ಸಿಂದಗಿ ಸಿಂದಗಿ ಪಟ್ಟಣದಲ್ಲಿ ಇರುವ ಜೆಡಿಎಸ್ ಕಾರ್ಯಾಲಯದಲ್ಲಿ ಜೆಡಿಎಸ್ ಪಕ್ಷದ ನೂತನ ತಾಲೂಕ ಘಟಕ ಅಧ್ಯಕ್ಷರಾಗಿ ಸಂತೋಷ್ ಹರನಾಳ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸನಗೌಡ ಮಾಗಡಿ ತಿಳಿಸಿದ್ದಾರೆ ಈ ವಿಷಯ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿ ಅವರು ಮುದ್ದೇಬಿಹಾಳ ಸಿಂದಗಿ ದೇವರ ಹಿಪ್ಪರಗಿ ಭಾಗದಲ್ಲಿ ಜೆಡಿಎಸ್ ಪಕ್ಷದ ಪರ ಯುವಕರ ಒಲವು ಹೆಚ್ಚಾಗಿದೆ ನೂತನವಾಗಿ ಸಿಂದಗಿ ಹಾಗೂ ಆಲಮೇಲ ಭಾಗದ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಸಿಂದಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಶಿವಾನಂದ್ ಪಾಟೀಲ್ (ಸೋಮಜಾಳ) ಚುನಾವಣೆ ಉಸ್ತವಾರಿ ಆರ್ ಕೆ ಪಾಟೀಲ್ ಆಲಮೇಲ ತಾಲೂಕು ಅಧ್ಯಕ್ಷ ಎಂಎ ಉಸ್ತಾದ್ ಕಾಶಿನಾಥ್ ಮಾಂತೇಶ್ ಹಲವಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
