ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಪ್ರತಿಷ್ಠಿತ ಕರ್ನಾಟಕ ಪ್ರೌಢ ಶಾಲೆಯಲ್ಲಿ ಹತ್ತನೆ ತರಗತಿಯ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು ಕಳೆದ ದಿನಾಂಕ 3/04/2023 ರಂದು ಜರುಗಿದ ಗಣಿತ ವಿಷಯದ ಪರೀಕ್ಷೆಯ ದಿನದಂದು ಅಕ್ರಮವಾಗಿ ನಕಲು ಮಾಡುವುದು ಆಯುಕ್ತರ ಗಮನಕ್ಕೆ ಬಂದಿದ್ದು ಜೊತೆಗೆ ಕೊಠಡಿಗಳ ಕಿಟ ಕಿಗಳಿಂದ ವಿದ್ಯಾರ್ಥಿಗಳಿಗೆ ಪ್ರಚೋದನೆಗೆ ಅವಕಾಶ ಹಾಗೂ ಆಯ್ದ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ಮಾಡಿಕೊಟ್ಟಿರುವ ಆಧಾರದ ಮೇಲೆ ಗಂಭೀರ ದೂರುಗಳನ್ನು ಗಮನಿಸಿ ಒಟ್ಟು ಆರು ಜನ ಕೊಠಡಿ ಮೇಲ್ವಿಚಾರಕರನ್ನು ಅಮಾನತು ಮಾಡಲಾಗಿದೆ ಹೆಸರು ಹೇಳಲು ಇಚ್ಛಿಸದ ಪಾಲಕರೊಬ್ಬರ ಆಪಾದನೆಯ ಪ್ರಕಾರ ಕೇವಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಕಲಿಗೆ ಅವಕಾಶ ಮಾಡಿಕೊಟ್ಟು ಅದು ಎಲ್ಲಾ ವಿದ್ಯಾರ್ಥಿಗಳಿಗೂ ಇಲ್ಲ ಈ ತಾರತಮ್ಯ ಹಲವು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ ಇನ್ನು ಮುಂದೆ ಹಾಗಾಗದಂತೆ ಆಡಳಿತ ಮಂಡಳಿ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು ಎಂಬುದು ಪಾಲಕರ ಹಾಗು ನಾಗರಿಕರ ಅಭಿಪ್ರಾಯವಾಗಿದೆ.
ವರದಿಗಾರ ದಿನೇಶಕುಮಾರ ಅಜಮೇರಾ