ಇಂಡಿ :ರಾಜ್ಯದಲ್ಲಿ ಬಿಜೆಪಿ ಗೆಲ್ಲಲ್ಲು ಹೊಸ ಪ್ರಯೋಗ ಹಾಗೂ ಹೊಸ ಬದಲಾವಣೆಯೊಂದಿಗೆ ಚುನಾವಣೆ ಅಖಾಡಕ್ಕೆ ಧುಮಕಿದ್ದು ಬಿಜೆಪಿ 140 ರಿಂದ 150 ಸ್ಥಾನವನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಬಿ.ಎಸ್.ಪಾಟೀಲ ಹಿರೇಬೇವನೂರ ಹೇಳಿದರು.
ತಾಲೂಕಿನ ಹಿರೇಬೇವನೂರ, ಸಾತಲಗಾಂವ್, ಲಾಳಸಂಗಿ, ಕೆಸರಳ ತಾಂಡಾ ಗ್ರಾಮದಲ್ಲಿ ಚುನಾವಣೆ ಪ್ರಚಾರ ನಿಮಿತ್ಯ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರಕಾರದಿಂದ ಅಭಿವೃದ್ದಿ
ಅಭಿವೃದ್ಧಿಯೇ ಬಿಜೆಪಿ ಸರಕಾರದ ಮೂಲಮಂತ್ರ. ಡಬಲ್ ಎಂಜಿನ ಸರಕಾರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.
ಹಿರಿಯ ಮುಖಂಡ ಪ್ರೊ ಸಿದ್ದಲಿಂಗ ಹಂಜಗಿ ಮಾತನಾಡಿ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ದೇಶದ ಹೆಸರು ಇಂದು ಪ್ರಪಂಚದಲ್ಲಿ ಎಲ್ಲರೂ ಮಾತನಾಡುವಂತೆ ಆಗಿದೆ. ಕೇಂದ್ರ ಸರಕಾರ ಬಡವರಿಗೆ, ದೀನ ದಲಿತರಿಗೆ, ರೈತರಿಗೆ, ಮಹಿಳೆಯರಿಗೆ, ಯುವಕರಿಗೆ ಅನುಕೂಲವಾಗುವಂತೆ ಅನೇಕ ಅಭಿವೃದ್ದಿ ಯೋಜನೆ ಜಾರಿಗೊಳಿಸಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರ ನೇತೃತ್ವದಲ್ಲಿ ರಾಜ್ಯ ಸರಕಾರ ಮೂಲ ಸೌಕರ್ಯ ಸೇರಿದಂತೆ ಅನೇಕ ಕಾಮಗಾರಿಗಳನ್ನು ಯಶಸ್ವಿಗೊಳಿಸಿದೆ ಎಂದರು.
ಅಭ್ಯರ್ಥಿ ಕಾಸುಗೌಡ ಬಿರಾದಾರ ಮಾತನಾಡಿ, ಕಾರ್ಯಕರ್ತರೆಲ್ಲರೂ ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ದಿ ಕೆಲಸಗಳನ್ನು ಜನರಿಗೆ ಮನದಟ್ಟಾಗುವಂತೆ ತಿಳಿಸಬೇಕು. ಈ ಬಾರಿ ಅಭಿವೃದ್ದಿ ಆಧಾರದ ಮೇಲೆ ಜಯಿಸೋಣ ಎಂದರು.
ಚೆನ್ನುಗೌಡ ಪಾಟೀಲ,ಅಶೋಕಗೌಡ ಪಾಟೀಲ,ಬತ್ತು ಸಾವಕಾರ,ರಾಮಸಿಂಗ ಕನ್ನೊಳ್ಳಿ, ಸೋಮು ದೇವರ,ವಿಶ್ವನಾಥ ಚವ್ಹಾಣ,ಮಂಜು ಜಮಾದಾರ, ಮಲ್ಲು ಮೇತ್ರಿ ಉಪಸ್ಥಿತರಿದ್ದರು.
ವರದಿ. ಅರವಿಂದ್ ಕಾಂಬಳೆ ಇಂಡಿ