ರಾಯಚೂರು//ಏ.09 ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ.)ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ” ನೊಂದ ಮನಸ್ಸುಗಳ ಮಿಲನ”ಕಾರ್ಯಕ್ರಮ ವೇದಮೂರ್ತಿ ಪ್ರಭಯ್ಯ ಸ್ವಾಮಿಗಳ 60ನೇ ವರ್ಷದ ಹುಟ್ಟುಹಬ್ಬದ ಸಮಾರಂಭ ಕಾರ್ಯಕ್ರಮವನ್ನು ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಭಾವನಾತ್ಮಕವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನಕಗಿರಿ ತಾಲೂಕು ಅಡವಿಬಾವಿ ದೊಡ್ಡ ತಾಂಡಾದ ಪ್ರಭಯ್ಯ ಸ್ವಾಮಿ ಹಿರೇಮಠ ರಾಜೂರು ಮಾತನಾಡಿ,ಅನಾಥರ ಪ್ರೀತಿಯ ಅರಮನೆಯಾಗಿದೆ ಸಿಂಧನೂರಿನ ಕಾರುಣ್ಯಆಶ್ರಮ ಈ ಆಶ್ರಮ ನನ್ನ ಸ್ವಂತ ಮನೆಯ ಹಾಗೆ ಇಂದಿನ ದಿನಮಾನಗಳಲ್ಲಿ ದೂರ ದರ್ಶನಗಳ ಮೊಬೈಲ್ ಫೋನ್ ಗಳ ಮೇಲೆ ಇದ್ದಂತಹ ಪ್ರೀತಿ ತಂದೆ ತಾಯಿಗಳ ಮೇಲೆ ಇಲ್ಲದಂತಾಗಿದೆ ಬರೀ ಮೊಬೈಲ್ ಫೋನ್ ಗಳಲ್ಲಿ ಉತ್ತಮ ಸಂದೇಶಗಳನ್ನು ವಿವರಣೆ ಮಾಡುವ ಅದೆಷ್ಟೋ ಜನರು ತಮ್ಮ ತಂದೆ ತಾಯಿಗಳನ್ನು ತಿರಸ್ಕರಿಸುತ್ತಿದ್ದಾರೆ ಇಂತಹ ತಂತ್ರಜ್ಞಾನ ಯುಗದಲ್ಲಿಯೂ ಸಹ ಭಾವನಾತ್ಮಕ ಸಂದೇಶಗಳಿಗೆ ಬೆಲೆ ಇಲ್ಲದಂತಾಗಿದೆ ಕರುಣಾಮಯಿ ಕಾರುಣ್ಯ ಆಶ್ರಮ ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಮನೆಮನೆಯ ಮನಸ್ಸುಗಳಲ್ಲಿದೆ ಕಾರುಣ್ಯ ಆಶ್ರಮದಂತಹ ಸಂಸ್ಥೆಯನ್ನು ಜನಪ್ರತಿನಿಧಿಗಳ ಸಂಬಂಧಿಕರು ಯಾರಾದರೂ ಅವುಗಳನ್ನು ಹುಟ್ಟುಹಾಕಿದ್ದರೆ ಇಷ್ಟೊತ್ತಿಗೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಕೊಡಿಸುತ್ತಿದ್ದರು ಒಬ್ಬ ಸಾಮಾನ್ಯ ಬಡ ಜಂಗಮದಿಂದ ಪ್ರಾರಂಭವಾಗಿರುವ ಈ ಅನಾಥ ಜೀವಿಗಳ ಅಭಿಯಾನಕ್ಕೆ ನಮ್ಮ ಕನಕಗಿರಿ ತಾಲೂಕಿನ ಎಲ್ಲಾ ಜನಾಂಗದ ಸಹಾಯ ಸಹಕಾರವಿರುತ್ತದೆ ಕಾರುಣ್ಯ ಆಶ್ರಮದ ಜೊತೆ ನಾವು ಯಾವಾಗಲೂ ಇರುತ್ತೇವೆ ಎಂದು ಮಾತನಾಡಿದರು ನಂತರ ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು.