ಇಂಡಿ: ಪಟ್ಟಣದ ದಾದಾಗೌಡ ಬಾಬಾಗೌಡ ಪಾಟೀಲ ಅವರ ಮೊಮ್ಮಗ ಪ್ರಭುಗೌಡ ಸಾತುಗೌಡ ಪಾಟೀಲ ತಮ್ಮ ಚಿಕ್ಕಪ್ಪ ಹಾಗೂ ಪುರಸಭೆ ಸದಸ್ಯ ಭೀಮನಗೌಡ ದಾದಾಗೌಡ ಸಮ್ಮುಖದಲ್ಲಿ ನೂರಾರು ಗೆಳೆಯರೊಂದಿಗೆ ಇಂಡಿ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ನೈತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಭುಗೌಡ ಪಾಟೀಲ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ, ೧೦ ವರ್ಷದ ಅಧಿಕಾರವಧಿಯಲ್ಲಿ ಕೈಗೊಂಡ ಜನಪರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಈ ಪಕ್ಷ ಸೇರ್ಪಡೆಯಾಗಿದ್ದೇನೆ.
ಈ ಹಿಂದೆ ನಮ್ಮ ಅಜ್ಜ ದಾದಾಗೌಡ ಪಾಟೀಲರು ರಾಜಕೀಯ ಕ್ಷೇತ್ರದ ಅನೇಕ ಗಟಾನುಗಟ್ಟಿ ನಾಯಕರನ್ನು ಬೆಳೆಸಿದ ಕೀರ್ತಿ ದಾದಾಗೌಡ ಮನೇತನಕ್ಕೆ ಸಲ್ಲುತ್ತದೆ. ಇಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಹೃದಯವಂತರಿದ್ದಾರೆ. ಶಾಸಕ ಪಾಟೀಲರಿಗೆ ಬೆಂಬಲಿಸಿದರೆ ಒಳ್ಳೇತನಕ್ಕೆ ನ್ಯಾಯ,ನೀತಿ ಧರ್ಮಕ್ಕೆ ನ್ಯಾಯ ನೀಡಿದಂತಾಗುತ್ತದೆ. ಯಶವಂತರಾಯಗೌಡ ಪಾಟೀಲ ಒಬ್ಬ ದೂರದೃಷ್ಠಿ ರಾಜಕಾರಣ ನಾನು ಚಿಕ್ಕವನಿದ್ದಾಗ ನಮ್ಮ ಅಜ್ಜ ಬಡವರ ದೀನದುರ್ಬಲರಿಗೆ ಸಹಾಯ ಮಾಡು ಹಾಗೂ ಒಳ್ಳೇಯವರ ಪರವಾಗಿ ಸದಾ ಧ್ವನಿಯಾಗಿ ನಿಲ್ಲು ಎಂಬ ಸಂದೇಶ ನೀಡಿರುವುದರಿಂದ ಅವರ ವಂಶದ ಕುಡಿಯಾಗಿ ಮಾತುಗಳು ಪಾಲನೆ ಮಾಡುತ್ತಿದ್ದಾನೆ.
ಈ ಹಿಂದೆ ಇಂಡಿ ಕಿಂಚಿತ್ತೂ ಸುಧಾರಣೆ ಕಂಡಿರಲ್ಲಿಲ್ಲ ರಸ್ತೆ, ವಿದ್ಯುತ್,ರಸ್ತೆಗಳ ಅಗಲೀಕರಣ, ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ, ಲಿಂಬೆ ಅಭಿವೃದ್ದಿ ಮಂಡಳಿ, ಕೃಷಿ ವಿಶ್ವವಿಧ್ಯಾಲಯ, ಹ್ಯಾಲಿಪ್ಯಾಡ್ ನಿರ್ಮಾಣ, ಶಿಕ್ಷಣ ಸಂಸ್ಥೆಗಳು, ಬಾಂಧಾರ ,ಬ್ರೀಜ್, ಮೇಗಾಮಾರುಕಟ್ಟೆ, ಪಟ್ಟಣದಲ್ಲಿ ಕುಡಿಯುವ ನೀರಿ ತಾತ್ಸಾರ ಕಂಡು ಬಂದಾಗ ೨೪*೦೭ ನೀರಿನ ಯೋಜನೆ ತಂದು ದಿಣ ವಾರಿಸಿದ್ದಾರೆ ಇವರ ಕಾರ್ಯಗಳು ಸುವರ್ಣಾಕ್ಷರಗಳಿಂದ ಬರೆಯುವಂತೆ ಮಾಡಿದ್ದಾರೆ. ಸರ್ವ ಸಮುದಾಯವನ್ನು ಗೌರವದಿಂದ ಕಾಣುವ ನಾಯಕ ಜಾತಿ,ಸಮುದಾಯಗಳಿಗಿಂತ ಮನುಷ್ಯತ್ವ ಮಾನವೀಯ ಮೌಲ್ಯಗಳು ಮುಖ್ಯ ಈ ಎಲ್ಲಾ ಗುಣಗಳು ಶಾಸಕರಲ್ಲಿವೆ ಆದ್ದರಿಂದ ಸದಾ ಇವರ ಬೆಂಬಲಿಗರಾಗಿ ಇರತ್ತೇವೆ ಎಂದರು.
ನಾಗರಾಜ ಪಾಟೀಲ, ಅಪ್ಪು ಮಾನೆ, ಮಹಾದೇವ ಬಾರಿಕಾಯಿ ,ಸಂತೋಷ ಅಳ್ಳಗಿ ,ಸಾಯಿಬಾಬಾ ಅವುಟಿ, ಸಾತು ತೆನ್ನೇಳ್ಳಿ, ಜಗದೀಶ ಮೇತ್ರಿ, ಪರಶು ಕಮತಕರ್, ಗಣೇಶ ಮಾನೆ, ಪ್ರೇಮ ಪೋದ್ದಾರ, ರಾಗು ಗೌಳಿ, ಆನಂದ ದೇವರ, ಗುರುವಡವಡಗಿ, ಚಂದ್ರಶೇಖರ ಕ್ಷತ್ರಿ, ಶಂಕರ ಕೋಳೇಕರ್, ಕಾಶಿನಾಥ ಹಳಗುಣಕಿ, ಶಶೀಕಾಂತ ಕೊಳೇಕರ್ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ವರದಿ-ಅರವಿಂದ್ ಕಾಂಬಳೆ ಇಂಡಿ