ಯಾದಗಿರಿ ಶಹಾಪುರ ತಾಲೂಕಿನ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ವತಿಯಿಂದ ದಿನಾಂಕ 24/3/2023 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ವರ್ಗೀಕರಣ ಹಾಗೂ ಒಳಮೀಸಲಾತಿ ಹಂಚಿಕೆ ನಿರ್ಣಯ ಮಾಡಿದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸರ್ಕಾರದ ಈ ನಿರ್ಧಾರದಿಂದ ಭಾರತದ ಸಂವಿಧಾನ ಮತ್ತು ಕಾನೂನನ್ನು ಗಾಳಿಗೆ ತೂರಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸದಾಶಿವ ಆಯೋಗದ ವರದಿಯನ್ನು ಆಧರಿಸಿ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಲಾಗಿದೆ.
ಅವೈಜ್ಞಾನಿಕ ಪ್ರಕ್ರಿಯೆಯನ್ನು ನಮ್ಮ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ನಾಡಿನ ಬಂಜಾರ, ಭೋವಿ, ಕೊರಮ, ಕೊರಚ, ಚಲವಾದಿ ಮತ್ತಿತರ ಸಮುದಾಯಗಳು ಸರ್ಕಾರದ ನಿರ್ಧಾರವನ್ನು ವಿರೋಧಿಸಿವೆ.
ನಮ್ಮ ಬೇಡಿಕೆಗಳು
1) ಭಾರತದ ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ತೀರ್ಪಿಗೆ ವಿರೋಧವಾದ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಒಳಮೀಸಲಾತಿ ಹಂಚಿಕೆ ಮಾಡಿದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ನಾವು ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟ ವತಿಯಿಂದ ಖಂಡಿಸುತ್ತೇವೆ.
ಒಳಮೀಸಲಾತಿ ಅಸಂವಿಧಾನಿಕ ಗುಂಪು ಮೂರು ಹೆಸರಿನಲ್ಲಿ ಬಂಜಾರ, ಭೋವಿ, ಕೊರಮ, ಕೊರಚ, ಚಲವಾದಿ ಸಮುದಾಯಗಳಿಗೆ ಶೇಕಡಾ 4.5 ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದು ಇದು ಕೂಡ ಅವೈಜ್ಞಾನಿಕವಾಗಿದೆ.
ಭಾರತ ಸಂವಿಧಾನ ಮತ್ತು ಸಮುದಾಯಗಳಿಗೆ ಮಹಾ ಅಪರಾಧವಾಗಿದೆ ಎಂದರು.
ನಮ್ಮ ಜನಸಂಖ್ಯೆಯನ್ನು ಪರಿಗಣಿಸಿದೆ ಶೇಕಡ 4.5 ಪ್ರಮಾಣ ಮೀಸಲಾತಿ ಹಂಚಿಕೆ ಮಾಡಿರುವುದು ನಮಗೆ ನೋವು ಉಂಟಾಗಿದೆ ಇದಕ್ಕೆ ನಾವು ವಿರೋಧಿಸುತ್ತೇವೆ.
2) ಕಾನೂನು ಸಚಿವರಾದ ಜೆ.ಸಿ. ಮಾದವಸ್ವಾಮಿಯವರ ನೇತೃತ್ವದಲ್ಲಿ ಸಚಿವ ಸಂಪುಟದ ಉಪಸಮಿತಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಸಮುದಾಯದಗಳ ಕುರಿತು ಪ್ರಾಮಾಣಿಕವಾಗಿ ಅಧ್ಯಾಯನ ಮಾಡಿಲ್ಲ ಎಂದು ಪ್ರತಿಭಟನಕಾರರು ಹೇಳಿದರು.
ಅಭಿವೃದ್ಧಿಯಾಗಿರುವ ಎಡಗೈ, ಬಲಗೈ ಸಂವಿಧಾನದ ಆರ್ಟಿಕಲ್ 341(2) 341(3) ಪ್ರಸ್ತಾಪ ಮುಂತಾದ ಅನಗತ್ಯ ವಿಷಯಗಳ ಮೂಲಕ ವಿಭಜಿಸಲಾಗಿದೆ.
3) ಭಾರತದ ಸಂವಿಧಾನ ಪ್ರಕಾರ ಪರಿಶಿಷ್ಟ ಜಾತಿಗಳ ಪಟ್ಟಿ ಸೇರ್ಪಡೆ ಮತ್ತು ಡಿಲಿಟ್ ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಬರುವುದರಿಂದ ರಾಜ್ಯ ಸರ್ಕಾರವು ಅನಗತ್ಯವಾಗಿ ಹಸ್ತಕ್ಷೇಪ ಮಾಡಿದಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದರು.
