ಬೀದರ್: ಆರೂಷೀ ಪ್ರೀ ಸ್ಕೂಲ್ ಅಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತ್ಯುತ್ಸವ ಜರುಗಿತು.
ಸಂಸ್ಥೆಯ ಮುಖ್ಯಸ್ಥರಾದ ಹೆಮಲತಾ ಕಂದಗೂಳೆ ಅವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಕ್ಕಳಿಗೆ ಸಿಹಿ ಹಂಚಿ ಮತ್ತು ಶುಭ ಕೋರಿ ಮಾತನಾಡಿದ ಅವರು,
ಸರ್ವರಿಗೂ ಸಮಾನತೆ ನೀಡಿದ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನ ಪಾಲಿಗೆ ರಕ್ಷಾ
ಕವಚವಾಗಿದೆ ಎಂದು ಹೇಳಿದರು. ಸಂವಿಧಾನ ದೇಶದ ಸರ್ವಧರ್ಮ ಗ್ರಂಥಗಳಿಗಿಂತಲೂ ಶ್ರೇಷ್ಠ ಮತ್ತು ಪವಿತ್ರವಾಗಿದೆ. ಬಾಬಾಸಾಹೇಬರ ಮೌಲಿಕ ಚಿಂತನೆಯಿಂದ ದೇಶದಲ್ಲಿ ಅತ್ಯಂತ ಉತ್ತಮ ಸಂವಿಧಾನ ರಚನೆಯಾಗಿದೆ. ಕಾನೂನು ಅಧ್ಯಯನದಲ್ಲಿ ಸಂವಿಧಾನ ವಿಷಯ ಪ್ರಮುಖವಾಗಿದ್ದು, ಅದರಂತೆ ನಾವೆಲ್ಲರೂ ನಡೆದುಕೊಳ್ಳಬೇಕು ಮತ್ತು ಸಂವಿಧಾನ ಪಾಲನೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರಾದ ಚಂದ್ರಕಾಂತ ಜಬಾಡೆ, ಅಂಬಾದಾಸ ದೊಡ್ಡಿ, ಗೋಪಾಲ್ ಕುಲ್ಕರ್ಣಿ, ಕವಿತಾ, ಮೊನಿಕಾ, ಪ್ರತಿಭಾ ಹೂಗಾರ್, ರೇಣುಕಾ ಜಟ್ಲಾ, ಹಾಗೂ ಅಂಜಲಿ ಜಟ್ಲಾ ಉಪಸ್ಥಿತರಿದ್ದರು.
ವರದಿ: ಸಾಗರ ಪಡಸಾಲೆ