಕಾರ್ಜುನ ನೆಕ್ಕಂಟಿ ಮಾತನಾಡಿ ನಮ್ಮ ಸಿಂಧನೂರಿನ ಕರುಣಾಮಯಿ ಕಾರುಣ್ಯ ಆಶ್ರಮವನ್ನು ನನ್ನ ಸ್ವಂತ ಕುಟುಂಬದ ಹಾಗೆ ನೋಡಿಕೊಳ್ಳುತ್ತೇನೆ ಈ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದ ಜನರ ಆಶೀರ್ವಾದದೊಂದಿಗೆ ಗೆಲ್ಲುತ್ತೇನೆ ಎನ್ನುವ ವಿಶ್ವಾಸ ಇದೆ ನನ್ನ ಕ್ಷೇತ್ರದ ಜನ ಬದಲಾವಣೆಗಾಗಿ ಕಾಯುತ್ತಿದ್ದಾರೆ ಬದಲಾವಣೆ ಮಾಡುವ ಮತದಾರರು ಬದಲಾಯಿಸುವ ಮನಸ್ಸು ಮಾಡಿದ್ದಾರೆ. ಅದೇ ರೀತಿ ಕಾರುಣ್ಯ ಆಶ್ರಮದಲ್ಲಿರುವ ಎಲ್ಲಾ ಹಿರಿಯರು ಹಾಗೂ ಬುದ್ಧಿಮಾಂದ್ಯರು ನನಗೆ ಶುಭಾಶೀರ್ವಾದ ಕರುಣಿಸಬೇಕು ನಾನು ಅಧಿಕಾರಕ್ಕೆ ಬಂದರೆ ಈ ಕಾರುಣ್ಯ ಆಶ್ರಮವನ್ನು ದತ್ತು ಪಡೆಯುವುದರ ಮೂಲಕ ಅನಾಥ ಎನ್ನುವ ಪದವನ್ನು ಅಳಿಸಿ ಹಾಕುವ ಸಂಕಲ್ಪವನ್ನು ಎಲ್ಲಾ ಹಿರಿಯರ ಸಮಕ್ಷಮದಲ್ಲಿ ಮಾಡಿದ್ದೇನೆ. ಬರೀ ಆಶ್ವಾಸನೆಗಳನ್ನು ನೀಡುವುದರ ಮೂಲಕ ಜನರ ಜೊತೆ ಎಲ್ಲಾ ಪಕ್ಷಗಳು ಆಟವಾಡುತ್ತಿವೆ ಆದರೆ ನಮ್ಮ ಜನಾರ್ದನ ರೆಡ್ಡಿಯವರ ಸಮಾಜ ಪರ ಕಾರ್ಯಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದೊಂದಿಗೆ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ಅವರ ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವ ನಾವೆಲ್ಲರೂ ಜನಾರ್ದನ ರೆಡ್ಡಿಯವರಿಗೆ ಶಕ್ತಿ ತುಂಬುತ್ತೇವೆ. ಈ ಸಾರಿ ಸಿಂಧನೂರಿಗೆ ಜನಾರ್ದನ ರೆಡ್ಡಿ ಅವರು ಬಂದರೆ ಅವರಿಗೆ ಕಾರುಣ್ಯ ಆಶ್ರಮದ ಸಂಪೂರ್ಣ ಚಿತ್ರಣ ಸೇವೆಯ ಬಗ್ಗೆ ತೋರಿಸುತ್ತೇನೆ. ಇಂತಹ ಕರುಣಾಮಯಿ ಆಶ್ರಮ ನಮ್ಮ ನಾಡಿನಲ್ಲಿ ಒಳ್ಳೆಯ ಹೆಸರು ಗಳಿಸಿ ಸಿಂಧನೂರಿನಲ್ಲಿ ಹುಟ್ಟಿಕೊಂಡಿರುವುದು ನಮ್ಮೆಲ್ಲರ ಪುಣ್ಯ ಮನೆಯಲ್ಲಿ ಒಬ್ಬ ತಂದೆ ತಾಯಿಯನ್ನು ನೋಡಿಕೊಳ್ಳಲಾರದಂತಹ ಪರಿಸ್ಥಿತಿಯಲ್ಲಿ ಇಷ್ಟು ಜನ ಹಿರಿಯರನ್ನು ನೋಡಿಕೊಳ್ಳುತ್ತಿರುವ ಈ ಕಾರುಣ್ಯ ಆಶ್ರಮದ ಜಂಗಮ ಸಮಾಜದ ಡಾ.ಚನ್ನಬಸಯ್ಯ ಸ್ವಾಮಿಗಳ ಸೇವೆ, ಶ್ಲಾಘನೀಯವಾದದ್ದು ಎಂದು ಮಾತನಾಡಿದರು. ನಂತರ ಮಾತನಾಡಿದ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಈ ಕಾರುಣ್ಯ ಕಟ್ಟಡದ ಪ್ರಥಮ ಹಂತದಲ್ಲಿ ಮಲ್ಲಿಕಾರ್ಜುನ ನೆಕ್ಕಂಟಿಯವರು ಕಂಕರಿನ ಸೇವೆ ಮತ್ತು ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಮಾತುಗಳು ನಮ್ಮೆಲ್ಲರಿಗೆ ಮಾರ್ಗದರ್ಶನ ನೀಡುವ ಮೂಲಕ ಇಂತಹ ಸೇವೆಗೆ ಅವಕಾಶ ಮಾಡಿಕೊಟ್ಟಿವೆ ಮಲ್ಲಿಕಾರ್ಜುನ ನೆಕ್ಕಂಟಿಗೆ ಅವರಿಗೆ ಆ ಭಗವಂತ ಆಯಸ್ಸು ಆಯುರಾರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಿ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಹ ಆಶೀರ್ವಾದ ಕರುಣಿಸಲಿ ಎಂದು ಪ್ರಾರ್ಥನೆ ಮಾಡುವುದರ ಮೂಲಕ ತಮಗೆ ಶುಭ ಹಾರೈಸುತ್ತಿದ್ದೇವೆ ಎಂದು ಮಾತನಾಡಿ ಮಲ್ಲಿಕಾರ್ಜುನ ನೆಕ್ಕಂಟಿಗೆ ಅವರಿಗೆ ಸನ್ಮಾನಿಸಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಕೆ.ಆರ್.ಪಿ.ಪಿ.ಪಕ್ಷದ ಮುಖಂಡರುಗಳಾದ ಶ್ರೀಕಾಂತ್. ಸತೀಶ್ ರೆಡ್ಡಿ.ವೀರಬಾಬು. ಬಸವರಾಜ.ಅಮರೇಗೌಡ.ಪರ್ವತ ರೆಡ್ಡಿ.ಚನ್ನಬಸವ. ಸ್ವಾಮಿ ವಿವೇಕಾನಂದ ನವೀನ್ ಅನಿಲ್ ಕುಮಾರ್ ಮೋಹನ್ ರೆಡ್ಡಿ ಅನೇಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.