4) ನಾಲ್ವಡಿ ಕೃಷ್ಣರಾಜ ಒಡೆಯರ್ ಸಮುದಾಯಗಳು ರೆಸ್ಡ್ ಕಮ್ಯುನಿಟಿ ಲಿಸ್ಟ್ 1935 ಇಂಡಿಯನ್ ಆ್ಯಕ್ಟ್ ಸ್ವಾತಂತ್ರ್ಯ ನಂತರದ 1950 ರ ಮೊದಲ ಪರಿಶಿಷ್ಟ ಜಾತಿಗಳ ಅನುಮೋದನೆ ಪಟ್ಟಿ ಮತ್ತು ಕರ್ನಾಟಕ ಏಕೀಕರಣ.
ಪ್ರಾದೇಶಿಕ ಮಿತಿ ಸಡಿಲಿಕೆ ಆದಾಗಿನಿಂದಲೂ ಸಾಂವಿಧಾನಿಕ ಬಂಜಾರ, ಭೋವಿ, ಕೊರಮ, ಕೊರಚ, ಸಮುದಾಯಗಳು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ನ್ಯಾಯ ಸಮ್ಮತವಾಗಿ ಸ್ಥಾನ ಪಡೆದಿದೆ. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇರುವ ಸಮುದಾಯಗಳನ್ನು ಅಸ್ಥಿರಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಹೀಗಿದ್ದಾಗ್ಯೂ ಕೆಲವರು ಸುಪ್ರೀಂಕೋರ್ಟಿಗೆ ಹಾಕಿದ್ದ ಅರ್ಜಿ ಅಮಾನ್ಯಗೊಂಡಿದೆ. ರಾಷ್ಟೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ 2019 ರಲ್ಲಿ ಬರೆದಿದ್ದ ಪತ್ರಕ್ಕೆ ರಾಜ್ಯ ಸರ್ಕಾರ ಉತ್ತರ ಕೊಟ್ಟು ಧಿಕ್ಕರಿಸುವ ಬದಲಾಗಿ ರಾಜಕೀಯ ಮಾಡಲು ಹೀಗೆ ವಿಳಂಬ ಮಾಡುತ್ತಾ ಬಂದಿತು.
ಜನವರಿಯಲ್ಲಿ ನಮ್ಮ ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟ ವತಿಯಿಂದ ಪ್ರತಿಭಟನೆ ಮಾಡಿದ ಕಾರಣ .
ಮಣಿದ ರಾಜ್ಯ ಸರ್ಕಾರ ಕಳೆದ ಫೆಬ್ರವರಿ 18 ರಂದು ಎನ್.ಸಿ.ಎಸ್.ಸಿ ಪತ್ರ ಬರೆದಿರುವುದು ಸ್ವಾಗತಾರ್ಹ ಎಂದು ಪ್ರತಿಭಟನಕಾರರು ಹೇಳಿದರು. ಬಂಜಾರ, ಭೋವಿ, ಕೊರಮ, ಕೊರಚ, ಚಲವಾದಿ ರನ್ನು ಪಟ್ಟಿಯಿಂದ ಕೈ ಬಿಡುತ್ತಿದ್ದರು. ಎಂಬ ಭಯ ಸೃಷ್ಟಿಸಲಾಗುತ್ತಿದೆ. ಚಾರಿತ್ರಿಕ ಆಧಾರದ ಪ್ರಕಾರ ಸಾಂವಿಧಾನಿಕ ಸ್ಥಾನಮಾನ ಪಡೆದುಕೊಂಡಿರುವ ಈ ಬಂಜಾರ, ಭೋವಿ, ಕೊರಮ, ಕೊರಚ, ಚಲವಾದಿ ಸಮುದಾಯಗಳನ್ನು ಎಸ್.ಸಿ ಪಟ್ಟಿಯಿಂದ ಹೊರ ಹಾಕಲು ಯಾರಿಂದಲೂ ಸಾಧ್ಯವಿಲ್ಲ.
