ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಾರತದಲ್ಲಿನ ಪ/ಜಾತಿ,ಪ/ಪಂಗಡಕ್ಕಿರುವ ಸಾಂವಿಧಾನಿಕ ಸುರಕ್ಷತೆಗಳು:

ಭಾರತ ಸಂವಿಧಾನದ ಪ್ರಸ್ತಾವಣೆಯಲ್ಲಿ ಇರುವಂತೆ,ಭಾರತದ ಪ್ರಜೆಗಳಾದ ನಾವು,ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ,ಜಾತ್ಯತೀತ,ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಮತ್ತು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ,ವಿಚಾರ, ಅಭಿವ್ಯಕ್ತಿ,ನಂಬಿಕೆ,ಧರ್ಮ ಮತ್ತು ಉಪಾಸನೆ ಸ್ವಾತಂತ್ರ್ಯವನ್ನು,ಸ್ಥಾನಮಾನ ಹಾಗೂ ಅವಕಾಶದ ಸಮಾನತೆ ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿ ಗೌರವ,ರಾಷ್ಟ್ರದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ‘ಭ್ರಾತೃತ್ವ’ ಭಾವನೆ ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಿ ನಮ್ಮ ಸಂವಿಧಾನ ಸಭೆಯಲ್ಲಿ 26ನೇ ನವೆಂಬರ್ 1949ರಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು,ಅಂಗೀಕರಿಸಿ,ಶಾಸನವಾಗಿ ವಿಧಿಸಿಕೊಂಡಿದ್ದೇವೆ ಎಂಬ ಪ್ರಸ್ತಾವನೆಯ ನುಡಿಗಳನ್ನು ಆಲಿಸಿದಾಗ ಹಾಗೂ ಅರ್ಥೈಸಿಕೊಂಡಾಗ ಪ್ರಸ್ತಾವನೆಯ ಪ್ರತಿಯೊಂದು ಪದಗಳು ಬಹಳ ಅರ್ಥಗರ್ಭಿತವಾಗಿ ವಿವರಣೆಯನ್ನು ನೀಡುತ್ತವೆ ಪ್ರಸ್ತಾವನೆಯಲ್ಲಿರುವ ಪದಗಳನ್ನು ವಿವರಿಸುವುದಾದರೆ, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ,ಜಾತ್ಯತೀತ,ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಕಟ್ಟುವುದು ಸಂವಿಧಾನದ ಉದ್ದೇಶ “ಸಾರ್ವಭೌಮ”ರಾಷ್ಟ್ರವೆಂದರೆ ಇದೊಂದು ಸ್ವತಂತ್ರ ರಾಷ್ಟ್ರವಾಗಿದ್ದು ಯಾವುದೇ ಅನ್ಯದೇಶದ ನಿಯಂತ್ರಣಕ್ಕೆ ಒಳಪಟ್ಟಿಲ್ಲ ಈ ಹಿಂದೆ ಭಾರತವು ಬ್ರಿಟಿಷರ ಹಿಡಿತದಲ್ಲಿತ್ತು,ಆದರೆ ಸ್ವಾತಂತ್ರ್ಯ ಬಂದ ನಂತರ ಅದು ಪರಿಪೂರ್ಣವಾಗಿ ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿದೆ. “ಸಮಾಜವಾದಿ” ಎಂಬ ಪದ ಪ್ರಮುಖವಾಗಿ ಸಮಾಜದಲ್ಲಿ ಭಿನ್ನತೆಯನ್ನು ತೋರದೆ ಸಮಾನತೆಯನ್ನು ಹೊಂದುವಂತೆ ಸೂಚಿಸುತ್ತದೆ ಸಂವಿಧಾನದ ಅನುಚ್ಚೇದ 14 ರಿಂದ 18 ರವೆರೆಗೆ ಹಾಗೂ ರಾಜ್ಯ ನಿರ್ದೇಶಕ ತತ್ವಗಳನ್ನು ನೋಡಿದಾಗ ಭಾರತದ ಪ್ರತಿಯೊಬ್ಬ ಸ್ತ್ರೀಯು ಪುರುಷರಿಗೆ ಸಮಾನತೆಯಿಂದ ಹಾಗೂ ಗೌರವದಿಂದ ಜೀವಿಸುವ ಮತ್ತು ಪುರುಷನಷ್ಟೇ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಾತಿನಿದ್ಯಾವನ್ನು ಪಡೆಯುವ ಹಕ್ಕು ಹೊಂದಿರುವುದು ಖಚಿತವಾಗಿದೆ.”ಸಮಾಜವಾದಿ” ಎಂಬುವುದು ಮುಖ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಸಮಾನತೆಯನ್ನು ತೋರಿಸುತ್ತದೆ ಹಾಗೆಯೇ” ಜಾತ್ಯತೀತ”ಎಂದರೆ,ಸರಕಾರವು ಯಾವುದೇ ಜಾತಿ ಅಥವಾ ಧರ್ಮವನ್ನು ರಾಷ್ಟ್ರದ ಧರ್ಮ ಅಥವಾ ಜಾತಿಯನ್ನಾಗಿ ಬಿಂಬಿಸಬಾರದು ಮತ್ತು ಅದನ್ನು ಪಾಲಿಸುವಂತೆ ಒತ್ತಾಯವಾಗಿ ಯಾವುದೇ ವ್ಯಕ್ತಿಯ ಮೇಲೆ ಹೇರಬಾರದು ಎಂಬುದಾಗಿದೆ ಮತ್ತು ಎಲ್ಲಾ ಜಾತಿಯವರಿಗೆ ಸಮಾನವಾಗಿ ಕಾಣಬೇಕು ಹಾಗೂ ಸಮಾನ ಅವಕಾಶಗಳ ಜೊತೆಗೆ ಸಮಾನ ಗೌರವ ನೀಡಬೇಕು ಎಂಬುದಾಗಿದೆ. ಹೀಗೆ ಭಾರತದ ಸಂವಿಧಾನವು ಹಿಂದುಳಿದ ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಶ್ರೇಯೋಭಿರುದ್ಧಿಗಾಗಿ ಹಾಗೂ ಅವುಗಳ ಹಿತರಕ್ಷಣೆಗಾಗಿ ಸಂವಿಧಾನ ಹಲವಾರು ಕ್ಷೇತ್ರಗಳಲ್ಲಿ ಮತ್ತು ಹಲವಾರು ವಿಧದಲ್ಲಿ ರಕ್ಷಣೆಯನ್ನು ಒದಗಿಸುವಂತಹ ಕಲಂಗಳನ್ನು ನೀಡಿ ರಕ್ಷಿಸುತ್ತಿದೆ.

ಭಾರತದಲ್ಲಿ ಪ.ಜಾತಿ/ಪ.ಪಂಗಡಗಳು ಭಾರತದಲ್ಲಿನ ಅತ್ಯಂತ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಗುಂಪುಗಳಾಗಿ ಅಧಿಕೃತವಾಗಿ ಗೊತ್ತುಪಡಿಸಲಾಗಿತ್ತು ಈ ಎರೆಡೂ ಗುಂಪುಗಳನ್ನು ಭಾರತದ ಸಂವಿಧಾನದಲ್ಲಿ ಗುರುತಿಸಲಾಗಿವೆ ಮತ್ತು ಈ ಎರೆಡೂ ಗುಂಪುಗಳು ಅತೀ ಹೇರಳವಾಗಿ ಖಿನ್ನತೆಗೆ,ಶೋಷಣೆಗೆ,ತುಳಿತಕ್ಕೆ ಒಳಗಾದ ವರ್ಗಳೆಂದು ಸಂವಿಧಾನದಲ್ಲಿ ಗುರುತಿಸುವುದರ ಜೊತೆಗೆ ಬ್ರಿಟೀಷರ ಆಳ್ವಿಕೆಯಿಂದಲೂ ಇವು ತುಳಿತಕ್ಕೊಳಗಾದ ವರ್ಗಗಳೆಂದು ಹೇಳಬಹುದಾಗಿದೆ.
