ಯಾದಗಿರಿ: ಶಹಾಪುರ ತಾಲೂಕಿನ ಕೃಷ್ಣ ಪಟ್ಟಣ ಬ್ಯಾಂಕ್ ಅಧ್ಯಕ್ಷ ಬಸವರಾಜ ಹಿರೇಮಠ,ಉಪಾಧ್ಯಕ್ಷರ ಚನ್ನಪ್ಪಗೌಡ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರಾದ ಘೇವರಚಂದ ಜೈನ್,ಮಾಂಗಿಲಾಲ್ ಜೈನ್,ಬಸವರಾಜ ಹೇರುಂಡಿ,ಬಸವರಾಜ ಆನೆಗುಂದಿ, ಮಲ್ಲಿಕಾರ್ಜುನ ಮುದ್ನೂರ ಮೂಡಬೂಳ,ಗೂಳಪ್ಪ ಬಾಳಿ,ಮಲ್ಲಿಕಾರ್ಜುನ ಬುಕಿಷ್ಠಗಾರ,ಶರಣಗೌಡ ಕಟ್ಟಿಮನಿ,ಎಂ.ಡಿ ಹಾಸನ್,ಮನೋಹರ ಅಲಬನೂರ, ಮಲ್ಲಿಕಾರ್ಜುನ ಯಕ್ಷಿಂತಿ,ವಿಮಲಾ ಕಲಬುರ್ಗಿ, ಕಲಾವತಿ ಬೋನರ್ ಮತ್ತು ಬ್ಯಾಂಕಿನ ವ್ಯವಸ್ಥಾಪಕ ಚನ್ನಬಸಪ್ಪ ಬೇನಕಾ,ಗುರುಲಿಂಗಪ್ಪ ಪಾಟೀಲ್, ಭೀಮಸಿಂಗ್ ರಜಪೂತ,ಯಂಕಣ್ಣ ಕರಣಗಿ ಸೇರಿ ಎಲ್ಲರ ಮೇಲೆ ಎಫ಼್.ಐ.ಆರ್ ದಾಖಲಾಗಿದೆ.
ಕೃಷ್ಣ ಪಟ್ಟಣ ಬ್ಯಾಂಕ್ 25 ವರ್ಷದ ಹಿಂದೆ ಆರಂಭವಾಗಿದ್ದು 4086 ಷೇರುದಾರರು ಸದಸ್ಯರಿದ್ದಾರೆ ಯಾದಗಿರಿ ಸಹಾಕಾರಿ ಸಂಘದ ಉಪ ನಿಬಂಧಕರು ವಿಚಾರಣೆ ನಡೆಸಿದ ಬಳಿಕ 2023 ಜುಲೈ 2 ರಂದು ಸರ್ಕಾರಿ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಸಲ್ಲಿಸಿದ ವಿಚಾರಣೆ ವರದಿಯಲ್ಲಿ 6.16 ಕೋಟಿ ಹಾಗೂ ಕೃಷಿ ಭೂಮಿ ಮತ್ತು ಮಾರ್ಟ್ ಗೇಜ್ ಮಾಡಿದೆ ಷೇರುದಾರರು ಹಣವನ್ನು ದುರ್ಬಳಕೆ ಮಾಡಿದ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ಮತ್ತು ಬ್ಯಾಂಕಿನ ವ್ಯವಸ್ಥಾಪಕ ಸಿಬ್ಬಂದಿ ಸೇರಿ ಸಾಲ ಮಂಜೂರು ಮಾಡಿದ್ದಾರೆ ಎಂದು ಬಸವರಾಜ ಅರುಣಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