ಇಂಡಿ: ಎಲ್ಲ ಧರ್ಮಗಳ ನಡುವೆ ಸೌಹಾರ್ದತೆ ಬೆಳೆಸುವ ಆಶಯದಿಂದ ಮುಸ್ಲಿಂ ಬಾಂಧವರಿಗೆ ಇಫ಼್ತಾರ್ ಕೂಟ ಆಯೋಜಿಸಿದ್ದು ತುಂಬಾ ಸಂತಸ ತಂದಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಅಂಜುಮನ್ ಮೈದಾನದಲ್ಲಿ ಡಾ.ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಆಶ್ರಯದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರಾವಣ ಮಾಸ ಹಿಂದೂಗಳಿಗೆ ಹಾಗೂ ರಂಜಾನ್ ತಿಂಗಳು ಮುಸ್ಲಿಂ ಸಮಾಜದವರಿಗೆ ಪವಿತ್ರವಾದ ದಿನಗಳು.
ಎಲ್ಲರಲ್ಲಿ ಹರಿಯುವ ರಕ್ತ ಒಂದೇ ಎಲ್ಲರಲ್ಲೂ ಸಹೋದರತ್ವ ಭಾವನೆ ಕಂಡು ಬದುಕಬೇಕು ಧರ್ಮ ಮತ್ತು ಆಚರಣೆಗಳು ಭಿನ್ನವಾಗಿ ಇದ್ದರೂ ನಾವೆಲ್ಲಾ ಮನುಷ್ಯರು ಎಂಬ ಸಂದೇಶ ಸಾರಲು ರೋಜಾದಲ್ಲಿ ಇರುವ ಮುಸ್ಲಿಮರನ್ನು ಫೌಂಡೇಶನ್ ವತಿಯಿಂದ ಸತ್ಕರಿಸಿದ್ದು ಶ್ಲಾಘನೀಯ ಎಂದು ಹೇಳಿದರು.
ಧರ್ಮಗುರು ಮೌಲಾನಾ ಜಿಯಾವುಲ್ಲಾ ಹಕ್,ಎಸ್ ಎಂ ಪಾಟೀಲ ಗಣಿಯಾರ,ಫೌಂಡೇಶನ್ ಅಧ್ಯಕ್ಷ ಅಸ್ಪಾಕ್ ಕೋಕಣಿ,ಕಾರ್ಯದರ್ಶಿ ಭಾಷಾ ಬೋರಾಮಣಿ,ರಮ್ಜಾನ್ ವಾಲೀಕಾರ,ಮೈನುದ್ದೀನ್ ಶೇಕ್,ಕಾಲಿಂ ಪಟೇಲ್,ಶಬ್ಬೀರ್ ಮುಲ್ಲಾ,ಹುಸೇನ್ ಮಕಾನದಾರ, ಸಲಾವುದ್ದೀನ್ ಪಠಾಣ್,
ಮಹಮದ್ ಹುಸೇನ್ ಹುಮನಾಬಾದ, ಜಹಾಂಗೀರ್ ಅಗರಖೇಡ,ಇರ್ಫಾನ್ ದೊಡನಿ,ಸಮಾಜಸೇವಕ ಹಸನ ಮುಜಾವರ,ಇಲಾಹಿ ಅರಬ,ಸಲೀಮ್ ಬೆನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪಟ್ಟಣದ ಎಲ್ಲ ಮಸ್ಜಿದ್ ಗಳ ಮೌಜಾನಗಳನ್ನು ಸನ್ಮಾನಿಸಲಾಯಿತು.
ವರದಿ:ಅರವಿಂದ್ ಕಾಂಬಳೆ ಇಂಡಿ