ಆಧುನಿಕ ಜಗತ್ತಿನಲ್ಲಿ ಅಥವಾ ಯುಗದಲ್ಲಿ ಪರಿಶಿಷ್ಟ ಜಾತಿಗಳನ್ನು ಕೆಲವೊಂದು ಸಲ ‘ದಲಿತ’ ಎಂದು ಕರೆಯುತ್ತಿದ್ದರು ಅಂದರೆ ದಲಿತ ಇದರ ಅರ್ಥ ‘ಮುರಿದ’/’ಚದುರಿದ’ ಎಂದು ಅರ್ಥೈಸಿಕೊಳ್ಳಲಾಗಿತ್ತು.
ಅರ್ಥವ್ಯವಸ್ಥೆಯ ನಾಯಕ,ಸಮಾಜ ಸುಧಾರಕ,ಮಹಿಳಾ ಹಾಗೂ ಶೋಷಿತ ಸಮುದಾಯಗಳ ಹಿತರಕ್ಷಕ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಾಲಘಟ್ಟದಲ್ಲಿ ದಲಿತ ಎಂದರೆ,ಮಹಾತ್ಮ ಗಾಂಧೀಜಿಯವರ ಪ್ರಕಾರ ‘ಹರಿಜನ’ ಎಂಬುದಾಗಿತ್ತು.‘ಹರಿ’ ಎಂದರೆ ವಿಷ್ಣುವಿನ ವ್ಯಕ್ತಿ/ದೇವರ ಮನುಷ್ಯ ಎಂಬುದಾಗಿತ್ತು ಆದರೆ ಅಂಬೇಡ್ಕರ್ ರವರು ದಲಿತರೆಂದರೇ ಹರಿಜನ ಪದಕ್ಕಿಂತ ಹೆಚ್ಚಿನ ಆಧ್ಯತೆ ಸಿಗಬೇಕಿದೆ ಹಾಗೂ ದಲಿತ ಎಂಬ ಪದವನ್ನು ಹರಿಜನ ಪದಕ್ಕೆ ಎಲ್ಲೂ ಬಳಸದಂತೆ ಸಲಹೆ ನೀಡಿದರು.
ಆಧುನಿಕ ಕಾಲದ ಪ.ಜಾತಿಗಳಿಗೆ ಕೆಳಜಾತಿಗಳ ವಿಕಾಸವು ಸಂಕೀರ್ಣವಾಗಿತ್ತು ಭಾರತದಲ್ಲಿ ಅಂದರೇ ಮೊಘಲ್ ಸಾಮ್ರಾಜ್ಯ ಮತ್ತು ಬ್ರಿಟೀಷ್ ಸರ್ಕಾರದಿಂದ ಸುಮಾರು ೨೦೦ ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು ಅಸ್ಪೃಶ್ಯರನ್ನು ಕೆಳಜಾತಿ ಹಾಗೂ ವರ್ಣಗಳಿಂದ ಕರೆಯಲಾಗಿತ್ತು. ೧೮೫೦ರ ದಶಕದಿಂದಲೂ ಈ ಎರೆಡೂ ಸಮುದಾಯಗಳನ್ನು ಬಹು ಖಿನ್ನತೆಗೆ ಒಳಗಾದ ವರ್ಗಗಳೆಂದು ಉಲ್ಲೇಖಿಸಲಾಗಿದೆ.
೨೦ನೇ ಶತಮಾನದ ಆರಂಭದಲ್ಲಿ ಬ್ರಿಟೀಷ್ ಅಧಿಕಾರಿಗಳಿಂದ ಭಾರತಕ್ಕೆ ಜವಾಬ್ದಾರಿಯುತ ಸ್ವ-ಸರ್ಕಾರದ ಕಾರ್ಯ ಸಾಧ್ಯತೆಯ ಚಟುವಟಿಕೆಯನ್ನು ಕಾಣಲಾಯಿತು ಮಾರ್ಲೆ-ಮಿಂಟೋ ರಿಫಾರ್ಮ್ಸ ವರದಿ,ಮೊಂಟಾಗು ಚೇಮ್ಸ್ ಫೋರ್ಡ ರಿಫಾರ್ಮ್ಸ ವರದಿ ಮತ್ತು ಸೈಮನ್ ಕಮಿಷನ್ ಈ ಹಲವಾರು ಉಪಕ್ರಮಗಳ ಮೂಲಕ ಪ್ರಾಂತೀಯ ಮತ್ತು ಕೇಂದ್ರ ಶಾಸಕಾಂಗಗಳಲ್ಲಿ ಖಿನ್ನತೆಗೆ ಒಳಗಾದ ವರ್ಗಗಳ ಪ್ರಾತಿನಧ್ಯಕ್ಕಾಗಿ ಮೀಸಲಾತಿ ಸ್ಥಾನಗಳನ್ನು ನೀಡಲಾಯಿತು.