ಕೆಲವರು ನಮ್ಮ ಸಮುದಾಯಗಳಿಗೆ ದೊಡ್ಡ ಸಹಾಯ ಮಾಡಿದ್ದೇವೆ ಎಂಬಂತೆ ಬಿಂಬಿಸಿ ಕೊಂಡು ಹೊರಟ್ಟಿದ್ದಾರೆ. ನಮ್ಮ ಸಮುದಾಯಗಳನ್ನು ದಿಕ್ಕು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸಮುದಾಯಕ್ಕೆ ಅಪಮಾನ ಮಾಡುತ್ತಿರುವವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
5) ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟಗಾರರ ಮೇಲೆ ದಾಖಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರವಿಕುಮಾರ.ಡಿ.ಚವ್ಹಾಣ ಆರ್.ಬಿ.ಕೆ.ಡಿ ಜಿಲ್ಲಾ ಅಧ್ಯಕ್ಷರು,
ಚಂದ್ರಶೇಖರ.ಟಿ.ಜಾಧವ್ ನ್ಯಾಯವಾದಿಗಳು ಎ.ಐ.ಬಿ.ಎಸ್.ಎಸ್. ತಾಲೂಕ ಬಂಜಾರ ಸಮಾಜದ ಅಧ್ಯಕ್ಷರು, ಯಲ್ಲಪ್ಪ ದೊಡ್ಡಮನಿ ಭೋವಿ ಸಮಾಜದ ತಾಲೂಕ ಅಧ್ಯಕ್ಷರು, ಮಾನಸಿಂಗ್.ಬಿ.ಚವ್ಹಾಣ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ಭೀಮರಾಯ.ಬಿ. ಭಜಂತ್ರಿ ಎ.ಕೆ.ಎಂ.ಎಸ್. ರಾಜ್ಯ ಸಮಿತಿ ಮುಖಂಡರು, ಬಸವರಾಜ ಭಜಂತ್ರಿ ಗಂಗನಾಳ, ರಾಮು ರಾಠೋಡ್ ಗೋರಿ ಸೇನಾ ಜಿಲ್ಲಾ ಅಧ್ಯಕ್ಷರು, ಪರಶುರಾಮ ಹಳಿಸಗರ ಭೋವಿ ಸಮಾಜದ ಉಪಾಧ್ಯಕ್ಷರು, ಹಣಮಂತ.ಎಂ.ಭಜಂತ್ರಿ ಕೊಳವ ಸಮಾಜದ ತಾಲೂಕ ಅಧ್ಯಕ್ಷರು, ಚಂದ್ರಕಾಂತ.ಜಿ.ರಾಠೋಡ್ ಬಂಜಾರ ಸಮಾಜದ ಮುಖಂಡರು, ಗೋಪಾಲ ರಾಠೋಡ್ ಗೋರ ಸೇನಾ ತಾಲೂಕ ಅಧ್ಯಕ್ಷರು, ಚಂದ್ರಶೇಖರ ಹೋತಪೇಟ ತಾಲೂಕ ಗೌರವ ಅಧ್ಯಕ್ಷರು, ಹೀರಾಸಿಂಗ್ ಪವ್ಹಾರ ಕಕ್ಕಸಗೇರಾ, ಚನ್ನಪ್ಪ ರಾಠೋಡ ಗಂಗಾನಾಯಕ ತಾಂಡಾ, ಪಂಪಣ್ಣ ರಾಠೋಡ ರಾಮನಾಯಕ ತಾಂಡಾ, ಶಿವರಾಮ ರಾಠೋಡ ಡೊಂಗ್ರಿ ತಾಂಡಾ, ತುಳಜಾರಾಮ ಚವ್ಹಾಣ ಏವೂರ ತಾಂಡಾ, ವಿಠಲ ರಾಠೋಡ ಏವೂರ ತಾಂಡಾ, ರೂಪಸಿಂಗ ಚವ್ಹಾಣ ಕಕ್ಕಸಗೇರಾ ತಾಂಡಾ, ಲಕ್ಷ್ಮಣ ಜಾಧವ್ ಉಕ್ಕಿನಾಳ ತಾಂಡಾ, ಚಂದ್ರು ಚವ್ಹಾಣ ಗಂಗಾನಾಯಕ ತಾಂಡಾ, ಶಿವು ರಾಠೋಡ ಗೋರ ಸೇನಾ ತಾಲೂಕ ಖಜಾಂಚಿ, ರತನಲಾಲ , ಉಮೇಶ ರಾಠೋಡ ಹೋತಪೇಟ ತಾಂಡಾ, ವಿಜಯಕುಮಾರ ರಾಠೋಡ ಚಾಮನಾಳ ತಾಂಡಾ, ಪ್ರಶಾಂತ್ ಚವ್ಹಾಣ ಗ್ರಾಮ ಪಂಚಾಯಿತಿ ಸದಸ್ಯರು, ಹರಿಲಾಲ ರಾಠೋಡ, ಅಂಬಣ್ಣ ರಾಠೋಡ, ವಿಷ್ಣು ರಾಠೋಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