ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಿಮ್ಮ ಋಣ ಯಾವತ್ತೂ ಮರೆಯುವದಿಲ್ಲ:ಯಶವಂತರಾಯಗೌಡ ಪಾಟೀಲ

ಇಂಡಿ : ತಾಲೂಕಿನ ಕೂಡುಗಿ,ಹಳಗುಣಕಿ,ಬಬಲಾದ ಗ್ರಾಮದಲ್ಲಿಯ ಸರ್ವ ಸಮಸ್ಯೆಗಳ ನಿವಾರಣೆ ಕುರಿತು ಗ್ರಾಮಸ್ಥರ ಬೇಡಿಕೆಯಂತೆ ಎಲ್ಲವೂ ಈಡೇರಿಸಿದ್ದೇನೆ. ಈಗಾಗಲೇ ಹಿಂದಿನ ಎರಡು ಚುನಾವಣೆಗಳಲ್ಲಿ ಆಶೀರ್ವದಿಸಿ ತಾವುಗಳು ಆಯ್ಕೆಗೊಳಿಸಿದ್ದೀರಿ ನಿಮ್ಮ ಋಣ ಯಾವತ್ತೂ ಮರೆಯುವುದಿಲ್ಲ ಪ್ರಸಕ್ತ ಚುನಾವಣೆಯಲ್ಲಿಯೂ ಆಯ್ಕೆ ಮಾಡುತ್ತೀರ ಅನ್ನುವ ಭರವಸೆ ನನಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಕೂಡಗಿ, ಹಳಗುಣಕಿ, ಬಬಲಾದ ಗ್ರಾಮಗಳಲ್ಲಿ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈ ಬಡವರ, ದೀನ ದಲಿತರ, ಅಲ್ಲದೆ ಸರ್ವ ಸಮುದಾಯಗಳ ಪಕ್ಷವಾಗಿದೆ. ಈಗಾಗಲೇ ಪ್ರತಿಯೊಂದು ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಮೂಲ ಸಮಸ್ಯೆಗಳನ್ನು ನಿವಾರಣೆಗೊಳಿಸಿದ್ದೇನೆ ಎಂದರು.

ಮುಂಬರುವ 2023ರ ಚುನಾವಣೆಯೂ ಕೂಡಾ ಬಹಳ ಮಹತ್ವದ್ದಾಗಿದೆ.ನನಗೆ ಅಲ್ಲದೇ ಈ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದೆ. ಆದರೆ ಪಕ್ಷದ ಪ್ರಣಾಳಿಕೆಯಂತೆ ಪ್ರತಿಯೊಂದು ಗ್ರಾಮಗಳ ಕುಟುಂಬಗಳಿಗೆ 200 ಯೂನಿಟ್‌ ಉಚಿತ ವಿದ್ಯುತ್, 10 ಕೆಜಿ ಅಕ್ಕಿ, ಜೊತೆಗೆ ಪ್ರತಿ ಕುಟುಂಬಗಳ ಮಹಿಳೆಯರ ಪ್ರತಿ ಖಾತೆಗಳಿಗೆ 2000 ರೂ ಉಚಿತವಾಗಿ ಬರುವ ಐದು ವರ್ಷಗಳ ವರೆಗೂ ತಮ್ಮ ತಮ್ಮ ಬ್ಯಾಂಕ್ ಖಾತೆಗಳಿಗೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಅಲ್ಲದೆ ನನ್ನ 10 ವರ್ಷಗಳ ಅಧಿಕಾರದ ಅವಧಿಗಳಲ್ಲಿ ತಮ್ಮ ಗ್ರಾಮಗಳ ಸೇರಿ ಪ್ರತಿಯೊಂದು ಗ್ರಾಮೀಣ ಪ್ರದೇಶಗಳ ರಸ್ತೆಗಳು ಯಾವ ರೀತಿ ಇದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿಯ ರಸ್ತೆಗಳು ಯಾವ ರೀತಿಯಲ್ಲಿ ಇರುವುದನ್ನು ತಾವು ಈಗಾಗಲೇ ಗಮನಿಸಿದ್ದೀರಿ. ತಮ್ಮ ತಮ್ಮ ತಾಲೂಕು ಕೇಂದ್ರವಾಗಿರುವ ಇಂಡಿ ಪಟ್ಟಣಕ್ಕೆ ಅಲೆದಾಡುತ್ತಿದ್ದೀರಿ. ಉದಾಹರಣೆಗೆ ತಮ್ಮ ಹೊಲ, ಕುಟುಂಬಗಳ, ಉತ್ತಾರಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ದೌಡಯಿಸುತ್ತೀರಿ. ಪಟ್ಟಣದ ಒಂದೇ ಊರಿನಡಿಯಲ್ಲಿ ಎಲ್ಲಾ ಸರ್ಕಾರ ಕಚೇರಿಗಳು ಈಗ ಕಾರ್ಯನಿರ್ವಹಿಸುತ್ತಿವೆ. ಆದರೆ ಹಿಂದಿನ ಪರಿಸ್ಥಿತಿಗಿಂತಲೂ ಇಂದಿನ ಪರಿಸ್ಥಿತಿಗೂ ವ್ಯತ್ಯಾಸವಿದೆ. ಇಲ್ಲವೋ ಅನ್ನೋದನ್ನ ನೀವೇ ಗಮನಿಸಬೇಕು ಎಂದರು.

ಅಲ್ಲದೆ ಕೆಲವು ಗ್ರಾಮಗಳಲ್ಲಿ ಬಾಂಧರ ಸೇತುವೆ, ನಿರ್ಮಾಣಗೊಳಿಸಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದೇನೆ. ತಾಲೂಕು ಸತತ ಬರಗಾಲದಿಂದ ತತ್ತರಿಸಿ ಹೋಗಿದ್ದು , ಇನ್ನುಳಿದ ಕೃಷ್ಣ ಕೊಳ್ಳದ ನೀರಾವರಿ ಮೂಲಕ ಈ ಭಾಗದಲ್ಲಿ ಹಸಿರು ಕ್ರಾಂತಿಯನ್ನು ಮಾಡುತ್ತೇನೆ. ನುಡಿದಂತೆ ನಡೆದುಕೊಂಡು ನಿಮ್ಮ ಸೇವಕನಾಗಿ ದುಡಿಯುತೇನೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲನಗೌಡ ಕಲ್ಲನಗೌಡ ಬಿರಾಧಾರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹಾದೇವ ಪೂಜಾರಿ, ಗುರಣ್ಣ ಗೌಡ ಪಾಟೀಲ, ಶಂಕರಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಎಂ ಆರ್ ಪಾಟೀಲ, ಜಟ್ಟೆಪ್ಪ ರವಳಿ, ಇಲಿಯಾಸ್ ಬೋರಮಣಿ, ಧರ್ಮರಾಜ ವಾಲಿಕಾರ, ಸಣ್ಣಪ್ಪ ತಳವಾರ, ರಾಯಪ್ಪ ಹರಳಯ್ಯ, ನೀಲಕಂಠ ರೂಗಿ ಸೇರಿದಂತೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಮಾಜಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.

ವರದಿ:ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