೧೯೩೫ ರಲ್ಲಿ ಯುಕೆ ಸಂಸತ್ತು ಭಾರತ ಸರ್ಕಾರದ ಕಾಯ್ದೆ ೧೯೩೫ ಅನ್ನು ಅಂಗೀಕರಿಸಿಕೊಂಡಿತು ಮತ್ತು ಈ ಒಂದು ಭಾರತೀಯ ಪ್ರಾಂತ್ಯಗಳಿಗೆ ಹೆಚ್ಚಿನ ಸ್ವ-ಆಡಳಿತವನ್ನು ನೀಡಲು ರಾಷ್ಟ್ರೀಯ ರಚನೆಯನ್ನು ಸ್ಥಾಪಿಸಲು ವಿನ್ಯಾಸಗೊಳಿಸಲಾಯಿತು ಮತ್ತು ತುಳಿತಕ್ಕೊಳಗಾದ ವರ್ಗಗಳಿಗೆ ಸೀಟುಗಳ ಹಂಚಿಕೆಯ ಮೀಸಲಾತಿಯನ್ನು ಈ ಕಾಯಿದೆಗೆ ಸೇರಿಸಲಾಯಿತು ಇದು ೧೯೩೭ ರಲ್ಲಿ ಜಾರಿಗೆ ಬರುವ ಮೂಲಕ ಕಾಯಿದೆಯು ಪ.ಜಾತಿಗಳು ಎಂಬ ಪದವನ್ನು ಪರಿಚಯಿಸಲಾಯಿತು.
ಸ್ವಾತಂತ್ರ್ಯದ ನಂತರ ಸಂವಿಧಾನ ಸಭೆಯು ಪ.ಜಾತಿ ಮತ್ತು ಪ.ಪಂಗಡಗಳ ಚಾಲ್ತಿಯಲ್ಲಿರುವ ವ್ಯಾಖ್ಯಾನವನ್ನು ಮುಂದುವರಿಸಲಾಯಿತು. ಕಲಂ ೩೪೧ ಮತ್ತು ೩೪೨ರ ಪ್ರಕಾರ ಬಾರತದ ಅಧ್ಯಕ್ಷರು ಮತ್ತು ರಾಜ್ಯಗಳ ರಾಜ್ಯಪಾಲರು ಜಾತಿಗಳು ಮತ್ತು ಬುಡಕಟ್ಟುಗಳ ಸಂಪೂರ್ಣ ಪಟ್ಟಿಯನ್ನು ಸಂವಿಧಾನವು ಪರಿಶಿಷ್ಟ ಜಾತಿಗಳ ಹಾಗೂ ಪರಿಶಿಷ್ಟ ಪಂಗಡಗಳ ಆದೇಶ ೧೯೫೦ ರ ಕ್ರಮವಾಗಿ ಇವೆರೆಡೂ ಆದೇಶಗಳ ಮೂಲಕ ಜಾತಿ ಪಟ್ಟಿಗಳನ್ನು ಮಾಡಲಾಗಿದೆ ಇದಲ್ಲದೇ ಸ್ವತಂತ್ರ ಭಾರತದ ಒಳಗೊಳ್ಳುವಿಕೆಯ ಅನ್ವೇಷಣೆಯು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇದ್ಕರ್ ರವರು ಪ.ಜಾತಿಯ ಸಾಂವಿಧಾನಿಕ ವಕೀಲರಾಗಿ,ಕೆಳಜಾತಿಯ ಸದಸ್ಯರಾಗಿದ್ದರು.