ಪಾ.ಹಿರೇಮಠ ಮಾತನಾಡಿ ನಮ್ಮ ಪ್ರಭಯ ಸ್ವಾಮಿಗಳು ನಮ್ಮೆಲ್ಲರ ಬಗ್ಗೆ ತಿಳಿದುಕೊಂಡಿರುವ ಅಭಿಮಾನ ಪ್ರೀತಿ ಗೌರವಕ್ಕೆ ನಮ್ಮ ಕಾರುಣ್ಯ ಕುಟುಂಬದ ವತಿಯಿಂದ ವಿಶೇಷ ಅಭಿನಂದನೆಗಳು ಇವರ ಸಮಾಜಪರ ಅನಾಥ ಪರ ಕಾಳಜಿ ನಮ್ಮೆಲ್ಲರಿಗೆ ನೀಡಿರುವ ಮಾರ್ಗದರ್ಶನ ಇಂದು ಈ ಕರುಣಾಮಯಿ ಕಾರುಣ್ಯ ಸಂಸ್ಥೆಯನ್ನು ಹುಟ್ಟಲು ಕಾರಣವಾಗಿದೆ ಇಂತಹ ಹಿರಿಯರ ಶಕ್ತಿ ನಮ್ಮೊಂದಿಗಿದೆ ಇದು ಮಾನವೀಯತೆಗೆ ಹುಟ್ಟುಕೊಂಡಿರುವ ಸಂಸ್ಥೆ ಮತ್ಸರಕ್ಕೆ ಹುಟ್ಟು ಕೊಂಡಿರುವ ಸಂಸ್ಥೆಗಳು ಮರೆಯಾಗಿ ಹೋಗುವುದರಲ್ಲಿ ಯಾವುದೇ ಸಂಶಯಗಳಿಲ್ಲ ಟಿಕೆ ಟಿಪ್ಪಣಿಗಳಿಗೆ ಬೆಲೆ ಕೊಡದೆ ನಮ್ಮ ಆಡಳಿತ ಮಂಡಳಿ ಕರ್ತವ್ಯವೇ ದೇವರು ಎನ್ನುವ ಹಾಗೆ ಸತ್ಯ ಸೇವೆ ಮಾಡುತ್ತಿರುವುದು ನಮ್ಮೆಲ್ಲರಿಗೆ ಸಂತೋಷವಾಗಿದೆ ಎಂದು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ವೇದಮೂರ್ತಿ ಪ್ರಭುಸ್ವಾಮಿ ಹಿರೇಮಠ ರಾಜೂರು ಇವರನ್ನು ಕಾರುಣ್ಯ ಆಶ್ರಮದ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಧ್ಯಕ್ಷರಾದ ವೀರೇಶ ಯಡಿಯೂರು ಮಠ,ಸಲಹಾ ಸಮಿತಿಯ ಮುಖ್ಯಸ್ಥರಾದ ಶಶಿಕಲಾ ಹಿರೇಮಠ,ಸಹನಾ ಹಿರೇಮಠ,ಮಲ್ಲಮ್ಮ ಯಡಿಯೂರುಮಠ,ಬೂದಿ ಬಸವ ಸ್ವಾಮಿ ಗಬ್ಬೂರು,ಶರಣಬಸವ ರಾಜಗುರು,ಶಿವ ಶರಣಯ್ಯ ಸ್ವಾಮಿ ಶಶಿಧರ ಸ್ವಾಮಿ,ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ ಅಂಗಡಿ,ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರಾದ ಅಯ್ಯನಗೌಡ ಆಯನೂರು,ಹೊಸಗೇರಪ್ಪ ಗೊರೆಬಾಳ,ಸಣ್ಣ ಮಲ್ಲಪ್ಪ ಮಾಡಗಿರಿ,ಕಾರುಣ್ಯಆಶ್ರಮದ ಸಿಬ್ಬಂದಿಗಳಾದ ಇಂದುಮತಿ,ಮರಿಯಪ್ಪ ಕರಿಯಪ್ಪ ಹರ್ಷವರ್ಧನ ಶರಣು ಸ್ವಾಮಿ,ಬಸವ ಸ್ವಾಮಿ ಅನೇಕರು ಉಪಸ್ಥಿತರಿದ್ದರು.
ವರದಿ-ವೆಂಕಟೇಶ.H.ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.