ರಾಯಚೂರು ಏ.12.ಸಿಂಧನೂರು ವಿಧಾನಸಭಾ ಕ್ಷೇತ್ರದ ರಣರಂಗದಲ್ಲಿ 2023 ಚುನಾವಣೆಯ ರಾಜಕೀಯವಾಗಿ ಅನೇಕ ಬದಲಾವಣೆ ಆಗುತ್ತಿವೆ,ಕೆಲವು ದಿನಗಳ ಹಿಂದೆ ತಾಲೂಕಿನ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಯುವ ಮುಖಂಡರಾದ ಶಿವು ಹೀರೆಮಠ ಜೆಡಿಎಸ್ ಪಕ್ಷ ತೊರೆದರು ಅದೇ ರೀತಿಯಾಗಿ ಇಂದು ತಾಲೂಕಿನ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕೆ.ಕರಿಯಪ್ಪ ಆಯ್ಕೆ ಬೆನ್ನಲ್ಲೆ , ಸಿಂಧನೂರು ತಾಲೂಕಿನ ಜೆಡಿಎಸ್ ನಗರ ಘಟಕ ಸಾಮಾಜಿಕ ಜಾಲತಾಣ ಅಧ್ಯಕ್ಷ ಮಂಜುನಾಥ ಗಾಣಿಗೇರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ನಂತರ ಅವರು ಮಾತನಾಡಿ ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದಿದ್ದೇನೆ ಯುವಜನತೆ ಪಕ್ಷದ ಸಂಘಟನೆ, ಬೆಳೆವಣಿಗೆಯಲ್ಲಿ ಕ್ರಿಯಾಶೀಲಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಪಕ್ಷಾತೀತವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಜೆಡಿಎಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ ಇದು ವರ್ಷಗಳಿಂದ ನಡೆದುಕೊಂಡು ಬಂದಿದೆ.ಅಧಿಕಾರ ಸಿಕ್ಕ ನಂತರ ನಾಯಕರಿಗೆ ಜನರ ಭಾವನೆಗಳಿಗೆ ಮಹತ್ವವಿಲ್ಲ.ಅನುಭವಿ ರಾಜಕಾರಣಿಗಳ ನಡೆಗಳ ಬಗ್ಗೆ ನಾವೇಕೆ ಮೌನವಹಿಸುತ್ತೇವೆ?
ಇದರಿಂದ ಸಮಾಜವೂ ಹಿಂದುಳಿದಿದೆ ಹಿಂದಿನ ನಾಯಕರು ಸಮಾಜದಲ್ಲಿ ಮೌಲ್ಯಗಳಿಗಾಗಿ ಬದುಕಿದ್ದರು ಮತ್ತು ಈಗ ಅದರ ಅರ್ಥ ಬದಲಾಗುತ್ತಿದೆ ಆದರೆ ನನಗೆ ಜೆಡಿಎಸ್ ಪಕ್ಷದಲ್ಲಿ ಯಾವುದೇ ಸ್ಥಾನ-ಮಾನ ನೀಡಿಲಿಲ್ಲ ಹಾಗೂ ನಮ್ಮಂತ ಯುವ ಮುಖಂಡರನ್ನು ಚುನಾವಣೆಗೆ ಮಾತ್ರ ವಿಶೇಷವಾಗಿ ಬಳಸಿಕೊಂಡು,ಗೆದ್ದ ನಂತರ ಯಾವುದೆ ಪಕ್ಷದ ಕೆಲಸಕ್ಕೆ ನನ್ನನ್ನು ನಿರ್ಲಕ್ಷಿದ್ದಾರೆ ಎಂಬ ನೋವಿದೆ ಎಂದು ಕರುನಾಡು ಕಂಡ ಪತ್ರಿಕೆಗೆ ತಿಳಿಸಿದರು,ಯುವ ಮುಖಂಡ ಮಂಜುನಾಥ ಗಾಣಿಗೇರ ತನ್ನದೇ ಆದ ಯುವ ಪಡೆ ಹೊಂದಿದ್ದಾರೆ ಹಾಗೂ ನಮ್ಮ ಕರ್ನಾಟಕ ಸೇನೆ ಎಂಬ ಸಂಘನೆಯ ಸಿಂಧನೂರು ತಾಲೂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿ ಅವರದೇ ಆದ ತಾಲೂಕಿನ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಆದರೆ ಅವರು ಯಾವ ಪಕ್ಷಕ್ಕೆ ಒಲವಾಗಿದೆ ಎಂದು ತಿಳಿಸಲಿಲ್ಲ.
ವರದಿ-ವೆಂಕಟೇಶ.H.ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.