ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ಮಾಡಬೇಕು ಗಲಾಟೆ ಮಾಡಿದರೆ ಕ್ರಮ ಕಟ್ಟಿದ್ದ ಬುತ್ತಿ ಸಾರ್ವಜನಿಕರು ಶಾಂತಿಯುತ ಮತದಾನಕ್ಕಾಗಿ ಸಹಕಾರ ನೀಡಬೇಕು ಎಂದು ಸಿಪಿಐ ಹುಲಗಪ್ಪ ಡಿ ಸೂಚಿಸಿದರು ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಿಮಿತವಾಗಿ ಅಸ್ಸಾಂನ ಪಾರಾ ಮಿಲಿಟರಿ ಸೈನಿಕರೊಂದಿಗೆ
ಮಂಗಳವಾರ ತಾಲೂಕಿನ ಗೋಲಗೇರಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚಾರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು ಗ್ರಾಮದಲ್ಲಿ ಅಹಿತಕರ ಘಟನೆಗಳು ಸಂಭವಿಸಿದಂತೆ ನೋಡಿಕೊಳ್ಳುವುದು ಸಾರ್ವಜನಿಕರ ಆದ್ಯ ಕರ್ತವ್ಯ ಚುನಾವಣೆ ಸಂದರ್ಭದಲ್ಲಿ ಗಲಾಟೆ ಮಾಡಿದವರ ಮೇಲೆ ಕೂಡಲೇ ಎಫ್ಐಆರ್ ಮಾಡಲಾಗುವುದು ಮುಂದೆ ಬರುವ ಚುನಾವಣೆಗಳಲ್ಲೂ ಕೂಡ ಹಂತವರನ್ನು ಚುನಾವಣೆ ಮುಂಚಿತವಾಗಿ ಜೈಲಿಗೆ ಕಳಿಸಲಾಗುತ್ತದೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಆಗಿರಬಹುದು ಅಥವಾ ಅವರ ಸಹಚಾರರು ನಮ್ಮ ಪಕ್ಷಕ್ಕೆ ಮತ ಹಾಕಬೇಕು ಎಂದು ಬೆದರಿಕೆ ಹಾಕಿದರೆ ಕೂಡಲೇ ನಮ್ಮ ಗಮನಕ್ಕೆ ತರಬೇಕು ಮತದಾನ ಶ್ರೇಷ್ಠವಾದದ್ದು ದುಡ್ಡಿಗಾಗಿ ಹೆಂಡಕ್ಕಾಗಿ ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿದರು ಸೇನಾ ಪಡೆಗೆ ಗೋಲಗೇರಿ ಗ್ರಾಮದ ಸಂತೋಷ್ ಪಾಟೀಲ್ (ಡಂಬಳ) ಗೆಳೆಯ ಬಳಗದಿಂದ ಸೈನಿಕರಿಗೆ ವಿಶೇಷವಾಗಿ ಸನ್ಮಾನಿಸಿ ಹೂ ಎಸೆದು ಸ್ವಾಗತಸಿದರು ಈ ಸಂದರ್ಭದಲ್ಲಿ ಸಿಂದಗಿಯ ಸಿಪಿಐ ಹುಲಗಪ್ಪ ಡಿ ಕಲಕೇರಿಯ ಪೊಲೀಸ್ ಠಾಣೆ ಪಿಎಸ್ಐ ವಿಜಯ ಕಾಂಬಳೆ ಎಎಸ್ಐ. ಬಾವಿಕಟ್ಟಿ ಕಲಕೇರಿ ಪೊಲೀಸ್ ಠಾಣೆ ಸರ್ವ ಸಿಬ್ಬಂದಿ ಇದ್ದರು.
ವರದಿ-ಖಾದರಬಾಷ ಮೇಲಿನಮನಿ