ಹೀಗೆ ಭಾರತದ ಸ್ವಾತಂತ್ರ್ಯದ ನಂತರ ಪ.ಜಾತಿ/ಪ.ಪಂಗಡಗಳಿಗೆ ಮೀಸಲಾತಿ ಸ್ಥಾನಮಾನವನ್ನು ನೀಡುವ ಮೂಲಕ ರಾಜಕೀಯ ಪ್ರಾತಿನಿಧ್ಯ,ಬಡ್ತಿಯಲ್ಲಿ ಆಧ್ಯತೆ, ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಕೋಟಾ, ಉಚಿತ ಶಿಕ್ಷಣ ಹಾಗೂ ಸ್ಟೈಫೆಂಡ್ ಪಧ್ದತಿ, ವಿದ್ಯಾರ್ಥಿ ವೇತನಗಳು,ಬ್ಯಾಂಕಿಂಗ್ ಸೇವೆಗಳು,ವಿವಿಧ ಸರ್ಕಾರಿ ಯೋಜನೆಗಳು, ಕೌಶಲ್ಯ ತರಬೇತಿ ಹೀಗೆ ವಿವಿಧ ಅವಕಾಶಗಳನ್ನು ನೀಡುವಲ್ಲಿ ಸಂವಿಧಾನವು ಸಾಮಾನ್ಯ ಮಹತ್ತರವಾದ ತತ್ವಗಳನ್ನು ಸಂರಕ್ಷಿಸುತ್ತದೆ.

ಪ.ಜಾತಿ/ಪ.ಪಂಗಡಗಳನ್ನು ಸುಧಾರಿಸುವಲ್ಲಿ ಸರ್ಕಾರದ ಕ್ರಮಗಳು:

ರಕ್ಷಾಣಾತ್ಮಕ ಕಾರ್ಯ:
ಸಮಾನತೆಯನ್ನು ಜಾರಿಗೆ ತರಲು ಉಲ್ಲಂಘನೆಯಾಗುವ ಕಾರ್ಯಗಳಿಗೆ ದಂಡ ತೆರುವುದು ಅಸಮಾನತೆಯನ್ನು ತೊರೆದು ಹಾಕಲು ಕಾನೂನು ಕ್ರಮಗಳನ್ನು ಜಾರಿಗೆಗೊಳಿಸುವುದು ಹಾಗೂ ಅಸ್ಪೃಶ್ಯತಾ ಕಾಯಿದೆ ೧೯೫೫ ಪ.ಜಾತಿ/ಪ.ಪಂಗಡ ದೌರ್ಜನ್ಯ ತಡೆ ಕಾಯಿದೆ ೧೯೮೯ ಸಾಮಾಜಿಕ ತಾರತಮ್ಯ ಹಿಂದುಳಿದ ಜಾತಿಗಳ ಮೇಲಿನ ದೌರ್ಜನ್ಯಗಳ ತಡೆ ಕಾಯಿದೆಗಳು ಪ.ಜಾತಿ/ಪ.ಪಂ.ಗಳಿಗೆ ನೀಡಲಾದ ರಕ್ಷಣಾತ್ಮಕ ಕಾರ್ಯವಾಗಿದೆ.

ಸಮರ್ಥನೀಯ ಕಾರ್ಯ:
ಪ.ಜಾತಿ/ಪ.ಪಂ.ಗಳಿಗೆ ಉದ್ಯೋಗದಲ್ಲಿ ಹಂಚಿಕೆ,ನೇಮಕಾತಿ,ಉನ್ನತ ಶಿಕ್ಷಣದ ಪ್ರವೇಷದಲ್ಲಿ ಸಮರ್ಥನೆಯನ್ನು ಒದಗಿಸಿ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಮೀಸಲಾತಿ ಕಾರ್ಯ ನಿರ್ವಹಿಸುತ್ತದೆ.

