ರಾಯಚೂರು:ಸಿಂಧನೂರು ತಾಲೂಕಿನ ಗೋನವಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಕೆಲವು ತಿಂಗಳುಗಳ ಹಿಂದೆ ಊರಿನ ಯುವಕರ ಸಹಕಾರದೊಂದಿಗೆ ಮಳೆಗೆ ಬಿದ್ದ ಬಸರಿ ಗಿಡಕ್ಕೆ ಮತ್ತೆ ಮರುಜೀವ ನೀಡಿದ್ದರು ಇಂದು ಈ ಬಸಿರು ಗಿಡ ಚಿಗೊರೊಡೆದಿದ್ದು ಗ್ರಾಮದ ಎಲ್ಲ ಯುವಕರಿಗೆ, ಶಿಕ್ಷಕರಿಗೆ ಹಾಗೂ ವನಸಿರಿ ಫೌಂಡೇಶನ್ ಗೆ ಸಂತೋಷವುಂಟು ಮಾಡಿದೆ ವನಸಿರಿ ಫೌಂಡೇಶನ್ ಕಾರ್ಯಕ್ಕೆ ಗ್ರಾಮದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕರಾದ ಹುಲಗಪ್ಪ ಮಾತನಾಡಿ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ನಮ್ಮ ಶಾಲೆಗೆ ಬಂದು ನಮ್ಮ ಊರಿನ ಯುವಕರಾದ ಸಿದ್ದಗೌಡರು ಹಾಗೂ ಊರಿನ ಅನೇಕ ಯುವಕರ ಹಾಗೂ ಶಾಲೆಯ ವಿದ್ಯಾರ್ಥಿಗಳ ಜೊತೆಗೂಡಿ ಮಳೆಗೆ ಬಿದ್ದ ಈ ಬಸಿರು ಗಿಡಕ್ಕೆ ಜೀವ ನೀಡಿದ್ದರು ಇಂದು ನೋಡಲು ಹಸಿರಿನ ಕಳೆ ಬಂದಿದೆ,ಸುಂದರವಾಗಿ ಕಾಣುತ್ತಿದೆ ಇದಕ್ಕೆಲ್ಲ ಕಾರಣರಾದ ವನಸಿರಿ ಫೌಂಡೇಶನ್ ಅದ್ಯಕ್ಷರಿಗೆ ಶಾಲೆಯ ಮುಖ್ಯ ಗುರುಗಳಿಗೆ ಹಾಗೂ ಊರಿನ ಸಿದ್ದನಗೌಡ ಹಾಗೂ ಯುವಕರಿಗೆ ವಿದ್ಯಾರ್ಥಿಗಳಿಗೆ ನಮ್ಮ ಶಾಲಾ ಆಡಳಿತ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಊರಿನ ಯುವಕರಾದ ಸಿದ್ದನಗೌಡ, ವನಸಿರಿ ಫೌಂಡೇಶನ್ ಸದಸ್ಯರಾದ ಶರಣೆಗೌಡ ಹೇಡಿಗಿನಾಳ,ವೆಂಕಟರಡ್ಡಿ, ಗಿರಿಸ್ವಾಮಿ ಹೇಡಿಗಿನಾಳ, ವಿರುಭದ್ರಯ್ಯ ಸ್ವಾಮಿ ತಿಮ್ಮಾಪುರ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಶಾಲಾ ಮುಖ್ಯೋಪಾದ್ಯಾಯರು, ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.