ಕಲಬುರಗಿ – ಪ್ರತಿಷ್ಠಿತ ಎಚ್. ಕೆ. ಇ. ಸಂಸ್ಥೆಯ ಬೀದರ್, ಬಸವೇಶ್ವರ ಶಿಕ್ಷಣ ಮಾಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಇದೇ ಮಾರ್ಚ 31.2023 ರಂದು ಸುಮಾರು 25 ವರ್ಷ ನಿರಂತರ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿರುವ ಶ್ರೀಮತಿ ರಾಜೇಶ್ವರಿ ರಮೇಶ್ ಕೊಟಗಿ ಅವರನ್ನು ಸಮಸ್ತ ಕುಟುಂಬ ಮತ್ತು ಸ್ನೇಹಿತ ಬಳಗದವರಿಂದ ಅದ್ದೂರಿಯಾಗಿ ಸನ್ಮಾನಿಸಿದ ಸವಿ ನೆನಪಿನ ಗಳಿಗೆಯು ಇತ್ತೀಚೆಗೆ ಕಲಬುರ್ಗಿ ನಗರದ ಖಾಸಗಿ ಹೋಟೆಲೊಂದರಲ್ಲಿ ವಿಜೃಂಭಣೆಯಿಂದ ಜರುಗಿತು.
ಶ್ರೀಮತಿ ರಾಜೇಶ್ವರಿ ಅವರು ತಮ್ಮ 25 ವರ್ಷಗಳ ಸೇವಾ ಅವಧಿಯಲ್ಲಿ ನಿರಂತರ ಸೇವೆ ಸಂಸ್ಥೆಯ ವಿವಿಧ ಕಾಲೇಜುಗಳಾದ ಕಲಬುರ್ಗಿ ಖ್ಯಾತ ದಂತ ಮಹಾವಿದ್ಯಾಲಯ ಬೆಂಗಳೂರಿನ ಕಲಾ ಮತ್ತು ವಿಜ್ಞಾನ ಸಂಸ್ಥೆ ಅಲ್ಲದೆ ಬೀದರ್ ನ ಬಸವೇಶ್ವರ ಶಿಕ್ಷಣ ಮಾಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದರು.
ಇವರು ಯಾವತ್ತೂ ಪ್ರಾಮಾಣಿಕ ಮತ್ತು ದಕ್ಷಸೇವೆಗೆ ಹೆಸರುವಾಸಿಯಾಗಿದ್ದು ಎಲ್ಲಾ ಸಿಬ್ಬಂದಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ತಮ್ಮ ಸೇವಾ ಅವಧಿಯಲ್ಲಿ ಯಾವತ್ತೂ ಯಾವುದೇ ತರಹದ ತಪ್ಪು ಚುಕ್ಕೆ ಇಲ್ಲದೆ ಸಂಸ್ಥೆ ಒಳಿತಿಗಾಗಿ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಸೇವೆ ನಿರೂಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದರು.
ಉತ್ತಮ ಮತ್ತು ಪರೋಪಕಾರಿಯಾದ ಬದುಕು ಇವರ ಜೀವನದ ಧ್ಯೇಯವಾಗಿದೆ ಹಾಗಂದೆ ಮಕ್ಕಳಿಗೂ ಮತ್ತು ಬಂಧುಗಳಿಗೂ ಉತ್ತಮ ಗುಣಮಟ್ಟದ ಹಾಗೂ ಸರಳ ಜೀವನ ಹೇಗೆ ನಡೆಸಬೇಕು ಎಂಬುದರ ಬಗ್ಗೆ ಮಾರ್ಗದರ್ಶಕರಾಗಿದ್ದಾರೆ.
ಇಂತಹ ಅಪರೂಪದ ಅಪರಂಜಿ ತಮ್ಮ ಹೊರ ಬದುಕಿನ ಕರ್ತವ್ಯ ಸೇವೆಯಿಂದ ನಿವೃತ್ತಿ ಹೊಂದಿರುವುದು ಒಂದು ರೀತಿ ಆನಂದ ಪಡುವಂತಹದು ಇನ್ನೊಂದೆಡೆ ಇವರ ಉತ್ತಮ ಸೇವೆ ಇನ್ನೂ ಸಂಸ್ಥೆಗೆ ಬೇಕಿತ್ತು ಎಂಬ ಅನಿಸಿಕೆ ಸಮಾಜದ ಅಭಿವೃದ್ಧಿ ಬಯಸಿ ಸೇವೆ ಸಲ್ಲಿಸುವವರಿಗೆ ಯಾವತ್ತೂ ನಿವೃತ್ತಿ ಇಲ್ಲ.
