ವಿಜಯನಗರ ಜಿಲ್ಲೆ ಕೊಟ್ಟೂರು,ಏ.14:ಕೊಟ್ಟೂರು ತಾಲೂಕು ಕಛೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರದಂದು ದಲಿತ ಪ್ರಮುಖ ಮುಖಂಡರೊಂದಿಗೆ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಹಿರಿಯ ಮುಖಂಡರು ಹಾಗೂ ಯುವಕರೊಂದಿಗೆ ಆಚರಿಸಲಾಯಿತು.
ಡಾ||ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಎಂ.ಕುಮಾರಸ್ವಾಮಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅಂಬೇಡ್ಕರ್ ಅವರ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂದೇಶ,ತತ್ವ ಸಿದ್ಧಾಂತಗಳನ್ನು ಈಗಿನ ನಮ್ಮ ಸಮುದಾಯದ ಯುವಕರು ಮತ್ತು ನಾವೆಲ್ಲರೂ ಪಾಲಿಸಬೇಕಾಗಿದೆ ಮನುಷ್ಯ ಚಿರಂಜೀವಿಯಾಗಲಾರ. ಆದರೆ,ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ.ಗಿಡಕ್ಕೆ ನೀರು ಎಷ್ಟು ಮುಖ್ಯವೋ ಅದೇ ರೀತಿಯಾಗಿ ಒಂದು ಚಿಂತನೆಯು ಸಮಾಜದಲ್ಲಿ ಭಾವಚಿತ್ರಕ್ಕೆ ಪ್ರಸರಣವಾಗುವುದು ನಮಗೆ ಕೂಡ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಮಂಜುನಾಥ್ ವಕೀಲರು ಮಾತನಾಡಿ ಅಂಬೇಡ್ಕರ್ ಅವರಂತೆ ನಾವು ಬಾಳಬೇಕು ಸಮಾನತೆಯ ಸಂದೇಶವನ್ನು ಸರ್ವ ಜನಾಂಗದವರು ಮೂಡಿಸಿರುವ ವ್ಯಕ್ತಿ,ಭಾರತದ ಕರುಡು ಸಮಿತಿಯ ರಚಿಸಿರುವ ವ್ಯಕ್ತಿ, ಇಂತಹ ಮಹಾನ್ ವ್ಯಕ್ತಿ ನಮ್ಮೆಲ್ಲರನ್ನು ಮನದಲ್ಲಿ ಉಳಿದಿರುವ ಈ ದೇಶದ ಅಪ್ರತಿಮ ಸಂವಿಧಾನದ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರು ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಬದ್ದಿ ಮರಿಸ್ವಾಮಿ ಮಾತನಾಡಿ ಶೋಷಿತ ಹಾಗೂ ದುರ್ಬಲ ವರ್ಗದವರಿಗೆ ಹಕ್ಕುಗಳನ್ನು ನೀಡಿದ ಶ್ರೇಯಸ್ಸು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಸಲ್ಲುತ್ತದೆ. ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ ನೊಂದವರ, ದೀನದಲಿತರ ಬದುಕು ಬೆಳಗಿಸಿದ ಸೂರ್ಯ ಅವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ಕಟ್ಟೋಣ ಎಂದರು.
ತಗ್ಗಿನಕೇರಿ ಕೊಟ್ರೇಶ್ ಮಾತನಾಡಿ ದೇಶದ ಸರ್ವಾಂಗಿಣಿಯ ಅಭಿವೃದ್ಧಿಯು ಸಂವಿಧಾನದ ಅಡಿಯಲ್ಲಿ ಸಾಗುತ್ತದೆ ಈ ನಿಟ್ಟಿನಲ್ಲಿ ಭಾರತದ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಾವೆಲ್ಲಾರೂ ಗೌರವ ನೀಡಿ ಪೂಜಿಸಬೇಕು ಮಹಿಳೆಯರಿಗೆ ಸಮಾನತೆಯ ಸಂವಿಧಾನ ನೀಡಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಛಲವಾದಿ ಹೊಟ್ಟೆ ಅಜ್ಜಪ್ಪ ಮಾತನಾಡಿ ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಜೀವನ,ಧೈಯಗಳು,ಆದರ್ಶವಾಗಬೇಕು ಅವು ಚೇತನಗಳೂ ಆಗಿವೆ ಇದನ್ನು ಯುವ ಪೀಳಿಗೆ ಅರಿತುಕೊಂಡು ಆದರ್ಶ ಪಥದಲ್ಲಿ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ,ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ ನಸ್ರುಲ್ಲಾ,ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ ಶಿಕ್ಷಕ ಅಜ್ಜಪ್ಪ,ತಾಲೂಕು ಆಡಳಿತ ಸಿಬ್ಬಂದಿ ವರ್ಗ,ಆರೋಗ್ಯ ಇಲಾಖೆ ಬದ್ಯ ನಾಯಕ್, ಡಾಕ್ಟರ್.ಕೆಇಬಿ ಚೇತನ್ ಕುಮಾರ್,ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ವೀರಣ್ಣ,ಪಿಎಸ್ಐ ವೆಂಕಟೇಶ್,ಕೊಟ್ಟೂರು ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್ ಸ್ವಾಮಿ,ವಕೀಲರ ಹನುಮಂತಪ್ಪ.ಟಿ ಸುರೇಶ್ . ಆರ್ ಪರಶುರಾಮ್. ಡಿಎಸ್ಎಸ್ ಜಿಲ್ಲಾಧ್ಯಕ್ಷ ಬದ್ದಿ ದುರ್ಗೇಶ್. ಕುಬೇರಪ್ಪ. ಆರ್ ಅಂಬರೀಶ್. ತಿಮ್ಲಾಪುರ ಮೈಲಪ್ಪ. ಗ್ಯಾಸ್ ಮಂಜುನಾಥ.ಕೊಲ್ಲಾರಿ.ಬಿ ಶಿವು. ವಿವಿಧ ಇಲಾಖೆಯ ಅಧಿಕಾರಿ ವರ್ಗದವರಿದ್ದರು.