ಅಭಿವೃಧ್ದಿ ಕಾರ್ಯ:
ಪ.ಜಾತಿ/ಪ.ಪಂ.ಗಳು ಮತ್ತು ಇತರ ಸಮುದಾಯಗಳ ನಡುವಿನ ಸಾಮಾಜಿಕ, ಆರ್ಥಿಕ ಅಂತರವನ್ನು ಕಡಿಮೆ ಮಾಡಲು ಸಂಪನ್ಮೂಲಗಳನ್ನು ಮತ್ತು ಪ್ರಯೋಜನೆಗಳನ್ನು ಒದಗಿಸಲಾಗಿದೆ. ಪ.ಜಾತಿ/ಪ.ಪಂಗಡದ ಕುಟುಂಗಳು ಬಡತನ ರೇಖೆಗಿಂತ ತುಂಬಾ ಕೆಳಗಿರುವ ಕಾರಣದಿಂದ ಪ.ಜಾತಿ/ಪ.ಪಂಗಡ ಸಮುದಾಯಗಳ ಶಾಸನಗಳ ಮೂಲಕ ಅವರ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು ಮತ್ತು ಅವರ ಅನಾರೋಗ್ಯ ಹಾಗೂ ಮರಣ ಪ್ರಮಾಣಗಳಿಂದ ಬಳಲುವುದನ್ನು ಪತ್ತೇ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವುದು ಸಾಂವಿಧಾನಿಕ ಸಂರಕ್ಷಣೆಯಾಗಿದೆ.
ಹೀಗೆ ಇನ್ನಿತರ ಹಲವಾರು ಅಭಿವೃಧ್ದಿ ಕಾರ್ಯಗಳನ್ನು ಮತ್ತು ಕೆಳ ಸಮುದಾಯಗಳ ಮತ್ತು ತುಳಿತಕ್ಕೊಳಗಾದ ಹಾಗೂ ಶೋಷಣೆಗೆ ಒಳಗಾದ ಪ.ವರ್ಗಗಳ ಸಮುದಾಯಗಳಿಗೆ ವಿಶೇಷ ಸ್ಥಾನಮಾನ ಹಾಗೂ ಮೀಸಲಾತಿಯನ್ನು ನೀಡುವಲ್ಲಿ ಸಂವಿಧಾನ ಹಲವಾರು ರಕ್ಷಣಾತ್ಮಕ ಅಂಶಗಳನ್ನು ನೀಡಿದೆ ಇಂತಹ ವಿಶೇಷ ಸ್ಥಾನಮಾನ ಹಾಗೂ ಮೀಸಲಾತಿಯು ಪ.ಜಾತಿ/ಪ.ಪಂ.ಗಳಿಗೆ ವಿವಿಧ ಇಲಾಖೆಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರತಿಯೊಂದು ವಿಭಾಗಕ್ಕೂ ನೀಡಿದೆ ಇಂತಹ ಅವಕಾಶಗಳನ್ನು ಹಿಂದುಳಿದ ಹಾಗೂ ಶೋಷಿತ ಸಮುದಾಯಗಳು ಸದುಪಯೋಗಪಡಿಸಿಕೊಂಡು ಸಮಾಜದ ಮುನ್ನೆಲೆಗೆ ಬಂದು ಸಾಮಾಜಿಕ,ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಬಲರಾಗಿ ಸಂವಿಧಾನದ ರಕ್ಷಣಾತ್ಮಕ ಅಂಶಗಳಿಗೆ ಹಾಗೂ ಸಂವಿಧಾನದಲ್ಲಿ ನೀಡಿದ ಮೀಸಲಾತಿಯನ್ನು ಬಳಸಿಕೊಳ್ಳುವ ಮೂಲಕ ಸಂವಿಧಾನ ಪಿತಾಮಹರಿಗೆ ಮೆರಗು ನೀಡುವಲ್ಲಿ ತುಳಿತಕ್ಕೊಳಗಾದ ಸಮುದಾಯಗಳು ಎದ್ದು ನಿಲ್ಲಬೇಕಿದೆ ಅಂದಾಗ ಮಾತ್ರ ಗೌರವಾನ್ವಿತ ಮಹಾನ್ ನಾಯಕರಿಗೆ ದೇಶದ ಸಂವಿಧಾನ ಪಿತಾಮಹರಿಗೆ ಮತ್ತು ಸರ್ಕಾರಕ್ಕೆ ಗೌರವ ನೀಡಿದಂತಾಗುತ್ತದೆ.

-ಹನುಮಂತ ದಾಸರ ಹೊಗರನಾಳ,
ಯುವ ಬರಹಗಾರರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