ಇವರ ಶ್ಲಾಘನೀಯ ಸೇವೆಗೆ ಸತ್ಯಕಾಮಪ್ಪ ಕ್ರಿಕೆಟ್ ತಂಡದ ವತಿಯಿಂದ ಶುಭ ಕೋರಿಕೆ,
ಸಭೆಯ ಬಿಂದುಗಳಾಗಿ ಆಗಮಿಸಿದ ಹಿರಿಯ ನಿವೃತ್ತ ಪ್ರಿನ್ಸಿಪಲ್ ಶಂಕ್ರಪ್ಪ ಮಾಶಟ್ಟೆ ಭಾಲ್ಕಿ ಖ್ಯಾತ ನಿವೃತ್ತ ಪ್ರಿನ್ಸಿಪಾಲ ಡಾಕ್ಟರ್ ವಿಶ್ವನಾಥ್ ಚಮ್ಮ ಕೊಡ ವಿಟಿಯು ಕಾಲೇಜು, ಕಲಬುರ್ಗಿಯ ವಿಜಯಕುಮಾರ ಕೋಟ್ಟರಗಿ ಮಲ್ಲಪ್ಪ ಕೋಟ್ಟರಗಿ ಸಿದ್ದಪ್ಪ ಕೋಟ್ಟರಗಿ ಶಿವಕುಮಾರ ಕೋಟ್ಟರಗಿ ದತ್ತಾತ್ರೇಯ ಜನವಾಡಕರ್ ಇನ್ನಿತರ ಅನೇಕ ಗಣ್ಯರು ಆಗಮಿಸಿದ್ದರು.
ಬೀದರ ನ ಬಸವೇಶ್ವರ ಶಿಕ್ಷಣ ಮಾಹಾವಿದ್ಯಾಲಯದ (ಬಿ.ಇಡ್.) ಪ್ರಾಧ್ಯಪಕರಾದ ಸಂತೋಷಕುಮಾರ ಸಜ್ಜನ ಅವರು ಸನ್ಮಾನಿಸಿ ಗೌರವಿಸಿದರು ಮತ್ತು
ಸುಪ್ರಸಿದ್ಧ ಶ್ರೀ ಮ್ಯೂಸಿಕಲ್ ಗ್ರೂಪ್ಸ್ ಬೀದರ್ ಸಂಸ್ಥೆಯ ಅಧ್ಯಕ್ಷ ಶ್ರೀ ಶ್ರೀಕಾಂತ್ ಕೊಟಗಿ ವೃಂದದಿಂದ ಖ್ಯಾತ ರಾಜ್ಯ ಕಲಾವಿದ ಅಮಿತ್ ಜನವಾಡಕರ್ ಮತ್ತು ಇತರ ಕಲಾವಿದರಿಂದ ಹಿಂದಿ ಮತ್ತು ಕನ್ನಡ ಚಲನಚಿತ್ರಗಳ ಸುಮಧುರ ಗೀತೆಗಳನ್ನು ಹಾಡಿದರು
ಈ ಸಂದರ್ಭದಲ್ಲಿ ಶ್ರೀಕಾಂತ್ ಹಾಗೂ ಅವರ ಧರ್ಮಪತ್ನಿ ಅಶ್ವಿನಿ ಕೊಟಗಿ ಅಲ್ಲದೆ ವಿಷ್ಣು ಜನವಾಡಕರ್ ರವರಿಂದ ಉತ್ತಮ ಗುಣಮಟ್ಟದ ಕ್ಲಾಸಿಕಲ್ ಹಾಡುಗಳು ಮುಡಿಬಂದವು.
ಸಮಾರಂಭದ ಕೊನೆಯಲ್ಲಿ ಸುರೇಶ್ ಕೊಟಗಿ ರವರಿಂದ ಅತಿಥಿಗಳಿಗೆ ವಂದನಾರ್ಪಣೆ ಸಲ್ಲಿಸಲಾಯಿತು,ಅತಿಥಿಗಳಿಗೆ ಮಷ್ಟಾನ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವರದಿ : ಸಾಗರ ಪಡಸಾಲೆ